ಎಲ್ಲಿಂದೆಲ್ಲಿಗೆ ಲಿಂಕು! (ಎತ್ತಣಿಂದೆತ್ತ ಸಂಬಂಧವಯ್ಯಾ!)

ಎಲ್ಲಿಂದೆಲ್ಲಿಗೆ ಲಿಂಕು! (ಎತ್ತಣಿಂದೆತ್ತ ಸಂಬಂಧವಯ್ಯಾ!)

ಬರಹ

  -೧-
  ಜಡಾನಾಮವಿವೇಕಾನಾಮಶೂರಾಣಾಮಪಿ ಪ್ರಭೋ
  ಭಾಗ್ಯಭೋಜ್ಯಾನಿ ರಾಜ್ಯಾನಿ ಸಂತ್ಯನೀತಿಮತಾಮಪಿ
  (ವಿಷ್ಣುಪುರಾಣ)
  ಸೋಮಾರಿಗಳು, ಅವಿವೇಕಿಗಳು, ಹೇಡಿಗಳು, ನೀತಿಯಿಲ್ಲದವರು ತಮ್ಮ ಅದೃಷ್ಟದಿಂದ ರಾಜ್ಯಾಡಳಿತವನ್ನು ಪಡೆಯುತ್ತಾರೆ.
  -೨-
  * ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷ ಕಾಲ..
  * ಜಾಲಿಯ ಮರದಂತೆ, ಧರೆಯೊಳು ದುರ್ಜನರು ಜಾಲಿಯ ಮರದಂತೆ..
  * ಧರ್ಮಕ್ಕೆ ಬಾರದೀ ಕಾಲ, ಪಾಪಕರ್ಮಕ್ಕೆ ಮನಸೋಲೋದೀ ಕಲಿಕಾಲ..
  * ಮನುಜಶರೀರವಿದೇನು ಸುಖ, ಇದು ನೆನೆದರೆ ಘೋರವಿದೇನು ಸುಖ..
  * ಆರೇನು ಮಾಡುವರು ಅವನಿಯೊಳಗೆ, ಪೂರ್ವಜನ್ಮದ ಕರ್ಮ ಹಣೆಯಲ್ಲಿ ಬರೆದುದಕೆ..
    (ಪುರಂದರ ದಾಸರು)
  -೩-
  ಅರೆದಾರು ಮರೆದಾರು ಉರಿದಾರು ಜಗದೊಳಗೆ
  ಕುರಿಗಳಾ ತಲೆಯ ತರಿದಂತೆ ರಕ್ತವನು
  ಸುರಿದಾರು ನೋಡ ಸರ್ವಜ್ಞ.
  -೪-
  ಭ್ರಷ್ಟರ ಆಡಳಿತ. ವಿದ್ಯುತ್ ಇಲ್ಲ, ನೀರಿಲ್ಲ, ಪದಾರ್ಥಗಳ ಬೆಲೆ ಮುಟ್ಟುವಂತಿಲ್ಲ.
  ಉಗ್ರರ ಉಪಟಳ. ಜನರ ಜೀವಕ್ಕೆ ರಕ್ಷಣೆಯೇ ಇಲ್ಲ.
  -೫-
  ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ
  ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ
  ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ
  ಇಲ್ಲೀಗ ವಿದ್ಯುತ್ತೇ ಮಾಯೆ ಕಾಣಾ ಆನಂದರಾಮೇಶ್ವರಾ!