ಕಬ್ಬನ್ ಪಾರ್ಕಿನಲ್ಲಿ ಒಂದು ಸುಂದರ ಸಂಜೆಗೆ ಆಹ್ವಾನ.
ಬರಹ
ಆತ್ಮೀಯ ಸಂಪದಿಗರೆ,
ಸುಮಧುರ ಗೀತೆಗಳನ್ನು ಕೇಳುತ್ತಾ ಎಲ್ಲರ ಪರಿಚಯ ಮಾಡಿಕೊಳ್ಳುವ ಒಂದು ಸುಂದರ ಸಂಜೆಗೆ ನಿಮಗೆ ಆಹ್ವಾನ.
ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಸುಂದರವಾದ ಕಾರ್ಯಕ್ರಮವೊಂದು ಇದೇ ಭಾನುವಾರ ನಡೆಯುತ್ತಿದೆ. "ಪ್ರಕೃತಿ" ತಂಡದವರು ಪ್ರತಿ ಭಾನುವಾರದ ಸಂಜೆ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ. ಈ ವಾರ ಜಯಂತ ಕಾಯ್ಕಿಣಿಯವರ ಗೀತೆಗಳನ್ನು ಹಾಡಲಿದ್ದಾರೆ, ವಾಯ್ಸ್ ಆಫ್ ಬೆಂಗಳೂರು ಖ್ಯಾತಿಯ ಗಾಯಕರಾದ ವ್ಯಾಸರಾಜ್, ಸಂತೋಷ್, ಪೂಜಾರಾವ್ ಮತ್ತು ಸುವರ್ಣ ರಾಥೋಡ್.
ಅತಿಥಿಗಳಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರಾದ ವಿಷ್ಣುಕುಮಾರ್ ಹಾಗೂ ಕವಿ ಜಯಂತ ಕಾಯ್ಕಿಣಿ.
ಸಮಯ: ಸಂಜೆ ೫ ರಿಂದ ೭, ೧೪/೩/೨೦೧೦,
ದುಬೈನಿಂದ ಸ್ವಲ್ಪ ಜರೂರು ಕೆಲಸಕ್ಕಾಗಿ ಬಂದವನು ಮುಂದಿನ ವಾರ ಹಿಂತಿರುಗುತ್ತಿದ್ದೇನೆ. ಸಿಗುವ ಅಲ್ಪ ಸಮಯದಲ್ಲಿ ಭೇಟಿಯಾಗೋಣ. ಬರುವಿರಲ್ಲವೇ ? ನನ್ನ ಮೊಬೈಲ್: ೯೬೨೦೯೩೬೫೭೬.
ಹೊಳೆ ನರಸಿಪುರ ಮಂಜನಾಥ.