ದರೋಡೆಕೋರನ ಧರ್ಮ ?

ದರೋಡೆಕೋರನ ಧರ್ಮ ?

ಇದೆಲ್ಲ  ನಿಮಗೆ ಗೊತ್ತು.  ವಾಲ್ಮೀಕಿ ಮೊದಲು ದರೋಡೆಕೋರನಿದ್ದದ್ದು, ಒಂದ್ಸಲ  ನಾರದರು ಸಿಕ್ಕು 'ನೀನು ಮಾಡುತ್ತ ಇರುವದು ಹಿಂಸೆ, ಪಾಪ. ನೀನು ಇದನ್ನ ನಿನ್ನ ತಾಯ್ತಂದೆ , ಹೆಂಡತಿ ಮಕ್ಕಳಿಗಾಗಿ ಮಾಡ್ತಾ ಇದ್ದೀಯಲ್ಲ ,  ಅವರು ನಿನ್ನ ಗಳಿಕೆಯಲ್ಲಿ ಪಾಲು  ತಕೊಳ್ಳುವ ಹಾಗೆ ನಿನ್ನ ಪಾಪದಲ್ಲೂ ಪಾಲು ತೆಗೆದುಕೊಳ್ಳುವರೇ?'   ಅಂತ ಕೇಳಿದಾಗ,  ಅವನು ಹೋಗಿ ಅವರನ್ನು ಕೇಳಿದಾಗ, ಅವರು 'ಇಲ್ಲ ; ನಮ್ಮನ್ನು ಸಾಕೋದು ನಿನ್ನ ಕರ್ತವ್ಯ' ಅಂತ ಹೇಳಿದ್ದು ಕೇಳಿ  ಅವನಿಗೆ ಒಂತರಾ ಜ್ಞಾನೋದಯ ಆದದ್ದು , ಕೊಲೆಸುಲಿಗೆ ಬಿಟ್ಟು   ತಪಸ್ಸಿಗೆ ಕೂತಿದ್ದು . 

ಆದರೆ ಕತೆಯ ಈ ಭಾಗ ನನಗೆ ಗೊತ್ತಿರ್ಲಿಲ್ಲ, ಎಲ್ಲೂ ಕೇಳಿರ್ಲಿಲ್ಲ. - ನಾರದರು ಆಗ ಒಂದು ಬಟ್ಟೆಯನ್ನು ಕೊಟ್ಟು , ನಿನ್ನ ಪಾಪಗಳೆಲ್ಲ ಕಳೆದುಹೋದಾಗ ಈ ಬಟ್ಟೆ ಬೆಳ್ಳಗಾಗಿರುತ್ತದೆ ಅಂತ ಹೇಳಿರುತ್ತಾರೆ. ಇವನು ತಪಸ್ಸು ಮಾಡ್ಕೊಂಡಿರೋವಾಗ ಒಂದ್ಸಲ  ಯಾವ್ದೋ ರಾಜ  ಮತ್ತವನ ಸೈನಿಕರು  ಇವನ ಕಣ್ಮುಂದೇನೇ ಅದೇನೋ ಅನ್ಯಾಯ , ಅತ್ಯಾಚಾರ ಮಾಡುವಾಗ ವಾಲ್ಮೀಕಿ ತನ್ನ  ಆಯುಧ ತಕೊಂಡ್ಹೋಗಿ ಅವರನ್ನೆಲ್ಲ ಕೊಂದದ್ದು , ಆಮೇಲೆ ಅಯ್ಯೋ , ಇನ್ನಷ್ಟು ಕೊಲೆ ಮಾಡ್ಬಿಟ್ನಲ್ಲ  , ಇನ್ನು ಯಾವಾಗ ನನ್ನ ಪಾಪ ತೊಳೆಯೋದು  ಅಂತ ನಾರದರ ಬಟ್ಟೆ ನೋಡ್ತಾನೆ - ಬೆಳ್ ಳ್ ಳ್ ಳ್ಳ್ ಗಾಗ್ಬಿಟ್ಟಿದೆ!. 

ಇದರರ್ಥ ನೀವೇ ಮಾಡ್ಕೋತೀರ ? ಅಥವಾ  ನಾನೇ ಹೇಳೋದಿಕ್ಕೆ ಪ್ರಯತ್ನ ಮಾಡ್ಲಾ ?

( ಯಾವ್ದೋ ಮರಾಠಿ ಪತ್ರಿಕೆಯ ಸ್ಪಿರಿಚುವಲ್ ಕಾಲಂ ನಲ್ಲಿ ಬಂದಿತ್ತು-  ನಮ್ಮ  ಕಚೇರಿಯ ದೂತ - ಅವರಿಗೆ ಪ್ಯೂನು ಅನ್ನೋದಿಲ್ಲ , ಮೆಸೆಂಜರ್ ಅಂತೀವಿ- ಝೆರಾಕ್ಸ್ ತೆಗೆದುಕೊಳ್ತಿದ್ದ . ನಾನು ಇಸ್ಕೊಂಡು ಎರಡ್-ಮೂರು ಸಲ ಓದಿ ತಿಳ್ಕೊಂಡೆ. ಕರ್ಮವು ಆತ್ಮವಿಕಸನಕ್ಕೆ ದಾರಿ ಎಂಬ ಮಾತೂ ಇಲ್ಲಿತ್ತು ..  ನನ್ನ ಧರ್ಮ ಏನು ? ಕರ್ಮ ಏನು ? ಅಂತ  ಅಲ್ಲಿ ಇಲ್ಲಿ ಹುಡುಕ್ತಾ ಇದ್ದೆ...  )

ಎಂಗೂ   ಧರ್ಮದ ಬಗ್ಗೆ ಬಲೇ ವಿಚಾರ ನಡೆದೈತೆ , ಇಂಗ್ ಹೆಡ್ಡಿಂಗ್ ಕೊಟ್ರೆ ಜಾಸ್ತಿ ಜನ ಓದ್ತವ್ರೆ ಅನ್ತ  ಇಂಗ್ ಹೆಡ್ಡಿಂಗ್ ಮಡಗಿವ್ನಿ, ಎಂಗೈತೆ , ವಸಿ ಯೋಳ್ಬಿಡಿ  :)   

 

 

 

 

Rating
No votes yet

Comments

Submitted by ಶ್ರೀನಿವಾಸ ವೀ. ಬ೦ಗೋಡಿ Tue, 01/29/2013 - 17:57

In reply to by shreekant.mishrikoti

"ಈ ಕತೆಯ ಆಶಯ ಇಷ್ಟೇ - ನಮ್ಮ ಸ್ವಭಾವಕ್ಕೆ ತಕ್ಕಂತೆ ಕರ್ಮ ಮತ್ತು ಧರ್ಮಾಚರಣೆಯೇ ಸರಿಯಾದದ್ದು , ಅದರಲ್ಲೇ ಆತ್ಮವಿಕಾಸವೂ ನಮ್ಮ ಉದ್ಧಾರವೂ ಅಡಗಿದೆ ಅಂತ ಹೇಳುವಲ್ಲಿ ಈ ಕತೆಯನ್ನ ಹೇಳಿದ್ದಾರೆ."

ಅಂದ್ರೆ, ವಾಲ್ಮೀಕಿ ಮೊದಲು ದರೋಡೆಕೋರನಿದ್ದದ್ದು ಅವನು ಈ ಕೆಲಸ ಮಾಡಿದರೆ ಸರಿ, ದರೋಡೆಕೋರರು ಅಲ್ಲದವರು ಈ ಕೆಲಸ ಮಾಡಿದರೆ ತಪ್ಪು ಅಂತಾನಾ?