ನೀನೊಂದು ಶಾಕುಂತಲೆಯ ಪ್ರತಿಮೆ

ನೀನೊಂದು ಶಾಕುಂತಲೆಯ ಪ್ರತಿಮೆ

ತೊಂಡೆಯ ಹಣ್ಣಿನಂತಹ ನಿನ್ನ ತುಟಿ,


ಕೆಂದಾವರೆಯಂತಹ ನಿನ್ನ ಮುಖ,


ನಳನಳಿಸುವ ನಿನ್ನ ಹೂಗೆನ್ನೆ,


ಹಂಸಗಳನ್ನು ನಾಚಿಸುವಂತಹ ನಿನ್ನ ನಡಿಗೆ,


ಜಿಂಕೆಯಂತಹ ನಿನ್ನ ಕಣ್ಣು, ದುಂಬಿಯಂತಹ ನಿನ್ನ ಮುಂಗುರುಳು,


ನಿನ್ನ ಮೈ ಬಣ್ಣ ಪುಷ್ಪರಾಗ, ತೋಳುಗಳಲ್ಲಿ ಎಳೆ ಬಿದುರಿನ ಕೋಮಲತೆ,


ಲಾವಣ್ಯದಲ್ಲಿ ರಂಭೆಯರನ್ನು ಗೆದ್ದ ರೂಪ,


ಮರದ ಬುಡವನ್ನು ಅಪ್ಪಿರುವ ಬಳ್ಳಿಯಂತಹ ನಿನ್ನ ಶರೀರ,


ಆ ಕೋಗಿಲೆಯನ್ನು ಮೀರಿಸುವಂತಹ ನಿನ್ನ ಕಂಠ,


ಒಟ್ಟಿನಲ್ಲಿ ಹೇಳಬೇಕಾದರೆ ನೀನೊಂದು ಹಾಲುಗಲ್ಲಿನಲ್ಲಿ ಕೆತ್ತಿದ ಶಾಕುಂತಲೆಯ ಪ್ರತಿಮೆ.

Rating
No votes yet