ಹೀಗೊ೦ದು ಇನೊ೦ದು ಸ್ವಗತ!-2

ಹೀಗೊ೦ದು ಇನೊ೦ದು ಸ್ವಗತ!-2


ಸರಳವಾಗಿ ಬದುಕುವುದಕ್ಕೆ ಯಾವ ಬೌದ್ಧಿಕತೆಯ, ಸಿದ್ಧಾ೦ತಗಳ, ಇಸಮ್ ಗಳ ಕಸರತ್ತು, ಆಸರೆ ಬೇಡ. ಅದೇ ಹೊರೆಯಾಗಿ ಕೊನೆಗೆ ಬದುಕಿನ ಆನ೦ದದ ಘಳಿಗೆಗಳೇ ಮಾಯವಾಗಬಹುದು. ಪ್ರಕೃತಿಯಲ್ಲಿ ಪ್ರಾಣಿ ಪಶು, ಪಕ್ಷಿ ಕೀಟಗಳು ಲಕ್ಷಾ೦ತರ ವರ್ಷದಿ೦ದ ತಮ್ಮದೇ ರೀತಿಯಲ್ಲಿ ಸರಳವಾಗಿ ಬದುಕಿ ಬಾಳುತ್ತಿವೆ. ಆದರೆ ಮನುಷ್ಯನಿಗೆ ಮಾತ್ರ ಈ ಜ೦ಜಡ ಏಕೆ? (ಯೋಚಿಸುತ್ತಾನೋ ಎ೦ತೋ)

ಈ ಭೌದ್ಧಿಕತೆಯ ಕ್ಲೀಷೆ ಗೊ೦ದಲ ನಮ್ಮ ಸರಳ ಆನ೦ದವಾಗಿರಬಹುದಾದ ಬದುಕನ್ನು ಅದೆಷ್ಟು ಕಚಡಾ ಮಾಡಿದೆ.

ಬದುಕು ಬರೀ ತರ್ಕ, ಪ್ರಶ್ನೆಯಲ್ಲ. ತರ್ಕ ಪ್ರಶ್ನೆಗಳನ್ನೂ ಮೀರಿದ ಸ್ವಚ್ಚ ಬದುಕೂ ಇದೆ.

ಮರಗಿಡಗಳಿಗೆ ಯಾವ ತರ್ಕವೂ ಇಲ್ಲ. ಅವೂ ಬದುಕುತ್ತವೆ ಸಾರ್ಥಕತೆಯನ್ನು ನೀಡಿ ನಮಗೆಲ್ಲ...

ಏನಿದು?... ನಮಗೇನಾಗಿದೆ?

Rating
No votes yet

Comments