ನಮ್ಮ ದೇಶದ ಸಂಸ್ಕೃತಿ ಎಂದರೆ ಪಾಶ್ಚಿಮಾತ್ಯರಿಗೆ ಅದೆಷ್ಟು ಸಂತಸ!

ನಮ್ಮ ದೇಶದ ಸಂಸ್ಕೃತಿ ಎಂದರೆ ಪಾಶ್ಚಿಮಾತ್ಯರಿಗೆ ಅದೆಷ್ಟು ಸಂತಸ!


ನಮ್ಮ ದೇಶದ ಸಂಸ್ಕೃತಿ ಎಂದರೆ ಪಾಶ್ಚಿಮಾತ್ಯರಿಗೆ ಅದೆಷ್ಟು ಸಂತಸ! ಫ್ರಾನ್ಸ್ ದೇಶದ ಮೋನಿಕಾ ಭಾರತದ ಪ್ರವಾಸದಲ್ಲಿದ್ದಾಗ ಮೊನ್ನೆ ಅವರ ಹುಟ್ಟುಹಬ್ಬ ಆಚರಿಸಿದ ರೀತಿ ಹೀಗೆ. ಎರಡು ದಿನಗಳ ನನ್ನ ಮೈಸೂರು ಸುತ್ತಮುತ್ತಲ ಪ್ರವಾಸ ಕಾಲದಲ್ಲಿ ಸೋಮನಾಥಪುರದ ಕೇಶವ ದೇವಾಲಯದ ಮುಂದೆ   ವಿದೇಶೀ ದಂಪತಿಗಳನ್ನು ಕಂಡೆ. ಇಬ್ಬರೂ ಕಾಕಡ ಹೂವಿನ ಹಾರವನ್ನು ಕೊರಳಲ್ಲಿ ಹಾಕಿಕೊಂಡು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದುದನ್ನು ಕಂಡು ಅವರೊಡನೆ ಮಾತಿಗಿಳಿದೆ. ಆರಂಭದಲ್ಲಿ ಅವರ ಹೆಸರು ಅರ್ಥವೇ ಆಗಲಿಲ್ಲ. ಆಮ್ ಮೊಯಿಯಾ ಮೈ ಹಸ್ಬೆಂಡ್ ಪೀಯೋ ಎಂದು ಹೇಳಿದಾಗ ದಯವಿಟ್ಟು ಸ್ಪೆಲ್ ಮಾಡಿ ಎಂದು ವಿನಂತಿಸಿದೆ. ಆಗ ಆಕೆ ಹೇಳಿದರು ಅಮ್ ಮೊನಿಕ ಅಂಡ್ ಮೈ ಹಸ್ಬೆಂಡ್ ಪೀಟರ್. ಹಾರ ಹಾಕಿಕೊಂಡು ಖುಷಿಯಾಗಿದ್ದೀರಲ್ಲಾ! ಏನು ವಿಶೇಷ? ಎಂದೆ. ಅದಕ್ಕೆ ಅವರು ಹೇಳಿದ್ದು ನಿನ್ನೆ ನನ್ನ ಪತಿಯ ಜನ್ಮ ದಿನ. ಅದಕ್ಕಾಗಿ ಹಾರ. ಏನು ಹೀಗೇ ಹಾರ ಹಾಕಿಕೊಂಡು ಓಡಾಡ್ತಿದೀರಲ್ಲಾ? ಅಂದ್ರೆ ಇದರಲ್ಲಿ ಸಂತೋಷ ಇದೆ ಅಂದ್ರು. ನನಗಂತೂ ಭಾರಿ ಖುಷಿಯಾಯ್ತು. ಬೋಳು ಹಣೆಯ ಬೋಳು ಕೈನ ಕೆದರಿದ ತಲೆಯ ಭಾರತದ ಸುಪುತ್ರಿಯರನ್ನು ನಿತ್ಯವೂ ಟಿವಿಯಲ್ಲಿ ನೋಡಿ ನೋಡಿ ಛೇ! ಎಂದು ಕೊಳ್ಳುತ್ತಿದ್ದ ನನಗೆ ಜೋಡಿ ನೋಡಿ ಬಲು ಸಂತೋಷವಾಯ್ತು. ನೀವೂ ಜೋಡಿಯನ್ನು ನೋಡಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.


ಸೋಮನಾಥಪುರದ ಕೇಶವ ದೇವಾಲಯದೆದುರು ಪೋಸ್ ನೀಡಿದ ಮೋನಿಕಾ ಪೀಟರ್ ದಂಪತಿಗಳು

 

   
ಅಬ್ಭಾ ಶಿಲ್ಪಕಲೆಯನ್ನು ಇಂಚು-ಇಂಚೂ ವೀಕ್ಷಿಸುತ್ತಾ, ಅವುಗಳ ಫೋಟೋ ತೆಗೆಯುತ್ತಿದ್ದ ವಿದೇಶಿಯರ  ಆಸಕ್ತಿಗೆ ಮೆಚ್ಚಲೇ ಬೇಕು




ಸೋಮನಾಥಪುರದ ಕೇಶವ ದೇವಾಲಯದ ನೋಟಗಳು







ದೇವಾಲಯದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿವೆ. ಹಳೆಯದನ್ನು ಉಳಿಸುವ ಪ್ರಯತ್ನ ನಡೆದಿದೆ.



ಶಾಸನವೇ ಎಲ್ಲವನ್ನೂ ಹೇಳುವಾಗ, ಇನ್ನು ನನ್ನ ಬರಹವೇಕೆ?

ಮೈಸೂರಿನಿಂದ ಟಿ.ನರಸೀಪುರಕ್ಕೆ ತ್ರಿವೇಣಿ ಸಂಗಮ ನೋಡಲು ಕಾರ್ ನಲ್ಲಿ ಹೊರಟಾಗ  ಮೂರ್ನಾಲ್ಕು ಕಡೆ  ರಸ್ತೆಯ ದುರಸ್ತಿಕಾರ್ಯ ನಡೆಯಿತ್ತಿತ್ತು. ಮೂರ್ನಾಲ್ಕು ಕಿಲೋಮೀಟರ್ ದೂರ ಜೆಲ್ಲಿಯ ಮೇಲೆ ಹೋಗುವಾಗ ಬಲು ಬೇಸರವಾಗಿ  ಬೇರೆ ದಾರಿಯಿಂದಲೇ ಮೈಸೂರಿಗೆ ಹಿಂದಿರುಗಬೇಕೆಂದು ನಿರ್ಧರಿಸಿದ್ದೆವು. ಟಿ.ನರಸೀಪುರದಿಂದ ಸೋಮನಾಥಪುರಕ್ಕೆ ಹೋಗಿ ಅಲ್ಲಿಂದ ಮೈಸೂರಿಗೆ ತೆರಳುವಾಗ ಬನ್ನೂರು ಮಾರ್ಗವಾಗಿ ಉತ್ತಮವಾದ ರಸ್ತೆಯಲ್ಲಿ ಮೈಸೂರು ಸೇರಿದೆವು. 

Rating
No votes yet

Comments