ದೀಪದ ಬೆಳಕಿಗೆ ಕಂಗೆಟ್ಟೆ

ದೀಪದ ಬೆಳಕಿಗೆ ಕಂಗೆಟ್ಟೆ

ಶೀರ್ಷಿಕೆ ನೋಡಿದಾಕ್ಷಣ ಜಗಮಗಿಸುವ ಬೆಳಕೆಂದು ಊಹಿಸಿರಬಹುದಲ್ಲವೇ? ಅಥವಾ ಚಿತ್ರಕ್ಕೂ ಶೀರ್ಷಿಕೆಗೂ ಎಂತಹ ಸಂಬಂಧ ಎಂದಿರಬಹುದು. ಸಂಬಂಧ ಹೇಗೆ ಕಲ್ಪಿಸಿದ್ದೇನೆ ನೋಡಿ. ನಮ್ಮೂರಿನ ಸಂತೋಷನ ಮನೆಯಪತಂಗ ಗೋಡೆಯ ಮೇಲೆ ಕುಳಿತ ಪತಂಗವನ್ನು ಕಂಡಾಗ ಇದು ಏಕೆ ಹೀಗೆ ಕುಳಿತಿರುತ್ತದೆ. ಹಗಲಿನಲ್ಲಿ ಇಷ್ಟೊಂದು ದೊಡ್ಡ ಚಿಟ್ಟೆ ಕಾಣುವುದಿಲ್ಲ ಎಂಬ ಪ್ರಶ್ನೆಗೆ ಶಾಲೆಗೆ ಹೋಗುವಾಗ ಓದಿದ ನೆನಪನ್ನು ಬಿಚ್ಚಿಟ್ಟಿದ್ದು ಹೀಗೆ. ಇದು ಚಿಟ್ಟೆ ಅಲ್ಲ. ಪತಂಗ, ಇದಕ್ಕೆ ಹಗಲು ಹೊತ್ತಿನಲ್ಲಿ ಕಣ್ಣು ಕಾಣುವುದಿಲ್ಲ. ಹಾಗಾಗಿ ಅಪ್ಪಿ ತಪ್ಪಿ ರಾತ್ರಿ ಬೆಳಕಿಗೆ ಬಂದು ಬಿಟ್ಟರೆ ಹೀಗೆ ಮಂಕು ಹಿಡಿದಂತೆ ಕುಳಿತುಬಿಡುತ್ತದೆ. ಎಂದು ನನ್ನ ಪಾಂಡಿತ್ಯ ಬಿಗಿದೆ. ಸರಿ ಇದ್ದರೆ ಸರಿ ಅನ್ನಿ ಇಲ್ಲದಿದ್ದರೆ ತಿದ್ದಿ ಹೇಳಿ. ಇದರ ದೇಹದ ಮುಖ್ಯ ಭಾಗ ಚಿಟ್ಟೆಗಿಂತಲೂ ದಪ್ಪನಾಗಿರುತ್ತದೆ. ಮೀಸೆ ಸಹ ಉದ್ದ ಕಡ್ಡಿಯಂತಿರದೇ ಬಾಚಣಿಕೆ ಅಲಗಿಂತೆ ಇರುತ್ತೆ ಎಂದೆ. ಸರೀನಾ?

Rating
No votes yet