ತನ್ನನ್ನು ಮೊದಲು ಪ್ರೀತಿಸು

ತನ್ನನ್ನು ಮೊದಲು ಪ್ರೀತಿಸು

ಬರಹ

ತನ್ನನ್ನು ಮೊದಲು ಪ್ರೀತಿಸು
 
ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯ ಏನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯ ಏನು ಪ್ರೀತಿಸಲು ತನ್ನನೇ
ಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ  
ಮರೆತೆಯ ಏನು ಪ್ರೀತಿಸಲು ತನ್ನನೇ
ಹರೆಯದ ಹುಚ್ಚು ಸ್ಪರ್ಧೆಯನು ಗೆಲ್ಲುವೆಡೆಯಲಿ 
ಮರೆತೆಯ ಏನು ಪ್ರೀತಿಸಲು ತನ್ನನೇ
ಯೌವನದಿ ಪರರ ಪ್ರೇಮವ ಪಡೆಯುವ ತವಕದಲಿ
ಮರೆತೆಯ ಏನು ಪ್ರೀತಿಸಲು ತನ್ನನೇ
ತನ್ನ ಸಂಸಾರದ ಹೊರೆ ಹೊತ್ತು ದಡ ಮುಟ್ಟುವಲಿ
ಮರೆತೆಯ ಏನು ಪ್ರೀತಿಸಲು ತನ್ನನೇ
ಜೀವನಕೆ ಸಂಪಾದಿಸುವ ನೀ ಪಡುವ ಶ್ರಮದಲಿ
ಮರೆತೆಯ ಏನು ಪ್ರೀತಿಸಲು ತನ್ನನೇ
ಜೀವನದ ಪುಟವೊಮ್ಮೆ ತಿರುಗಿಸು, ಅಲಕ್ಷಿಸಿದ್ದೆಯ ತನ್ನನೇ
ನಿನ್ನೇ ಮನ ಬಿಚ್ಚಿ ಪ್ರೀತಿಸು, ಜೀವನೋತ್ಸಾಹವನ್ನು ಹೆಚ್ಚಿಸು  
ಆದ್ಯತೆ ಕೊಡು ಬದುಕಿನ ಲಕ್ಷ್ಯಕ್ಕೆ, ಹೆಚ್ಚಿಸು ಜೀವನದ ದಕ್ಷ್ಯತೆ
 
- ತೇಜಸ್ವಿ.ಎ.ಸಿ 


 ಸಂದೇಶ:
ಜೀವನದ ಭರಾಟೆಯಲಿ, ಪರಿಸ್ಥಿತಿಗೊಳಗಾಗಿ, ಬೇರೆಯವರಿಗಾಗಿ ಬದುಕುವುದೇ ಹೆಚ್ಚು. ನಮ್ಮ ಆಸೆಗಳನ್ನು, ನಮ್ಮ ಸಂತೋಷವನ್ನು ಹಾಗು ತನ್ನನ್ನು ನಿರ್ಲಕ್ಷಿಸುವುದು ಸಾಮಾನ್ಯ. ಒಮ್ಮೆ  ತನ್ನ ಬದುಕಿನ ಆಸಕ್ತಿಯುತ ವಿಷಯಗಳಿಗೆ ಗಮನವಿತ್ತರೆ ಜೀವನೋತ್ಸಾಹ, ಬದುಕಿನ ಮೇಲಿನ ಪ್ರೀತಿ ಇಮ್ಮಡಿಯಾಗುವುದು.  ಇದೇ ನಾ ಹೇಳಲು ಇಚ್ಚಿಸುವ ವಿಷಯ.