ಕನಸುಗಳ ನನಸಾಗಿಸುತ್ತಾ: ಇತ್ತೀಚಿನ ದಿನಗಳು

ಕನಸುಗಳ ನನಸಾಗಿಸುತ್ತಾ: ಇತ್ತೀಚಿನ ದಿನಗಳು

ಹಿಂದಿನಂತಿಲ್ಲದ ಈ ದಿನಗಳಲ್ಲಿ ಬದಲಾಗಿದ್ದಾದರೂ ಏನು?

ಬರೀಲೇ ಬೇಕು ಅನ್ನಿಸ್ತಿದೆ. ಬರೆದು ಬಿಡ್ತೀನಿ..  ಕಳೆದ ಒಂದುವರೆ ತಿಂಗಳಿನಿಂದ ಅಲ್ಲಲ್ಲಿ ಕಂಡು ಬಂದ ಸುಂದರ ಚಿತ್ರಗಳ ಮೇಲೆ ಕವನಗಳ ಹೊರೆತು (ನನ್ ಮನದಲ್ಲಿ) ಬೇರೆ ಬರೆದದ್ದೇ ಇಲ್ಲ.. ಬರೀ ಬೇಕು ಅನ್ನಿಸಿದರೂ, ಬರೆಯುತ್ತಿದ್ದ ಆ ದಿನಗಳ ನೆನಪು ನನ್ನ ನಾನೇ ಬೈದುಕೊಳ್ವಂತೆ ಮಾಡುತ್ತಿದ್ದರೂ ಬರೆವುದರಿಂದ ಸ್ವ್ವಲ್ಪ ದೂರವೇ ಇರುವಷ್ಟು ಬ್ಯುಸಿಯಾಗುವಂತಾಗಿತ್ತು ಜೀವನದಲ್ಲಿ.. ಅಂದು ಕೊಂಡಂತೆ ೨೦೧೦ ನಿಜವಾಗ್ಲೂ ನನ್ನ "ರೆಸ್ಟ್ ಲೆಸ್" ಜೀವಿಯಂತಾಗಿಸಿರುವುದಂತೂ ನಿಜವೇ ಅನ್ನಿ. ಆದರೂ ಇದರಲ್ಲೇನೋ ಹೊಸತಿದೆ. ನಾನು ಮಾಡಿದ್ದು  ಕೂಡ ಹೊಸತೆನಿಸುವಂತಿದೆ.  ನಾಲ್ಕು ಗೋಡೆಗಳ ಮಧ್ಯೆಯಿಂದೆದ್ದು ಬಂದ ದಿನಗಳೆಷ್ಟೋ, ಗೆಳೆಯರೊಳಗೂಡಿ ಮಾತಾಡಿದ, ನಲಿದಾಡಿದ, ಹೊರಗೆ ಸುತ್ತಾಡಿದ ಸಮಯವೆಷ್ಟೊ... ಕಂಪ್ಯೂಟರಿನ ಪರದೆಯ ಮೇಲಿಂದ ಕಣ್ಣ ಸರಿಸಿ ಹಸಿರಲ್ಲಿ ಮನೆ ಮಾಡಿದ ಜೀವ ಸಂಕುಲವ ಕಂಡು ಮತ್ತೊಮ್ಮೆ ಮಗದೊಮ್ಮೆ ನಾನಿತ್ತ ಕಾಲಿಡಲೇ ಬೇಕು ಎಂಬಷ್ಟು ಮನಸ್ಸನ್ನು ಸೆರೆಹಿಡಿದ ಪ್ರಕೃತಿಯ ಮಡಿದಲ್ಲಿ ನನ್ನ ನಾನೇ ಅರ್ಪಿಸಿಕೊLLಅಲು ನನ್ನ ಮನದ ಅಳಲು ಎಲ್ಲ ಗೋಡೆಗಳಿಗೂ ತಿಳಿದಿದೆ ಎನಿಸಿದೆ.. ಅವೂ ನನ್ನ ಕಂಡು ಹೊರಾಗೋಗಿ ಬಾರ್ಲೇ ಎಂದಂತಿದೆ..

ಕೆಲಸ ಎಂದರೆ ಅದೇ ಎಲ್ಲ ಎಂದುಕೊಂಡಿದ್ದಂತಹ ದಿನಗಳೂ ಇದ್ದವು.. ಅದನ್ನು ಬಿಟ್ಟು ಹೊರಗಿನ ಲೋಕದಲ್ಲಿ ದೊಡ್ಡ ದೊಡ್ಡ ಮಾಲ್, ಒಂದೆರಡು ಸಿನಿಮಾ ಇತ್ಯಾದಿ ಅಷ್ಟೇ ಎಂದು ಅದನ್ನೂ ನೋಡಿ ಬಿಟ್ಟ ಮತ್ತೊಂದಿಷ್ಟು ದಿನಗಳು.. ನಂತರ ದಿನಗಳು ಬದಲಾದಂತಾಗಿ... ಜೊತೆ ಸಿಕ್ಕ ಹೊಸ ಗೆಳೆಯರ ಒಡನಾಟ ಹೊಸ  ದೃಷ್ಟಿ ಕೋನದಿಂದ ನನ್ನ ದಿನಚರಿಯನ್ನು ನೋಡಿಕೊಳ್ವಂತೆ ಮಾಡಿಯೇ ತೀರಿದರು.. ಮೊದಲಿಗೆ ಅಷ್ಟೇನೂ ಪರಿಣಾಮ ಬೀರದಿದ್ದರೂ, ಇಂದಿನ ನಾನು ಸ್ವಲ್ಪ ಹೊಸತಾಗಿಯೆ ಚಿಂತಿಸುತ್ತಿರುವುದಂತೂ ನಿಜ. ನನ್ನ ಜೀವನದಲ್ಲಿನ "ರೆಸ್ಟ್ರಿಕ್ಷನ್" ಗಳ ಬಗೆಗೆ ಅರಿತೆನಾದ್ದರಿಂದ ಆರಕ್ಕಿಳಿಯದೆ, ಮೂರಕ್ಕೇಳದೆ ಹೊಸತನವನ್ನೂ ನನ್ನ ಜೀವನದಲ್ಲಿ ಅಳವಡಿಸುತ್ತಾ, ಕೆಲಸದ ಹೊರಗಿನ ಲೋಕದಲ್ಲೂ ಸುತ್ತಲಿಕ್ಕೆ ಪ್ರಯತ್ನಿಸುತ್ತಿದ್ದೇನೆ..

ಹೊಸತನವೊಂದು ನಮ್ಮಲ್ಲಾಸುಹೊಕ್ಕಾಗಿ ಬರಲಿಕ್ಕೆ ಆ ಒಂದು ಹೊಸ ಮಜಲು ನಮ್ಮ ಜೀವನದಲ್ಲಿ ತೂರಿ ಬರಲಿಕ್ಕೂ ಸಾಕು, ಮಾಡುವ ಕೆಲಸದ ಜೊತೆಗೆ  ನನಸಾಗಿಸಲೇ ಬೇಕೆಂದಿರುವ ಅನೇಕ ಕನಸುಗಳು  ರಂಗು ರಂಗಿನ ಓಕುಳಿಯಾಟದಂತೆ ರಭಸವಾಗಿ ಬಣ್ಣ ಹಚ್ಚಲಿಕ್ಕೆ ಶುರು ಮಾಡುತ್ತವೆ..

Rating
No votes yet

Comments