ಹೇಮರಾಜ್

ಹೇಮರಾಜ್

ಬರಹ
ಹೇಮರಾಜ್ 
ಬಿಳಿಚರ್ಮದ ಬಿಳಿದಾಡಿಯ ಆ ೬೭ ವರ್ಷದ ಮುದುಕನನ್ನು ನೋಡಿದರೆ ಆತ ವಿದೇಶೀಯ ಎಂದೆನ್ನಿಸುವುದು ಸಹಜ. “ನಾನು ಬೆಲ್ಜಿಯಂ ದೇಶದವನು ನಿಜ, ಆದರೆ ನಾನೀಗ ಭಾರತೀಯ, ಭಾರತೀಯನೆಂದು ಕರೆದುಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ, ಇಂಡಿಯಾದ ಜನರನ್ನು, ಇಂಡಿಯಾದ ನೆಲವನ್ನು, ಇಂಡಿಯಾದ ಸಂಸ್ಕೃತಿಯನ್ನು ನಾನು ಪ್ರೀತಿಸುತ್ತೇನೆ, ಈ ಮಣ್ಣಿನೊಂದಿಗೆ ನನಗೆ ಆಳವಾದ ಭಾವನೆಗಳಿವೆ” ಎನ್ನುತ್ತಾರೆ ಆ ಬೆಲ್ಜಿಯಂ ಸಂಜಾತ ಧರ್ಮಶಾಸ್ತ್ರಜ್ಞ ಹೇಮರಾಜ್. ೧೯೭೫ರಲ್ಲಿ ಅವರು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರಿಗೆ ಮಾಡಿದ ಮನವಿಯ ಮೇರೆಗೆ ಅವರು ಪೂರ್ಣಪ್ರಮಾಣದ ಭಾರತೀಯ ಪೌರತ್ವ ಪಡೆದು ಪತ್ನಿ ಕಾವೇರಿ ಹಾಗೂ ಮಗಳು ಸುದೀಪ್ತಳೊಂದಿಗೆ ಬೆಂಗಳೂರಿನ ಪುಲಕೇಶಿನಗರದ ರಾಬರ್ಟ್ಸನ್ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ.
ಹೇಮರಾಜರ ತಂದೆ ಹೆಮೆರಿಕ್ಸ್ ಅವರು ಇಂಡಿಯಾದಲ್ಲಿ ಕುಷ್ಠರೋಗ ಚಿಕಿತ್ಸೆಯನ್ನು ಪರಿಚಯಿಸಿದವರಲ್ಲಿ ಮೊದಲಿಗರು. ಅವರು ಆಫ್ರಿಕಾದ ಕಾಂಗೋ ನಾಡಿನಲ್ಲಿ (೧೯೨೯ ರಿಂದ ೧೯೫೪) ೨೫ ವರ್ಷಗಳ ಸೇವೆ ಸಲ್ಲಿಸಿ ಇಂಡಿಯಾಕ್ಕೆ ಬಂದರು. ಹಾಲೆಂಡಿನಲ್ಲಿ ಪ್ರಳಯ ಉಂಟಾದಾಗ ಭಾರತೀಯ ರೆಡ್ ಕ್ರ್ರಾಸ್ ಸಂಸ್ಥೆಯ ಮೂಲಕ ಅವರು ಅಲ್ಲಿ ಸೇವೆಗೆ ನಿಯೋಜಿತರಾದರು. ಅವರ ಸೇವೆಯನ್ನು ಗುರುತಿಸಿ ಹಾಲೆಂಡ್ ಸರ್ಕಾರವು ಅವರ ಬೆನ್ನು ತಟ್ಟಿ ಕುಷ್ಟರೋಗ ಚಿಕಿತ್ಸೆಗೆ ನೆರವು ನೀಡಿ ಅವರನ್ನು ಇಂಡಿಯಾಕ್ಕೆ ಮರಳಿಸಿತು.
ಅದೇ ಸಂದರ್ಭದಲ್ಲಿ ಕುಷ್ಠರೋಗಕ್ಕೆ ಬಲಿಯಾಗಿ ಮದ್ರಾಸು ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟ ಜಗದೀಶನ್ ಎಂಬ ಪ್ರೊಫೆಸರು ಇವರ ಜೊತೆಗೂಡಿ ಬೆಲ್ಜಿಯನ್ ಕುಷ್ಠರೋಗ ಕೇಂದ್ರವನ್ನು ಪ್ರಾರಂಭಿಸಿದರು. ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ಆ ಕೇಂದ್ರ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಅವರ ಜನಪರ ಕಾರ್ಯಗಳನ್ನು ಗುರುತಿಸಿದ ಇಂಡಿಯಾ ಸರ್ಕಾರವು ಅವರನ್ನು ವಿಶ್ವ ಆರೋಗ್ಯ ಸಂಸ್ಥೆಗೆ ತನ್ನ ಪ್ರತಿನಿಧಿಯಾಗಿ ಕಳಿಸಿತು. ಅವರ ಐದು ಮಕ್ಕಳಲ್ಲಿ ಒಬ್ಬರಾದ ಹೇಮರಾಜ್ ಇಂದು ಇಂಡಿಯಾದಲ್ಲಿ ನೆಲೆಗೊಂಡಿದ್ದಾರೆ.
ಹೇಮರಾಜ್ ಜುಬ್ಬಾ ತೊಟ್ಟು ಬರಿಗಾಲಲ್ಲಿ ನಡೆಯುತ್ತಾ ಗುಡಿ ಚರ್ಚು ಮಸೀದಿಯೆನ್ನದೆ ಎಲ್ಲೆಡೆ ಸಲೀಸಾಗಿ ಪ್ರವೇಶಿಸುತ್ತಾರೆ. ಮನುಷ್ಯತ್ವವನ್ನು ದೂರಮಾಡುವ ಧರ್ಮ ಸಂಸ್ಕೃತಿ ಮುಂತಾದ ಎಲ್ಲ ಬಂಧನಗಳನ್ನೂ ನಾನು ಕಳಚಿದ್ದೇನೆ ಎನ್ನುತ್ತಾರವರು. ೪೨ವರ್ಷಗಳ ಹಿಂದೆ ಪುಣೆಯ ಪೇಪಲ್ ಸೆಮಿನರಿಗೆ ಸೇರಿಕೊಂಡ ಅವರು ಕ್ರೈಸ್ತಗುರುವಾಗಿ ಸೇವೆ ಮಾಡಲು ರಾಂಚಿಗೆ ನಿಯುಕ್ತರಾದರು. ಆ ನಂತರ ಧರ್ಮಗ್ರಂಥಗಳ ಬಗ್ಗೆ ಸ್ನಾತಕೋತ್ತರ ಪದವಿಗಾಗಿ ರೋಮಿನ ಬಿಬ್ಲಿಕಲ್ ಯೂನಿವರ್ಸಿಟಿ ಸೇರಿದರು. ಆದರೆ ಅವರ ಮನಸ್ಸು ವಿದೇಶದ ಕೃತಕ ಜೀವನಕ್ಕಿಂತ ಕೊಳಚೆ ಪ್ರದೇಶದಲ್ಲಿನ ಜೀವಂತಿಕೆಗಾಗಿ ತುಡಿಯುತ್ತಿತ್ತು. 
ಅಶೋಕನ ಶಿಲಾಲಿಪಿಯ ಬಗ್ಗೆ ಅವರು ಡಾಕ್ಟರೆಟ್ ಪಡೆದಿರುವ ಅವರು ಹಿಂದೀ ಬೈಬಲ್ ಅನುವಾದದ ಸಾರಥ್ಯ ವಹಿಸಿದ್ದಾರೆ. ಸರಳ ಸುಲಲಿತವಾಗಿ ಹಿಂದೀ, ಇಂಗ್ಲಿಷ್, ಫ್ರೆಂಚ್, ಡಚ್ ಮತ್ತು ಜರ್ಮನ್ ಭಾಷೆಗಳನ್ನಾಡುವ ಹೇಮರಾಜರು ಸಂಸ್ಕೃತ, ಲತೀನ್, ಹೀಬ್ರೂ ಮತ್ತು ಗ್ರೀಕ್ ಭಾಷೆಗಳ ಪರಿಚಯ ಹೊಂದಿದ್ದಾರೆ. ಈಗ ಅವರು ಕನ್ನಡ ಕಲಿಯುತ್ತಿದ್ದಾರಲ್ಲದೆ ನಮ್ಮ ದೇಶೀ ಶೈಲಿಯ ಉಡುಗೆ ತೊಡುಗೆ ಆಚಾರ ವಿಚಾರಗಳನ್ನು ರೂಢಿಸಿಕೊಂಡು ಶುದ್ಧ ಸಸ್ಯಾಹಾರಿಯಾಗಿದ್ದಾರೆ.
ಅವರ ಮನೆಗೆ ಯಾರು ಹೋದರೂ ಅಲ್ಲಿ ವಿದೇಶೀ ಸಂಸ್ಕೃತಿಯನ್ನು ಕಾಣಲಾಗದು. ಅವರ ಹಿಂದೀ ಅತ್ಯಂತ ಶುದ್ಧ, ಅವರ ಬೈಬಲ್ ಹಿಂದೀಯಲ್ಲಿದೆ. ಅವರ ಗೋಡೆಗಳ ಮೇಲೆ ಭಗವದ್ಗೀತೆಯ ಸಾಲುಗಳುಳ್ಳ ಸುಂದರ ಫಲಕಗಳಿವೆ ಮತ್ತು ಭಾರತೀಯ ಚಿತ್ರಕಲೆಗಳಿವೆ. ಅವರ ಅಧ್ಯಯನ ಕೋಣೆಯಲ್ಲಿ ಎಲ್ಲ ಧರ್ಮಗಳ ಧರ್ಮಗ್ರಂಥಗಳಿವೆ. 
ಭಾನುವಾರ ಗೀತಾ ವಾಚನ, ಸೋಮವಾರ ಪಹ್ಲಾವೀಗಾಥ, ಮಂಗಳವಾರ ಪ್ರಾಕೃತಸೂತ್ರ, ಬುಧವಾರ ಪಾಳಿಪದ, ಗುರುವಾರ ಗುರುಮುಖಿಜಪ, ಶುಕ್ರವಾರ ಕುರಾನ್ ಪಠನ, ಶನಿವಾರ ತೋರಾ ಓದುವ ಅವರು ಸಂಜೆಗಳಲ್ಲಿ ಪವಿತ್ರ ಬೈಬಲ್ ವಾಚಿಸುತ್ತಾರೆ. ಹೀಗೆ ಸರ್ವಧರ್ಮಗಳಿಂದ ಸ್ವಧರ್ಮವನ್ನು ಆಚರಿಸುವ ಆದರ್ಶ ಬೆಳೆಸಿಕೊಂಡಿದ್ದಾರೆ. 
"ಧರ್ಮವನ್ನು ತಿಳಿಯದವನು ಕೋಮುವಾದ ಮಾಡುತ್ತಾನೆ, ಧರ್ಮದ ಆಳಕ್ಕಿಳಿದವನು ನಿಜಮನುಷ್ಯನಾಗುತ್ತಾನಲ್ಲದೆ ಎಲ್ಲ ಧರ್ಮಗಳನ್ನೂ ಪ್ರೀತಿಸುತ್ತಾನೆ" ಎನ್ನುತ್ತಾರವರು.