ಬೆಳಗ್ಲಿಂದಾ ಬೈಗಿನ್ತನ್ಕ ಕಡ್ಲಿಂದೇ ಗೀಳು !
ಅಮ್ಮ-ಮಗ, ಮುಳುಗುವ ಸೂರ್ಯನನ್ನು ತಡೆಯುವ ಪ್ರಯತ್ನದಲ್ಲಿದ್ದಾರೆಯೇ !
ಎಷ್ಟು ಚಿತ್ರಗಳನ್ನು ತೆಗೆದರೂ ಮನಸ್ಸಿಗೆ ಸಮಾಧಾನವಿಲ್ಲ. ಅದೇನೋ ಇನ್ನೂ-ಬೇಕು ಮತ್ತೂ ಬೇಕೆನ್ನಿಸುವ ಮನೋಭಾವ..
ನಾವೂ ಮಕ್ಳ ತರ್ಹ, ಬೆಳಿಗ್ಗೆ ಆಗೋದೆ ಕಾಯ್ತಿದ್ದು, ಕಡಲಿನ್ ಹತ್ರ ಓಡೋಗಿ, ಅಲೆಗಳ ಜೊತೆ ಆಟ ಆಡ್ತಿದ್ವಿ. ಆಗ ಬಹುಶಃ ಹೆಚ್ಚಿನ ಆರ್ಭಟ ಸಮುದ್ರರಾಜಂದು ಇರ್ತಿರ್ಲಿಲ್ಲ. ಆಮೇಲೆ ಸೂರ್ಯ ನೆತ್ತಿಮೇಲೆ ಬಂದಂಗೆಲ್ಲಾ ಆತ್ನ್ ಆಟ ಶುರು ನೋಡಿ. ನಿನ್ನೆ ಅಲ್ಲೆಲ್ಲೋ ದೂರ್ದಲ್ಲಿ ಮೂಡಿದ್ದ ಮರಳ ಇಂಗಿತ ಇವತ್ತ, ಇನ್ನೂ ಮೇಲಕ್ಕೆ ಬಂದಿದೆ. ಅಲ್ಲಿನ ಬೆಸ್ತರೋ ಮೀನ್ ಹಿಡಿಯಕ್ಕೆ ಸಿದ್ಧತೆ ಮಾಡಿದ್ದೂ ಮಾಡಿದ್ದೆ. ಅವರ ಸಿಕ್ ಹಾಕ್ಕೊಂಡಿದ್ದ ಗಂಟಿನ ಮೀನಿನ ಜಾಲದ ಎಳೆಗಳನ್ನು ಬಿಡ್ಸಿ, ಸಮುದ್ರಕ್ಕೆ ತಮ್ಮ ದೋಣಿನಾ ನೂಕಿ, ಮತ್ತೆ ಅದ್ರಲ್ಲಿ, ಹಾರಿ ಬಿರುಸಿನಿಂದ ತಮ್ಮ ಕಾರ್ಯಚರಣೆಯ ಶುಭಾರಂಭ ಮಾಡೊದನ್ನ ನೋಡೋದೆ ಚೆನ್ನ....
ಬೈಗಿನ ಕಡಲಿನ ದೃಶ್ಯ....
ಇಲ್ಲಿಂದಲೇ ನಮ್ಮ ದಿನ ಪ್ರಾರಂಭ, ಮತ್ತೆ ಮುಕ್ತಾಯ ಸಹಿತ....
ಮಲ್ಪೆ ಸಮುದ್ರ ತೀರದಲ್ಲಿ.....
ಮಲ್ಪೆ ಕಡಲ ತೀರದಲ್ಲಿ ನಾವು....
-ಚಿತ್ರ. ವೆಂಕಟೇಶ್ ಮತ್ತು ಪ್ರಕಾಶ್.