ಸ್ವಾಮಿ "ಮಹಿಮೆ"...!
ಬರಹ
ಕಂಡ-ಕಂಡವರೆಲ್ಲಾ "ಸ್ವಾಮಿ" ಗಳಾಗಿ,
"ಸನ್ಯಾಸ" ಸ್ವೀಕರಿಸುವರು.....
ಜನರ ಬಳಗವ ಸೇರಿಸಿ,
ಮಠ-ಮಂದಿರವ ಕಟ್ಟುವರು....
ಹಣದ ಹೊಳೆ ತಮ್ಮತ್ತ ಹರಿದ ಮೇಲೆ,
ವಿವಿದೆಡೆ "ಬ್ರಾಂಚ್" ತಗೆವರು...
"ಸತ್ಸಂಗ್ - ಯೋಗದ" ನೆಪದಲ್ಲಿ,
"ಭಕ್ತ" ರ ಸೆಳೆವರು....
ಮಠಕ್ಕೆ ಪೂಜೆ-ಪುರಸ್ಕಾರವ ಕೇಳಿ,
ತಮ್ಮ ಸ್ವ-ಸೇವೆ ಮಾಡಿಕೊಳ್ಳುವರು....
ಮನದ "ಆಸೆ" ಕೆರಳಿತೆಂದರೆ,
"ಪಲ್ಲಂಗ" ವನ್ನೂ ಏರುವರು....
ಏಲ್ಲರಿಗೂ ಅದ "ನಿಗ್ರಹಿಸು" ಇದ "ನಿಗ್ರಹಿಸು" ಎನ್ನುವ ಇವರು,
ತಮ್ಮನ್ನೇ "ನಿಗ್ರಹ" ಸಿಕೊಳ್ಳದಷ್ಟು ಹೀನರು...
ಇವರನ್ನು ನಂಬಿದ "ಭಕ್ತ" ಮಹಾಶಯರು,
"ಕೊಟ್ಟು-ಕೊಟ್ಟು" ಆದರು "ಕೋಡಂಗಿಗಳು"...!