ಇವತ್ತು ಏನ್ ತಿಂಡಿ ಮಾಡ್ಲೀ....

ಇವತ್ತು ಏನ್ ತಿಂಡಿ ಮಾಡ್ಲೀ....

ಇವತ್ತು ಏನ್ ತಿಂಡಿ ಮಾಡ್ಲೀ....


ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು.  ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು.  ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು.  ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.


ಅಬ್ಬಬ್ಬಾ!!!!  ಅದಿರಲಿ ಬಿಡಿ.  ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು.  ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ.  ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!!  ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ.  ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....


ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????


ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ.  ಅದೇ ತಿಂಡಿಯ ವೇಳಾಪಟ್ಟಿ ;)


ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ.  ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ.  ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.


ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).


ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ.... :D

Rating
No votes yet

Comments