ಬ್ರಮ್ಹಗಿರಿಯ ಚಾರಣ - 2

ಬ್ರಮ್ಹಗಿರಿಯ ಚಾರಣ - 2

ಇಲ್ಲಿಂದ......

http://sampada.net/blog/chikku123/23/02/2010/24142


ಹಕ್ಕಿಗಳ ಕಲರವ, ಪ್ರಕ್ರ್ರತಿಯ ಸೌಂದರ್ಯ ಆಸ್ವಾದಿಸುತ್ತಾ , ಒಬ್ಬೊಬ್ಬರ ಕಾಲು ಎಳೀತಾ,ಸಿಕ್ಕ ಸಿಕ್ಕ ಜರಿಗಳಲ್ಲಿ ತಂಪಾದ, ಅಷ್ಟೇ ಶುದ್ಧವಾದ ನೀರು ಕುಡೀತಾ, ಬಾಟಲಿಗೆ ನೀರು ತುಂಬಿಸಿಕೊಂಡು ಸೆಖೆ ಆದ್ರೆ ಮುಖಕ್ಕೆ ತಲೆಗೆ ಸುರಿದುಕೊಂಡು,  ನಮ್ಮ  ಪಯಣ ಸಾಗಿತ್ತು.

೧ ಗಂಟೆ ನಡೆದಿರಬಹುದು, ಅಷ್ಟೊತ್ತಿಗೆ ಎದ್ರುಗಡೆಯಿಂದ ಇಬ್ರು ಬರ್ತಿದ್ರು, ಗಂಡ ಹೆಂಡತಿ ಟ್ರೆಕ್  ಹೋಗಿ ವಾಪಸ್ ಬರ್ತಿದ್ರು. ಮುಂದೆ ಹೋಗಿದ್ದ ಗೈಡ್ ಅವರನ್ನ ವಾಪಸ್ ಕರ್ಕೊಂಡು, ಬೈಕೊಂಡು ಬರ್ತಿದ್ದ ಕನ್ನಡದಲ್ಲಿ, ಅವ್ರಿಗೆ ಕನ್ನಡ ಬರ್ತಿರ್ಲಿಲ್ಲ.   'ಟ್ರೆಕ್ ಮಾಡೋದಕ್ಕೆ ಪರ್ಮಿಶನ್ ಇಲ್ಲದೆ ಹೋಗಿದ್ದಾರೆ ಸಾರ್, ಇವರಿಗೆ ಜೈಲ್ಗೆ ಹಾಕಿಸಬೇಕು ಸಾರ್ ಇಲ್ಲಾಂದ್ರೆ ನಮ್ಮನ್ನ ಹಾಕ್ತಾರೆ' ಗೈಡ್ ನಮ್ಮನ್ನ ನೋಡಿ ಒಂದೇ ಸಮನೆ ಉಗಿತಿದ್ದ.

ನಾವು ಏನಾಯ್ತು ಅಂತ ಅವರನ್ನ ಕೇಳಿದಕ್ಕೆ '೮ ಗಂಟೆಗೆ ಫಾರೆಸ್ಟ್ ಆಫೀಸಿಗೆ ಹೋದ್ವಿ, ಯಾರೂ ಇರ್ಲಿಲ್ಲ. ಫೋನ್ ಸಹ ಮಾಡಿದ್ವಿ, ಯಾರೂ ಎತ್ತಲಿಲ್ಲ. ಇನ್ನೇನು ಮಾಡೋದು ಅಂತ ಟ್ರೆಕ್ ಮಾಡೋದಕ್ಕೆ ಶುರು ಮಾಡಿದ್ವಿ' ಅಂದ.

ನನ್ಮಕ್ಳು ಮೊದ್ಲೇ ತಪ್ಪು ಮಾಡಿದ್ರು ಅದ್ರ ಜೊತೆಗೆ ಬೇಡದೆ ಇರೋ ವಿಷಯಗಳು.
ಅಷ್ಟೊತ್ತಿಗೆ ಗೈಡ್ ಇದ್ದವನು 'ಸಾರ್, ಕಥೆ ಹೇಳ್ತಾ ಇರ್ತಾರೆ ಇವ್ರು. ಅವರನ್ನ ಫಾರೆಸ್ಟ್ ಆಫೀಸಿಗೆ ಕರ್ಕೊಂಡು ಹೋಗ್ತೀವಿ ನೀವು ಇಲ್ಲೇ ಇರಿ'.

ನಾವೆಲ್ಲರೂ ಹೋಗ್ಲಿ ಬಿಡಿ ಸಾರ್ ಹೆಂಗಿದ್ರೂ ವಾಪಸ್ ಹೋಗ್ತಿದ್ದಾರಲ್ಲ ಅಂದ್ವಿ.

ಇಲ್ಲ ಸಾರ್ ಹಂಗೆಲ್ಲ ಆಗಲ್ಲ, ಹೆಚ್ಚು ಕಡಿಮೆ ಆದ್ರೆ ನಮ್ಮ ಕುತ್ತಿಗೆಗೆ ಬರತ್ತೆ ಸಾರ್ ಅಂದ ಇನ್ನೊಬ್ಬ ಗೈಡ್.

ಆಮೇಲೆ ೩ ಜನನೂ ಏನೋ ಮಾತಾಡ್ಕೊಂಡು ವೆಂಕನ್ನ  'ನೀವು ಬನ್ನಿ ಸಾರ್' ಇಲ್ಲ ಅಂತ ಅವರನ್ನೂ ಕರ್ಕೊಂಡು ಆಚೆಗೆ ಹೋದ್ರು.

ಏನೋ ಡೀಲ್ ಮಾಡ್ಕೊಂಡು ಅವರಿಬ್ಬರನ್ನ ವಾಪಸ್ ಕಳ್ಸಿ ೪ ಜನನೂ ವಾಪಸ್ ಬಂದ್ರು.
ಎಷ್ಟಕ್ಕೆ ಡೀಲಾಯ್ತು ವೆಂಕ?

೧೫೦೦.೦೦

ಮೂವರಿಗೂ ೫೦೦ ರೂ ಹಾಗಿದ್ರೆ . ೨೦೦೦  ಕೇಳಬೇಕಿತ್ತು, ೫೦೦ ರೂ ನಮ್ಮ ಖರ್ಚಿಗೆ ಇಟ್ಕೊಬಹುದಿತ್ತಲ್ಲ? :)

ಮಾಡಬಹುದಿತ್ತು....ಹೋಗ್ಲಿ ಬಿಡಿ

೧೫ ನಿಮಿಷ ಈ ಆಟ ಮುಗಿದ ಮೇಲೆ ಮತ್ತೆ ಪಯಣ ಶುರುವಾಯಿತು. ಸುಮಾರು ೧೨.೩೦ಕೆ ಒಂದು ಹೊಳೆ ಸಿಕ್ತು (ಲಕ್ಷ್ಮಣತೀರ್ಥ). ಹೊಟ್ಟೆ ಬೇರೆ ಚುರುಗುಡ್ತಿತ್ತು, ಬೆಳಗ್ಗೆ ಬೇರೆ ಬೇಗ ತಿಂದ ಪರಿಣಾಮ ಎಲ್ಲರೂ ತಿನ್ನೋದಕ್ಕೆ ಕಾತರರಾಗಿದ್ದರು.
ಪಕ್ಯ ಬ್ಯಾಗಿಂದ ಚಪಾತಿ ಮತ್ತೆ ಟೊಮೇಟೊ ಪಲ್ಯ ತೆಗೆದ. ಗೈಡ್ಗೆ ಕೊಟ್ಟು ಎಲ್ಲರೂ ೩-೩ ಚಪಾತಿ ತಿಂದು ಹೊಳೆಯಲ್ಲಿ ಕೈ ತೊಳೆದುಕೊಂಡು ಮತ್ತೆ ಹೆಜ್ಜೆ ಹಾಕಿದೆವು. ಇಲ್ಲಿವರೆಗೆ ಕಾಡಿನ ತಂಪಲ್ಲಿ ಆರಾಮಾಗಿ ಹೋಗ್ತಿದ್ದ ನಮಗೆ ಬಯಲು ಜಾಗ ಸಿಕ್ತು. ಅರ್ಧ ಗಂಟೆ ನಡೆಯೋವಷ್ಟರಲ್ಲಿ ಸುಸ್ತಾಗಿ ಸಿಕ್ಕ ಬಂಡೆ ಮೇಲೆ ಹಾಗೇ ಬಿದ್ಕೊಂಡ್ವಿ.

ಆದ್ರೆ ಡುಮ್ಮ ಇನ್ನು ಹತ್ತುತ್ತನೇ ಇದ್ದ. ಅವ್ನು ಬರೋವರೆಗೋ ಕಾದ್ವಿ. ಬಂದಾದ್ಮೇಲೆ ಪಕ್ಯ 'ಲೋ ಡುಮ್ಮ, ನಿನ್ನಿಂದನೆ ಲೇಟ್ ಆಗ್ತಿರೋದು, ಇಲ್ಲಂದಿದ್ರೆ ಇಷ್ಟೊತ್ತಿಗೆ ಆ ಟೀಮಿಗಿಂತ ಮೊದ್ಲು ಹೋಗ್ತಿದ್ವಿ'.

ಅದ್ಕೆ ರಂಜನ್ 'ಇವೆಲ್ಲ ಡಂಗಾಣಿಗಳು ಬೇಡಮ್ಮ, ನಂಗೇನೂ ನೀವು ಕಾಯೋದು ಬೇಡ ನಾನು ನಿಧಾನಕ್ಕೆ ಬರ್ತೀನಿ. ನೀವು ಹೋಗ್ತಿರಿ'.

'ಅದ್ಹೇಗಾಗತ್ತೆ, ನೀನು ಬಂದ್ರೆ ನಮ್ಮ ಟೀಮಿಗೆ ಒಂತರಾ ಗಾಂಭೀರ್ಯ' ಅಂತಂದ ಪಕ್ಯ.

ನಾನಿದ್ದೋನು 'ಗಾಂಭೀರ್ಯ ಅಲ್ಲ ಮಗಾ, ಗಜ ಗಾಂಭೀರ್ಯ ಅನ್ನು' ಅಂದೆ :).

 ಅಲ್ಲಿವರೆಗೆ ನಿರ್ಜೀವವಾಗಿದ್ದ ಮೊಬೈಲ್ಗಳು ಸಿಗ್ನಲ್ ಸಿಕ್ಕ ಪರಿಣಾಮ ಒಂದೇ ಸಮನೆ ಹೊಡೆದುಕೊಳ್ಳತೊಡಗಿದವು(ಮೆಸೇಜು, ಕಾಲ್). ಅವ್ರ ಅಪ್ಪ ಅಮ್ಮನಿಗೆ, ಹೆಂಡತಿಗೆ, ಗರ್ಲ್ಫ್ರೆಂಡ್ಗೆ ಕಾಲ್ ಮಾಡಿ ತಾವು ಇರೋ ಜಾಗ ಹೇಳಾದಮೇಲೆ ಮತ್ತೆ ಕಾಲುಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದವು.
೧.೩೦ಕ್ಕೆ ಸರಿಯಾಗಿ ಗೆಸ್ಟ್ ಹೌಸ್ ತಲುಪಿದ್ವಿ.

೧೫ ನಿಮಿಷ ರೆಸ್ಟ್ ತಗೊಂಡು ಬ್ರಮ್ಹಗಿರಿ ಪೀಕ್ಗೆ ಹೋಗೋಣ ಅಂತ ಗೈಡ್ ಅಂದ.

ಬ್ಯಾಗ್ ಅಲ್ಲೇ ಗೆಸ್ಟ್ ಹೌಸ್ನಲ್ಲಿ ಎಸೆದು ಮತ್ತೆ ಶುರುವಾದ ಪಯಣ ಸುಮಾರು ೨ ತಾಸು ಎಲ್ಲೂ ಕೂರದೆ ಮುಂದುವರೆಯಿತು ಕಾರಣ ಸಮನಾದ ಹಾದಿ, ಅಲ್ಲದೆ ದೂರದ ಬೆಟ್ಟಗಳು, ಮೋಡಗಳು ನಮ್ಮ ಹರಟೆ ಇವುಗಳಿಂದ ನಮ್ಮ ದಾರಿ ಸಾಗಿದ್ದೇ ತಿಳಿಯಲಿಲ್ಲ.
ಕೊನೆಗೂ ಬ್ರಮ್ಹಗಿರಿಯ ತುದಿ ಹತ್ತುವ ಜಾಗ ಬಂತು. ಎಲ್ಲರಿಗೂ ಆ ಬೆಟ್ಟ ನೋಡಿ ಶಾಕ್ ಹೊಡೆದ ಹಾಗಾಯ್ತು. ೭೦-೭೫ ಡಿಗ್ರಿಯಲ್ಲಿದ್ದ ಬೆಟ್ಟವನ್ನ ನೋಡಿ ಹೇಗಪ್ಪ ಹತ್ತೋದು ಅಂತ ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳ ಸರಮಾಲೆ ಏಳುತ್ತಿತ್ತು.

ಡುಮ್ಮ ಇದ್ದವನು 'ನನ್ನ ಕೈಲಿ ಆಗಲ್ಲ ನೀವು ಹೋಗಿ' ಅಂದ. ನಾವು ಹತ್ತೋದಕ್ಕೆ ರೆಡಿ ಇದೀವೇನೋ ಅನ್ನೋರ ಹಾಗೆ!!!!!

 

ಮುಂದುವರೆಯುವುದು........

ಚಿತ್ರಗಳಿಗೆ ಇಲ್ಲಿ ಹೋಗಿ - >

http://picasaweb.google.com/mail2Chikku/Brhamhagiri#

Rating
No votes yet

Comments