ಗುಪ್ ಚುಪ್!

ಗುಪ್ ಚುಪ್!

ಅವಳು ತುಂಡು ಲಂಗ ತೊಟ್ಟು ಇತರ ಮಕ್ಕಳೊಂದಿಗೆ ಕುಂಟ ಬಿಲ್ಲೆ, ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ ಹುಡುಗಿ. ಬೇಲಿಯ ಬಳಿ ನೆಟ್ಟ ದಾಸವಾಳದ ಗಿಡದ ಎಡೆಯಿಂದ ಅವ ಅವಳನ್ನೇ ನೋಡುತ್ತಿದ್ದ. ಕಣ್ಣು ಮುಚ್ಚಿ 1,2,3,4.......ಅವಳು ಹೇಳಿದಾಗ ಜೊತೆಗಿದ್ದವರೆಲ್ಲಾ ಸಂಕದ ಕೆಳಗೆ, ಗೇರು ಮರದ ಅಡ್ಡಕ್ಕೆ ನಿಂತು ಮರೆಯಾದರು. ಆದರೆ ಅವ ಅವಳನ್ನೇ ನೋಡ್ತಾ ಇದ್ದ. ಯಾರೂ ಇಲ್ಲದನ್ನು ನೋಡಿ ಅವಳ ಪಕ್ಕ ಬಂದು ಕೈಗೆ ಮಿಠಾಯಿ ಕೊಟ್ಟು, ಮುದ್ದಿಸಿದ.... ಥ್ಯಾಂಕ್ಯೂ ಮಾಮಾ...ಎಂದು ಅವಳು ಸಂತೋಷದಿಂದ ನಲಿಯುತ್ತಾ ಗೆಳತಿಯರ ಗುಂಪಿನೊಂದಿಗೆ ಸೇರಿದಳು.


ಇದು ಮಿಡಿ, ಇನ್ನೂ ಸ್ವಲ್ಪ ಕಾಯೋಣ ಎಂದು ಅವ ಕಾದ. ಅವಳನ್ನು ಹೇಗಾದರೂ ಮಾಡಿ ತೆಕ್ಕೆಗೆ ಹಾಕಬೇಕೆಂದು ಹೊಂಚು ಹಾಕಿದ. ಹುಡುಗಿ ದೊಡ್ಡವಳಾದಳು. ಅವನಿಗೆ ಸಂತೋಷ. ಯಾರೂ ಇಲ್ಲದ ವೇಳೆ ಅವಳಲ್ಲಿಗೆ ಬಂದ. ಅವಳನ್ನು ತೆಕ್ಕೆಯಲ್ಲಿ ಬಂಧಿಸಿ ಮಧು ಹೀರಿದ. ಅವಳು ಬೇಡ ಎಂದರೂ ಅವ ಬಲವಂತವಾಗಿ ಮಾಡಿದ. ಹೊರಡಬೇಕಾದರೆ ಚಾಕ್ಲೆಟ್ ಕೊಟ್ಟು ಯಾರಲ್ಲಿಯೂ ಹೇಳ್ಬೇಡ ಎಂದ. ಗದರಿಸಿದ. ಅವಳು ಚುಪ್! 


ಅವ ಮತ್ತೆ ಬಂದ. ಹಾಗೇ ಮಾಡಿದ. ಅವಳು ಬೇಡ ಎನ್ನಲಿಲ್ಲ. ಎಲ್ಲಾ ಮುಗಿಯಿತು. ಈ ಬಾರಿ ಅವಳು ಹಠ ಹಿಡಿಯದಿರುವುದನ್ನು ನೋಡಿ ಅವನಿಗೆ ಸಂತೋಷವಾಯ್ತು. ಎರಡು ಚಾಕ್ಲೆಟ್ ಕೊಟ್ಟು ತಗೋ ಎಂದ. ಮಿನಿಮಮ್ 500 ಎಂದಳು. ಅವ ಚುಪ್!

Rating
No votes yet