ಸ್ವಗತದ ಸ೦ಕಟ
ವಿಕಾಸವಾದದ ಫಲ ವರವನ್ನು ಅನುಭವಿಸಿದ ಈ ಮನುಷ್ಯನದು ಅದೃಷ್ಟಶಾಲಿ ಜನ್ಮವೆ೦ದೇ ಹೇಳುತ್ತಾರೆ. ಮನುಷ್ಯ ಜನ್ಮ ದೊಡ್ಡದು ಎ೦ದು ದಾಸರು ಅಪ್ಪಣೆ ಕೊಡಿಸಿದ್ದಾರೆ ಅದ ಪೋಲು ಮಾಡದಿರಿ ಹುಚ್ಚಪ್ಪಗಳಿರಾ ಎ೦ದೂ ಛೇಡಿಸಿ ಎಚ್ಚರಿಸಿದ್ದಾರೆ
ಮನಸ್ಸು ಕೊರಗುತ್ತದೆ, ಮುದುಡತ್ತದೆ
ಆದರೆ ಪ್ರಕೃತಿಯ ಫಲದಿ೦ದ ಈ ವಿಕಾಸವಾದದ ಮೇಜರ್ ಬೆನೆಫಿಶರಿ ಅವನು ಪ್ರಕೃತಿಗೇ ವಿನಾಶಕಾರಿಯಾಗಿ ಪರಿಣಮಿಸುತ್ತಿದ್ದಾನಲ್ಲಾ.
ಗಿಡ ಮರ ಪ್ರಾಣಿ ಕೀಟ ಎಲ್ಲವೂ ಪ್ರಕೃತಿಯ ಲಕ್ಷ್ಮಣರೇಖೆಯಲ್ಲೇ ಇವೆ
ಬಟ್ ಈ ಮನುಷ್ಯನ ಲೋಕ ಹಾಗೂ ಅವನ ಬೌದ್ಧಿಕತೆಯ ಖಯಾಲಿಗಳನ್ನೂ ನೋಡೋಣ
ಜಗತ್ತು ಕ೦ಡರಿಯದ ಘೋರ ಎರಡು ಯುದ್ಧಕ್ಕೆ ಕಾರಣನಾದ ಇದು ಅವನ ಬೌದ್ಧಿಕತೆ
ಕ೦ಡಲ್ಲಿ ಬಾ೦ಬುಗಳನ್ನು ಎಸೆಯುತ್ತಾನೆ
ಓಜ಼ೋನ್ ಛತ್ರಿಯನ್ನು ಚಿ೦ದಿ ಮಾಡಿದ್ದಾನೆ
ಭೂತಾಯಿಯ ಒಡಲನ್ನು ಬಗೆಬಗೆದು ಬರಿದು ಮಾಡುತ್ತಿದ್ದಾನೆ
ಕಾಡು ಬೋಳಾಗಿಸುತ್ತಾನೆ. ನದಿ ತೊರೆಗಳನ್ನು ಬತ್ತಿಸುತ್ತಾನೆ
ನದಿಸಾಗರಗಳನ್ನು ಕಲುಷಿತಗೊಳಿಸುತ್ತಾನೆ.
ಕೊಲೆ ಮಾಡುತ್ತಾನೆ ಸುಳ್ಳು ಹೇಳುತ್ತಾನೆ ಕದಿಯುತ್ತಾನೆ
ಅತ್ಯಾಚಾರ ಮಾಡುತ್ತಾನೆ
ಅಮಾಯಕರನ್ನು ವಧಿಸುತ್ತಾನೆ
ಮುಗ್ಧರನ್ನು ಅಶಕ್ತರನ್ನು ಶೋಷಿಸುತ್ತಾನೆ!
ಅನಾಥಾಶ್ರಮ ವೃದ್ಧಾಶ್ರಮ ಜೈಲು ಕೋರ್ಟುಗಳು ಏನೆಲ್ಲ ಅವನ ಲೋಕದಲ್ಲಿ
ಇದೆಲ್ಲ ಅವನ ಬೌದ್ಧಿಕತೆಯ ವಿಕಾಸವಾದದ ಫಲವೋ
ಅಥವಾ ಅವನು thinking ಅನಿಮಲ್ಲೋ
ಮನಸ್ಸು ಯೋಚನೆ ಮಾಡಲಿಕ್ಕೇ ಅಳುಕುತ್ತದೆ
"ಈ ಜಗತ್ತು ಸು೦ದರವಾಗಿತ್ತು ಮನುಷ್ಯನ ಆಗಮನದವರೆಗೂ."
The world was beautiful until the arrival of man.
ಒಬ್ಬ ಕವಿಯ ಮಾತುಗಳು ನೆನಪಾಗುತ್ತವೆ.
ಹಾವಿಗೆ ಹಲ್ಲಲ್ಲಿದೆ ನ೦ಜು, ನೊಣಕ್ಕೆ ಶಿರದಲ್ಲಿ, ಚೇಳಿಗೆ ಕೊ೦ಡಿಯಲ್ಲಿ ಆದರೆ ಮನುಷ್ಯನ ಸರ್ವಾ೦ಗವೂ ವಿಷ ಎ೦ಬ ಶ್ಲೋಕವೂ ಓದಿದ ನೆನಪು.
ಮನಸ್ಸು ಮತ್ತೆ ಚೀರುತ್ತದೆ ಗಿಡ ಮರ ಪ್ರಾಣಿಗಳನ್ನು ನೋಡು ಎ೦ದು...
** ಯಾಕಾದರೂ ಇ೦ಥ ಸ್ವಗತಗಳು ನನಗೆ ಕಾಡುತ್ತವೆಯೋ