ಬ್ರಾಡ್ಮನ್ ಹಾಗು ಸಚಿನ್ !

ಬ್ರಾಡ್ಮನ್ ಹಾಗು ಸಚಿನ್ !

ಬರಹ

ಒಮ್ಮೆ ವರ್ಲ್ಡ್ ಕಪ್ ನ ಪಂದ್ಯದಲ್ಲಿ ಸಚಿನ್ ಆಟವನ್ನು  ವೀಕ್ಷಿಸುತ್ತಿರುವಾಗ , ಬ್ರಾಡ್ಮನ್ ಅವರು ತಮ್ಮ ಹೆಂಡತಿಯನ್ನು ಕರೆದು ಹೇಳಿದ್ದರಂತೆ , 'ಈ ಹುಡುಗನ ಆಟದ ಶೈಲಿ ನನ್ನ ಶೈಲಿಯನ್ನು ಹೋಲುತ್ತದೆ ಎಂದು '. ಅಂದಿನಿಂದ ಇಲ್ಲಿಯವರೆಗೂ ಅನೇಕರು ಸಚಿನ್ ರನ್ನು ಬ್ರಾಡ್ಮನ್ ಗೆ ಹೋಲಿಕೆ ಮಾಡುತ್ತಲೇ ಬಂದಿದ್ದಾರೆ . ಆದರೆ ಎಲ್ಲರು ಮರೆಯುತ್ತಿರುವ ಒಂದು ವಿಷಯ ಎಂದರೆ , ಬ್ರಾಡ್ಮನ್ ಆಡಿದ್ದ ಕಾಲ ಮತ್ತು ಸಚಿನ್ ಆಡುತ್ತಿರುವ ಕಾಲ , ಎರಡು ವಿಭಿನ್ನ !

ಆ ಕಾಲದಲ್ಲಿ ಕ್ರಿಕೆಟ್ ಅನ್ನುವ ಒಂದು ಸಣ್ಣ,ಅಷ್ಟು ಜನಪ್ರಿಯವಲ್ಲದ ಹಾಗು ಕೇವಲ ಎರಡು ಮೂರು ರಾಷ್ಟ್ರಗಳಿಗೆ ಮೀಸಲಿದ್ದ ಆಟವನ್ನು ತಮ್ಮ ವೃತ್ತಿಯಾಗಿ ಪರಿಗಣಿಸಿ , ಅದರಲ್ಲಿ ಸಾಧನೆಯ ಉತ್ತುಂಗಕ್ಕೇರಿ , ಮುಂದೆ ಬರುವ ಪೀಳಿಗೆಗೆ ಮಾದರಿಯಾಗಿದ್ದರು ಸರ್ ಬ್ರಾಡ್ಮನ್ . 

ತನ್ನ ಅಗಾಧ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು,ವಿಶ್ವದ ಎಲ್ಲ ಬ್ಯಾಟ್ಟಿಂಗ್ ದಾಖಲೆಗಳನ್ನು ಮುರಿದು,ಪ್ರತಿಯೊಬ್ಬ ಕ್ರಿಕೆಟ್  ಪ್ರೇಮಿಯ ಪ್ರೀತಿ ಪಾತ್ರನಾಗಿರುವ ಸಚಿನ್ , ಮೈದಾನದ ಹೊರಗೂ ತನ್ನ ವಿನಯವಂತಿಕೆ ಮೆರೆಯುತ್ತಿದ್ದಾನೆ .

ಹೀಗಿರುವಾಗ ಸಚಿನ್ ಹಾಗು ಬ್ರಾಡ್ಮನ್ ಇಬ್ಬರಲ್ಲಿ ಯಾರು ಒಳ್ಳೆಯ ಬ್ಯಾಟ್ಸಮನ್ ಎನ್ನುವ ತರ್ಕಕ್ಕೆ ಹೋಗದೆ , ಅವರಿಬ್ಬರ ಕೊಡುಗೆಯನ್ನು ಸ್ಮರಿಸುವುದಷ್ಟೇ ನಾವು ಕ್ರಿಕೆಟ್ ಗೆ ಕೊಡಬಹುದಾದ ಕಾಣಿಕೆ ಎಂದು ಭಾವಿಸುತ್ತೇನೆ .