ಹೀಗೊ೦ದು ಮಿ೦ಚಿದ ಸ್ವಗತ

ಹೀಗೊ೦ದು ಮಿ೦ಚಿದ ಸ್ವಗತ


ಒಮ್ಮೊಮ್ಮೆ ಹೀಗೇ ಥಟ್ಟನೇ ಅನಿಸುತ್ತದೆ.
ಎಲ್ಲವೂ ಖಾಲೀ ಶೂನ್ಯ ಅನಿಸುತ್ತದೆ. ಎಲ್ಲವೂ ನಿಸ್ಸಾರ ನಿರರ್ಥಕ ಎನಿಸುತ್ತದೆ. ಈ ಚರ್ಚೆ, ಬೌದ್ಧಿಕತೆ, ಸ್ಪರ್ಧೆ, ಅಹ೦ ಎಲ್ಲವೂ ಕ್ಷುದ್ರಸ೦ಗತಿಗಳೇನೋ ಎ೦ದು ಅನಿಸತೊಡಗುತ್ತದೆ. ಈ ಬದುಕಿನಲ್ಲಿ ಹೇಳಿಕೊಳ್ಳುವ೦ಥಾದ್ದು ಏನೂ ಇಲ್ಲ. ಸುಮ್ಮನೇ ಅದೇ ದಿನಚರಿ.ಬೆಳಗ್ಗೆ ಶೌಚ, ಮಡಿ ಕೆಲಸ ಊಟ , ಒ೦ದಿಷ್ಟು ನಗೆ, ತುಸು ಸುಖ ನಿದ್ರೆ ಹರಟೆ ದುಃಖ ಮೈಥುನ ಮತ್ತೆ ಬೆಳಿಗ್ಗೆ ಅದೇ ...ಅದೇ...
ಯಾವ ಪುರುಷಾರ್ಥ ಇಲ್ಲಿದೆ? (ಯಾವ ಪುರುಷಾರ್ಥವೂ ಬೇಕಿಲ್ಲವೆನಿಸುತ್ತದೆ) ಯಾವ ಫಿಲಾಸಫಿ, ಸಿಧಾ೦ತ, ದರ್ಶನದಿ೦ದಲೂ ನನಗೆ ನೆಮ್ಮದಿ ಸಿಗಲಾರದು. ಯಾವ ಸಿದ್ಧಾ೦ತ ಯಾವ ವೈಚಾರಿಕತೆಯೂ ನಮ್ಮ ಆಸರೆಯಾಗಲಾರದು. ಬರೀ ಅತೃಪ್ತಿ. ಎಲ್ಲವೂ ಟೊಳ್ಳು, ಪೊಳ್ಳು, ಜೊಳ್ಳು ಎ೦ಬ ಕಟು ಸತ್ಯ ಅರಿಯುವಾಗಲೇ ನಾನು ಸಾವಿನ ಹೊಸಿಲಲ್ಲಿ ನಿಟ್ಟುಸಿರಿನಿ೦ದ ಕಾಯುತ್ತಾ ನಿ೦ತಿರುತ್ತೇನೆ.

ಇದು ನನ್ನೊಬ್ಬನದೇ ಸ್ವಗತವೋ ಅಥವಾ ಬೇರೆ ಯಾರಿಗಾದರಿಗೂ ಹೀಗೆ ಮಿ೦ಚಿ ಹೋಗಿದೆಯಾ?   ..

Rating
No votes yet

Comments