ರಾಷ್ಟ್ರ ಪ್ರಾಣಿ-ಆನೇನಾ?

ರಾಷ್ಟ್ರ ಪ್ರಾಣಿ-ಆನೇನಾ?

ಅಡವಿಯ ರಾಜನಾಗಿ ಮೆರೆಯುತ್ತಿದ್ದ ಸಿಂಹಕ್ಕೆ ಮಾಡಿದಷ್ಟು ಅವಮಾನ ಬೇರೆ ಯಾವ ಪ್ರಾಣಿಗೂ ಮಾಡಿರಲಿಕ್ಕಿಲ್ಲ.


ಅದೇನೂ ಕೇಳಿರಲಿಲ್ಲ. ಆದರೂ ಅದನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು. ಕೊನೆಗೆ ವಿನಾಕಾರಣ ಆ ಪದದಿಂದ ಕಿತ್ತೂ ಹಾಕಿದರು.


ಸಿಂಹಾಸನ, ಸಿಂಹಘರ್ಜನೆ, ಸಿಂಹಾವಲೋಕನ ಪದಗಳಿಗಿದ್ದ ಮರ್ಯಾದೆಯನ್ನೂ, ಸಾಮಾನ್ಯ ರಾಜಕಾರಣಿಗಳ ಸೀಟು, ಮಾತು,ವರ್ತನೆಗೆ ಹೋಲಿಸಿ ತೆಗೆದರು.


ಈಗ "ಸಿಂಹ" ಅಂದರೆ sim!? ಅನ್ನುವಲ್ಲಿಯವರೆಗೆ ಬಂದು ಮುಟ್ಟಿದೆ :( 


  ಪ್ರೊಜೆಕ್ಟ್ ಟೈಗರ್ ಎಂದು ಮಾಡಿ ೧೯೭೩ರಲ್ಲಿ ಹುಲಿಯನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು.


ಏನೂ ಪ್ರಯೋಜನವಾಗಲಿಲ್ಲ. ಹುಲಿ ಸಂತತಿ ಕ್ಷೀಣಿಸುತ್ತಿದೆ ಎಂದು ಬೊಬ್ಬಿಡುತ್ತಿದ್ದಾರೆ. ೩೭ ವರ್ಷ ಅವಕಾಶ ಕೊಟ್ಟರೂ ತನ್ನ ಸಂತತಿ ವೃದ್ಧಿಮಾಡಿಕೊಳ್ಳಲಾಗದ ಹುಲಿಯನ್ನು ಆ ಪಟ್ಟದಿಂದ ಇಳಿಸಬೇಕು.


 ಬೇರೆ ಯಾವ ಪ್ರಾಣಿ "ರಾಷ್ಟ್ರ ಪ್ರಾಣಿ"ಯಾಗಲು ಫಿಟ್?


-ಯಾವ ಪ್ರಾಣಿಯನ್ನು ಕಂಡರೆ ನಾಡಲ್ಲೂ ಕಾಡಲ್ಲೂ ಭಯ ಆವರಿಸುವುದೋ-


-ತನ್ನ ಸೊಂಡೀಲಿ(some deal)ನಿಂದ ಕಾಡಿಗೆ ಕಾಡನ್ನೇ ಗಣಿಂ(ಗುಳುಂ) ಮಾಡುವುದೋ-


-ನಾಡಿಗೆ ನುಗ್ಗಿದವೋ ರೈತರ ಭೂಮಿ,ಮನೆ ಎಲ್ಲಾ ಗೋವಿಂದಾ ಆಗುವುದೋ-


-ಯಾವುದರ ಸಂತತಿ ವರ್ಷದಿಂದ ವರ್ಷ ಕೊಬ್ಬುತ್ತಾ ಸಾಗಿದೆಯೋ-


ಆ ಪ್ರಾಣಿಯನ್ನು ಮಾಡಲಿ.


 


-ಗಣೇಶ.


 


 


 


 


 


 


 

Rating
No votes yet

Comments