ಸತ್ತವರು - ಬದುಕಿದವರು

ಸತ್ತವರು - ಬದುಕಿದವರು

ನನ್ನ ತಂದೆಯವರು ತಮ್ಮ 85ನೆಯ ವಯಸ್ಸಿನಲ್ಲಿ ಮೃತರಾದಾಗ ವಿಷಯ ತಿಳಿಸಲು ಎಲ್ಲಾ ಬಂಧುಗಳಿಗೆ ದೂರವಾಣಿ ಮೂಲಕ ತಿಳಿಸುತ್ತಿದ್ದೆ. ಒಬ್ಬ ಬಂಧುಗಳ ಮನೆಗೆ ಫೋನು ಮಾಡಿದಾಗ ಮನೆಯ ಯಜಮಾನ ಮನೆಯಲ್ಲಿರಲಿಲ್ಲ. ಆತನ ಪತ್ನಿಗೆ ವಿಷಯ ತಿಳಿಸಿ ಯಜಮಾನರಿಗೂ ವಿಷಯ ತಿಳಿಸಲು ಹೇಳಿದೆ. ಇದು ಪ್ರಮಾದವಾಗುತ್ತದೆಂದು ನನಗೆ ಗೊತ್ತಿರಲಿಲ್ಲ. ಹೆಂಗಸರಿಗೆ ಸತ್ತವರ ವಿಷಯ ತಿಳಿಸಬಾರದಂತೆ. ತಿಥಿ ಊಟಕ್ಕೆ ಸಹ ಕರೆಯಲೂ  ಬಾರದಂತೆ.ಗಂಡಸರಿಗೆ ಮಾತ್ರ ಕರೆಯಬೇಕಂತೆ. ಊಟಕ್ಕೆ ಮಾತ್ರ ಹೆಂಗಸರೂ ಬರಬಹುದಂತೆ. ಸತ್ತವರ ವಿಷಯ ಹೆಂಗಸರಿಗೆ ಹೇಳಿದರೆ ಆ ಮನೆಯಲ್ಲಿ ಏನಾದರೂ ಕೆಟ್ಟದು ಆಗಬಹುದೆಂದು ಅನ್ನುತ್ತಾರೆ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಯಿತು.ಇದಕ್ಕೆ ಏನಾದರೂ ಸಮರ್ಥನೆ ಇದೆಯೇ? ಅರ್ಥ ಇದೆಯೇ? ಗೊತ್ತಿದ್ದವರು ಹೇಳಿ ಪುಣ್ಯ ಕಟ್ಟಿಕೊಳ್ಳಿ.


 


ಲೇಖನ ಶೀರ್ಷೀಕೆಯಲ್ಲಿ ಪ್ರಕಟವಾದ ಇತರ ಬರಹಗಳಿಗೆ ಲಿಂಕ್:


ಕವನ: ದೇವರು ಹೇಳಿದ ಸುಪ್ರಭಾತ: http://sampada.net/article/15678


ಚರ್ಚೆ: ಸಾವು ಬದುಕಿದೆ. http://sampada.net/forum/16323

Rating
No votes yet

Comments