ಇವರದ್ಯಾವುದು ಧರ್ಮ?

ಇವರದ್ಯಾವುದು ಧರ್ಮ?

ಬರಹ

ಬೆಂಗಳೂರಿನ ಕಾರ್ಲ್ಟನ್ ಟಾವರ್ ನಲ್ಲಿ ಅಗ್ನಿ ದುರಂತ. ಇಂಥ ಘಟನೆಗಳು ನಮ್ಮ ದೇಶದಲ್ಲಿ ಸರ್ವೇಸಾಮಾನ್ಯ. ಸರಕಾರವು ಎಷ್ಟೆಲ್ಲ ಮಾರ್ಗದರ್ಶಿಗಳನ್ನು ಕಡ್ಡಾಯಗೊಳಿಸಿದ್ದರೂ ’ಅಗ್ನಿ ಸುರಕ್ಷೆಯ’ ಬಗ್ಗೆ ಹೆಚ್ಚಿನ ಸಂಕೀರ್ಣಗಳು, ಕಟ್ಟಡಗಳು, ಮಾಲ್ ಗಳು, ಸಿನೆಮಾ ಗೃಹಗಳು ಇತ್ಯಾದಿ ಜಾಗ್ರತೆ ವಹಿಸುವುದೇ ಇಲ್ಲ. ಆದರೆ ಈ ಘಟನೆಯ ಅತ್ಯಂತ ಹೃದ್ಯವಿದ್ರಾವಕ ನೋಟವನ್ನು ಟಿವಿ ೯, ಬಾರಿ ಬಾರಿ ತೋರಿಸುತ್ತಿದ್ದರು. ಕಟ್ಟಡದ ಆರನೇ-ಏಳನೇ ಮಹಡಿಯಿಂದ ಕೆಳಗೆ ಜಿಗಿದು ಜೀವವನ್ನುಳಿಸಿಕೊಳ್ಳುವ ಪ್ರಯತ್ನದಲ್ಲಿ, ತಮ್ಮ ಜೀವವನ್ನು ಕಳೆದುಕೊಂಡದ್ದನ್ನು ನೋಡಿದವರೆಲ್ಲರ ಕಣ್ಣು ಖಂಡಿತ ತೋಯ್ದಿರಬೇಕು.

ಇಂತಹ ಭೀಕರ ಘಟನೆ ನಡೆದಾಗಲೂ ಕೂಡ, ಇದೇ ಕಟ್ಟಡದಲ್ಲಿದ್ದ ಒಂದು ಇಲೆಕ್ಟ್ರಾನಿಕ್ ಅಂಗಡಿಗೆ ನುಗ್ಗಿದ ಕೆಲವು ಹೀನರು, ’ಜನರನ್ನು ಉಳಿಸುವ’ ನೆಪದಲ್ಲಿ ಅಂಗಡಿಯಲ್ಲಿದ್ದ ಮೋಬಾಯಿಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ಕದ್ದೊಯ್ದ ಸಂಗತಿ ಗೊತ್ತಾಯ್ತು.

ಎಂತಹ ಭೀಭತ್ಸವಲ್ಲವೇ ಇದು? ಒಂದು ಕಡೆ ಸಾಟಿ ಮನುಷ್ಯರ ಜೀವ ಹೋಗುತ್ತಿರುವ ಘಟನೆ ನಡೆಯುತ್ತಿದ್ದರೆ, ಅಲ್ಲೇ ಇದ್ದ ಅಂಗಡಿಯಲ್ಲಿಂದ ವಸ್ತುಗಳನ್ನು ಕದಿಯುವಂತಹ ಜನರೂ ಇದ್ದಾರಾ?