ಕೇಳುವವರಿಲ್ಲ ನನ್ನೀ ವ್ಯಥೆ

ಕೇಳುವವರಿಲ್ಲ ನನ್ನೀ ವ್ಯಥೆ

ನನ್ನ ಹೆಸರು ವಿದ್ಯಾ, ನನಗೆ ೧೨  ವರ್ಷ ನನ್ನ ಗೆಳತಿ ಪಕ್ಕದಮನೆ ಹುಡುಗಿ ಸ್ಫೂರ್ತಿ. ನನ್ನೂರು ಶಿವಮೊಗ್ಗದಿಂದ ೨೦ ಕಿ.ಮೀ. ನಮ್ಮೂರಿಗೆ ಒಂದೇ ವ್ಯಾನ್ ದಿನಕ್ಕೆ ೨ ಬಾರಿ ಶಿವಮೊಗ್ಗಕ್ಕೆ ಹೋಗಿ ಬರತ್ತೆ. ಅದು ಬಿಟ್ರೆ ಇನ್ನ್ಯಾವುದೇ ವಾಹನಗಳಿಲ್ಲ. ನಾನು, ಸ್ಫೂರ್ತಿ ಪ್ರತಿ ದಿನ ನನ್ನೂರಿನ ಗೆಳೆಯ, ಗೆಳತಿಯರೊಂದಿಗೆ ಅದೇ ವ್ಯಾನಲ್ಲಿ ಶಿವಮೊಗ್ಗಕ್ಕೆ ಶಾಲೆಗೆ ಹೋಗಿಬರ್ತೇವೆ.

ಆದರೆ ನಮ್ಮಮ್ಮ ಹೇಳ್ತಿದ್ರು ಇವತ್ತು ಏನೋ ಗಲಾಟೆಯಾಗಿ ಆ ವ್ಯಾನನ್ನ ಸುಟ್ಟುಹಾಕಿದ್ದಾರೆ ಅಂತ.

ಪರೀಕ್ಷೆ ಬೇರೆ ಇದೇ ತಿಂಗಳು, ಶಾಲೆಗೆ ಹೋಗೋದಕ್ಕೆ ವ್ಯವಸ್ಥೆ ಇಲ್ಲ. ನನ್ನೂರಿಗೆ ಬರುತ್ತಿದ್ದ ವ್ಯಾನ್ ಸಹ ಈಗ ಇಲ್ಲವಾಗಿದೆ.....

Rating
No votes yet