ಕನ್ನಡ ಮಾಧ್ಯಮದಲ್ಲಿ ಶಿಕ್ಷಣದ ಬಗ್ಗೆ ಮೈಸೂರಿನಲ್ಲಿ ಕಾರ್ಯಾಗಾರ - ೨೮ ರಂದು

ಕನ್ನಡ ಮಾಧ್ಯಮದಲ್ಲಿ ಶಿಕ್ಷಣದ ಬಗ್ಗೆ ಮೈಸೂರಿನಲ್ಲಿ ಕಾರ್ಯಾಗಾರ - ೨೮ ರಂದು

ಬರಹ

ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು


ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ : ಸಾಧ್ಯತೆಗಳು ಮತ್ತು ಬಾಧ್ಯತೆಗಳು


" ವಿಚಾರ ವಿನಿಮಯ , ಅನುಭವ ಹಂಚಿಕೆ "


 


                      ಸ್ಥಳ    :  ಅರಿವು ವಿದ್ಯಾಸಂಸ್ಥೆ ,


                                    ಲಿಂಗಾಂಬುಧಿಪಾಳ್ಯ ರಸ್ತೆ, ಶ್ರೀರಾಮಪುರ,


                                     ಮೈಸೂರು.


                     ದಿನಾಂಕ :  ೨೮ನೇ ಫೆಬ್ರುವರಿ ೨೦೧೦, ಬೆಳಿಗ್ಗೆ ೧೦ ರಿಂದ.


 


ಪ್ರಾಥಮಿಕ ಶಿಕ್ಷಣ - ಕನ್ನಡ ಮಾಧ್ಯಮದಲ್ಲಿ  - ಕೆಲವರಿಗೆ ಅನಿವಾರ್ಯ; ಕೆಲವರಿಗೆ ತುಡಿತ. ಮಾಧ್ಯಮ ಮಾತೃ ಭಾಷೆಯೇ ಎಂದು ಹೇಳುತ್ತಲೇ ಇಂಗ್ಲೀಷ್ ಮಾಧ್ಯಮದತ್ತ ಸಮಾಜ ಮುಖ ತಿರುವಿ ನಿಂತಿರುವಾಗ ಶಿಕ್ಷಣದ ಗುಣಮಟ್ಟದ ಬಗ್ಗೆ ಮತ್ತು ಮಕ್ಕಳ ಅರಿವಿನ ಬಗ್ಗೆ ಯೋಚಿಸುತ್ತಾ ಎಲ್ಲರೂ ಕಲೆತು ಅಭಿಪ್ರಾಯ ಹಂಚಿಕೊಳ್ಳಲು ರೂಪಿತವಾಗಿದೆ ಈ ಕಾರ್ಯಾಗಾರ.


 


ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿದ ವಿದ್ಯಾರ್ಥಿಗಳು, ನೀಡಿದ ಪೋಷಕರು, ನಾಡಿನ ಸಾಹಿತಿಗಳು, ಚಿಂತಕರು, ಸಾಧಕರು ಹಾಗೂ ಅನ್ಯಾನ್ಯ ವೃತ್ತಿಗಳಲ್ಲಿರುವವರು ಒಂದೆಡೆ ಕಲೆತು ಅನುಭವ ಹಂಚಿಕೊಳ್ಳುವಂತೆ ಈ ಆಪ್ತ ಕಾರ್ಯಾಗಾರ ಯೋಜಿಸಲಾಗಿದೆ.


 


ತಮ್ಮ ನೈಜ ಪ್ರಾಮಾಣಿಕ ಅಭಿಪ್ರಾಯ, ಸಿಹಿ-ಕಹಿ ಅನುಭವಗಳು, ಈ ಮಾಧ್ಯಮದಿಂದಾಗಿ ಆಗುತ್ತಿರುವ ಅನುಕೂಲ/ಅನಾನುಕೂಲಗಳು ಮತ್ತು ಕನ್ನಡ ಮಾಧ್ಯಮದ ಸಾಧ್ಯತೆಗಳನ್ನು ಪೋಷಕರು, ವಿದ್ಯಾರ್ಥಿಗಳು ದಾಖಲಿಸಬೇಕೆಂಬುದು ಕಾರ್ಯಾಗಾರದ ಉದ್ದೇಶ.