ದೇವರು

ದೇವರು

ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ.  ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.

ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.

ನಿನಗೆ ಎಷ್ಟು ಜನ ಪರಿಚಯ?

ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ ಎಂದ.

೧೦೦೦೦ ಜನಗಳ ಬಿಟ್ಟು ಬೇರೆ ಜನಗಳೇ ಗೊತ್ತಿಲ್ಲ ನಿನಗೆ. ಆದಿ ಕಾಲದಿಂದಲೂ ಕೋಟಿ ಕೋಟಿ ಜನ ನಂಬಿರುವ ದೇವರ ಬಗ್ಗೆ ಅನುಮಾನವಾ?... ಎಂದರು.

ಮತ್ತೊಂದು  ಪ್ರಶ್ನೆ ಮುಂದಿಟ್ಟರು.

ನಿನ್ನ ಇರುವಿಕೆ ಹೇಗೆ ಸಮರ್ಥಿಸುವೆ ಎಂದು.

ನಾನು ನಿಮ್ಮ ಜೊತೆ ಮಾತನಾಡುತ್ತಿರುವೇನಲ್ಲ ಎಂದ.

ನೀನು ಹೇಗೆ ಧರೆಗೆ ಬಂದೆ.

ನನ್ನ ತಂದೆ ಮತ್ತು ತಾಯಿಗಳಿಂದ.

ಹಾಗೆ ನಿನ್ನ ತಂದೆ ಇರುವಿಕೆ ಸಮರ್ಥಿಸು ಎಂದರು.

ನನ್ನ ಅಜ್ಜ ಮತ್ತು ಅಜ್ಜಿ ಎಂದ.

ಮತ್ತೆ ನಿಮ್ಮ ಅಜ್ಜನ ಇರುವಿಕೆ ಸಮರ್ಥಿಸು ಎಂದರು.

ಅವನು ಮತ್ತೆ ಮುತ್ತಜ್ಜ ಮಾತು ಮುತ್ತಜ್ಜಿ ಎಂದ.

ಹಾಗೆ ಮತ್ತೆ ಮುತ್ತಜ್ಜ  ಇರುವಿಕೆ ಸಮರ್ಥಿಸು ಎಂದರು.

ಅವನು ಹಾಗೆ ಗಿರಿ ಮುತ್ತಜ್ಜ ಮತ್ತು ಗಿರಿ ಮತ್ತಜ್ಜಿ ಎಂದ..

ನಿನ್ನ ಗಿರಿ ಮುತ್ತಜ್ಜ ಇದ್ದ .. ಅಂತ ಹೇಗೆ ಹೇಳುವೆ ನೀನು ಹೇಳುವದೆಲ್ಲ ಸುಳ್ಳು ಎಂದರು .....ಈಗ ಅವರನ್ನು ತೋರಿಸು ಎಂದರು.

ಆಗ ಅವನ ತಪ್ಪಿನ ಅರಿವಾಗಿ ಆ ಸಾಧುಗಳ ಶಿಷ್ಯನಾಗಿ ಹೋದ.
Rating
No votes yet

Comments