ವಿನಾಶಕಾಲೇ...

ವಿನಾಶಕಾಲೇ...

ಮತ್ತೊಂದು ಭೂಕಂಪ ಚಿಲಿಯಲ್ಲಿ! ಮೊನ್ನೆಯ ಹೈಟಿ ಭೂಕಂಪದ ಪರಿಣಾಮಗಳಿಂದ ಸಾವರಿಸಿಕೊಳ್ಳುವ ಮುನ್ನವೇ ಮತ್ತೊಂದು ಭೂಕಂಪ. ಅಷ್ಟು ಸಾಲದು ಅಂತ ಸುನಾಮಿಯ ನಿರೀಕ್ಷೆ...ಇಂದು ಮಧ್ಯಾಹ್ನಕ್ಕೆ ಜಪಾನಿಗೆ ಅಪ್ಪಳಿಸುತ್ತದೆಯಂತೆ. ಸಾವಿರಗಟ್ಟಲೆ ಜನರನ್ನು ಸ್ಥಳಾಂತರಿಸುತ್ತಿದ್ದಾರೆ. ಇನ್ನೂ ಎಷ್ಟಿದೆಯೋ ಇಂತದ್ದು...

 

ಆದರೆ ನಮ್ಮ ಸರ್ಕಾರಗಳಿಗೆ ಮಾತ್ರ ಚಿಂತೆಯೇ ಇಲ್ಲ. ಇರುವ ಅಲ್ಪ ಸ್ವಲ್ಪ ಅರಣ್ಯವನ್ನೂ ನಾಶ ಮಾಡಿ, ಭೂಮಿಯನ್ನು ಬಗೆದು ಅದಿರು ತೆಗೆಯುವ ಮಹತ್ತರ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇನ್ನು ಹೆಚ್ಚು ಅಗೆಯುವ-ಬಗೆಯುವ ಕೆಲಸವೇ ಬೇಡ...ಭೂಮಿಯೇ ಎಲ್ಲೆಡೆಯೂ ಬಾಯಿ ಬಿಡುತ್ತದೆ..ಆಪೋಶನ ತೆಗೆದುಕೊಳ್ಳುತ್ತದೆ ಬಿಡಿ. ಆಗ ಯಾವ ಅದಿರು, ವಜ್ರ, ಚಿನ್ನ ಬೇಕೋ ಒಳ ಹೋಗಿ ತೆಗೆದುಕೊಳ್ಳಿ...!

 

ಮಾನವನ ದುರಾಸೆಗೆ ಅಂತ್ಯವಿಲ್ಲ ಎಂದಿಲ್ಲ...ಆದರೆ ಅದು ಒಂದೇ ಬಾರಿ...!!!

 

ಹೆಚ್ಚುತ್ತಿರುವ ಪ್ರಕೃತಿ ವಿಕೋಪಗಳನ್ನು ನೋಡಿಯೂ, "ನನ್ನ ಮನೆಗೆ ಬಂದಿಲ್ಲವಲ್ಲ" ಎಂಬಂತಿರುವ ಇವರನ್ನು ನೋಡಿ ನಗಬೇಕೋ? ಅಳಬೇಕೋ? ಇಲ್ಲಾ, ಪ್ರಜ್ಞಾವಂತರು (?!) ಸೇರಿ ಬಡಿದಟ್ಟಬೇಕೋ?
Rating
No votes yet

Comments