ವಿಜ್ಞಾನಿ, ಅನುಮಾನ ಮತ್ತು ಅನಿಶ್ಚಿತತೆ:ರಿಚರ್ಡ್ ಫೆಯ್ನ್ ಮನ್ ಚಿಂತನೆ
ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ಈ ಯೂ-ಟ್ಯೂಬ್ ವಿಡಿಯೋ ದಲ್ಲಿ ಇರುವ ಮಾತುಕತೆಯನ್ನು ಅನುವಾದಿಸಲು ಪ್ರಯತ್ನ ಮಾಡಿದ್ದೇನೆ.
ನನಗೆ ಬಹಳ ಇಷ್ಟ ವಾದ ಭಾಗ:
"ನೋಡಿ, ಅನುಮಾನ, ಅನಿಶ್ಚಿತತೆಗಳ, ಗೊತ್ತಿಲ್ಲದಿರುವಿಕೆಗಳ ಜೊತೆ ನಾನು ಬದುಕಬಲ್ಲೆ. ಗೊತ್ತಿಲ್ಲದೇ ಬದುಕುವುದು ತಪ್ಪಾಗಿರಬಹುದಾದ ಉತ್ತರಗಳನ್ನು ನಂಬಿ ಬದುಕುವುದಕ್ಕಿಂತ ಹೆಚ್ಚು ಆಸಕ್ತಿಕರ ಎಂದು ನನಗೆ ಅನಿಸುತ್ತದೆ. ನನಗೆ ವಿವಿಧ ವಿಷಯಗಳ ಬಗ್ಗೆ ವಿವಿಧ ನಿಖರತೆಯಲ್ಲಿ ಉತ್ತರಗಳು ಗೊತ್ತಿವೆ. ಆದರೆ ನನಗೆ ಗೊತ್ತಿರುವ ವಿಷಯಗಳ ಬಗ್ಗೆ ಕೂಡ ನನಗೆ 'ಇದೇ ಸರಿಯಾದ ಉತ್ತರ' ಎನ್ನುವ ನಂಬಿಕೆ ಇಲ್ಲ. ನನಗೆ ಏನೇನೂ ಗೊತ್ತಿಲ್ಲದೇ ಇರುವ ವಿಷಯಗಳೂ ಬಹಳ ಇವೆ. 'ನಾವು ಇಲ್ಲಿ ಯಾಕೆ ಇದ್ದೇವೆ' ಎನ್ನುವ ಪ್ರಶ್ನೆಯು ಸೂಕ್ತವೆ? ಸೂಕ್ತವಾದರೆ ಆ ಪ್ರಶ್ನೆಯ ಅರ್ಥವೇನು ಎನ್ನುವುದು ಕೂಡ ನನಗೆ ತಿಳಿದಿಲ್ಲ. ಅದರ ಬಗ್ಗೆ ಸ್ವಲ್ಪ ಯೋಚಿಸುತ್ತೇನೆ, ಗೊತ್ತಾಗದಿದ್ದರೆ ಬೇರೆ ಏನನ್ನಾದರೂ ಮಾಡಲು ಹೋಗುತ್ತೇನೆ. ಆದರೆ ನನಗೆ ಅಂತಹ ಪ್ರಶ್ನೆಗಳಿಗೆ ಉತ್ತರ ತಿಳಿಯಲೇ ಬೇಕೆಂಬ ಹಠ ಇಲ್ಲ. ಗೊತ್ತಿಲ್ಲದೇ ಇರುವುದರ ಬಗ್ಗೆ ನನಗೆ ಭಯವಿಲ್ಲ. ಈ ರಹಸ್ಯಮಯವಿಶ್ವ ಬಹುಶಃ ಉದ್ದೇಶರಹಿತವಾದುದು. ಈ ವಿಶ್ವಕ್ಕೆ ಯಾವುದೇ ಗಹನ ಉದ್ದೇಶವಿಲ್ಲ ಎಂದಾದರೆ ನನಗೆ ಭಯವಿಲ್ಲ."
ಪೂರ್ಣ ಮಾತುಕತೆ:
"If you expected science to give all the answers to the wonderful questions about what we are, where we are going what the meaning of the universe is and so on then I think you can easily become disillusioned and then look for some mystic answer to these problems. How a scientist can take a mystic answer I don't know because the whole spirit is to unders...well never mind that, anyway I don't understand that...but anyhow...if you think of it though...I..the way i think of what we are doing is, we are exploring, we are trying to find out as much as we can about the world.
ನಾವು ಯಾರು, ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುತ್ತಿದ್ದೇವೆ, ಈ ಪ್ರಪಂಚದ ಉದ್ದೇಶವೇನು ಈ ಎಲ್ಲ ಪ್ರಶ್ನೆಗಳಿಗೆ ವಿಜ್ಞಾನವು ಸೂಕ್ತ ಉತ್ತರ ಕೊಡುತ್ತದೆ ಎಂದು ನೀವು ನಿರೀಕ್ಷಿಸುತ್ತಿದ್ದರೆ, ನಿಮಗೆ ಭ್ರಮನಿರಸನ ಆಗಬಹುದು. ಆಗ ನೀವು ಆಧ್ಯಾತ್ಮಿಕ ಉತ್ತರಗಳನ್ನೂ ಹುಡುಕಲು ಹೊರಡಬಹುದು. ವಿಜ್ಞಾನಿಯೊಬ್ಬ ಆಧ್ಯಾತ್ಮಿಕ ಉತ್ತರಗಳನ್ನು ಹೇಗೆ ಸ್ವೀಕರಿಸುತ್ತಾನೆ ಎಂದು ನನಗೆ ಗೊತ್ತಿಲ್ಲ. ಯಾಕೆಂದರೆ ವಿಜ್ಞಾನದ ಮೂಲ ಉದ್ದೇಶವೇ ಅರ್ಥ....ಹೋಗಲಿ ಬಿಡಿ. ಅದೆಲ್ಲ ನನಗೆ ತಿಳಿಯುವುದಿಲ್ಲ. ನನ್ನ ಪ್ರಕಾರ ನಾವು (ವಿಜ್ಞಾನಿಗಳು) ಮಾಡುತ್ತಿರುವುದು ಏನೆಂದರೆ, ನಾವು ಅನ್ವೇಶಿಸುತ್ತಿದ್ದೇವೆ, ಪ್ರಪಂಚದ ಬಗ್ಗೆ ನಮಗೆ ಸಾಧ್ಯವಾದಷ್ಟು ಹೆಚ್ಚು ತಿಳಿಯಲು ಪ್ರಯತ್ನಿಸುತ್ತಿದ್ದೇವೆ.
People say to me, "Are you looking for the ultimate laws of physics?" No I am not. I am just looking to find out more about the world. And if it turns out there is a simple ultimate law that explains everything so be it. That would be very nice discovery. If it turns out it's like an onion with millions of layers and we just sick and tired of looking at the layers then that's the way it is! But whatever way it comes out it's nature, it's there, and she's going to come out the way she is. And therefore when we go to investigate we shouldn't pre-decide what it is we are trying to do except to find out more about it. If you said...but..the problem is why we do you find out more about it, if you thought that you are trying to find out more about it because you are going to get an answer to some deep philosophical question you may be wrong and may be that you can't get an answer to that particular question by finding out more about the character of the nature.
ಜನ ನನ್ನನ್ನು ಕೇಳುತ್ತಾರೆ 'ನೀವು ಭೌತ ಶಾಸ್ತ್ರದ ಮೂಲಭೂತ ನಿಯಮಕ್ಕಾಗಿ ಅನ್ವೇಷಣೆ ನಡೆಸುತ್ತಿದ್ದೀರಾ?' ಎಂದು. ಇಲ್ಲ. ನಾನು ಜಗತ್ತಿನ ಬಗ್ಗೆ ಹೆಚ್ಚು ತಿಳಿಯಲು ಅನ್ವೇಷಣೆ ನಡೆಸುತ್ತಿದ್ದೇನೆ ಅಷ್ಟೇ. ಒಂದೊಮ್ಮೆ 'ಭೌತ ಶಾಸ್ತ್ರದ ಮೂಲಭೂತ ನಿಯಮ' ಎಂಬುದೊಂದು ಇದೆ, ಅದು ಎಲ್ಲವನ್ನು ವಿವರಿಸುತ್ತದೆ ಎಂದಾದರೆ ಇರಲಿ ಬಿಡಿ. ಹಾಗಿದೆ ಎಂದು ತಿಳಿದರೆ ಸಂತೋಷ. ಹಾಗಿಲ್ಲದೆ ಪ್ರಪಂಚವು ಕೊಟ್ಯಂತರ ಪದರಗಳ ಈರುಳ್ಳಿಯಂತೆ ಇದ್ದು ನಾವು ಬರೀ ಪದರಗಳನ್ನು ತೆಗೆದು ನೋಡುತ್ತಲೇ ಇರಬೇಕಾಗುತ್ತದೆ ಎಂದರೂ ಪರವಾಗಿಲ್ಲ. ಹಾಗಿ ಇದ್ದರೆ ಹಾಗೆ ಇದೆ ಅಷ್ಟೇ! ಅದು ಹೇಗೆ ಇದೆಯೋ, ಅದೇ ಪ್ರಕೃತಿ. ಆಕೆ (ಪ್ರಕೃತಿ) ಹೇಗಿದ್ದಾಳೋ, ಹಾಗೆ ನಮಗೆ ಕಾಣಿಸುತ್ತಾಳೆ. ಹಾಗಾಗಿ ನಾವು ಅನ್ವೇಷಣೆಗೆ ಹೋಗುವಾಗ ಮೊದಲೇ ಹೀಗಿರಬಹುದೇನೋ ಎಂದು ನಿರ್ಧಾರ ಮಾಡಿಕೊಂಡು ಹೋಗಬಾರದು.ನೀವು ಮೂಲಭೂತ ತಾತ್ವಿಕ ನಿಯಮಕ್ಕಾಗಿ ಅನ್ವೇಷಣೆ ಮಾಡುತ್ತಾ ಹೆಚ್ಚು ಹೆಚ್ಚು ತಿಳಿಯುತ್ತಾ ಹೋದರೆ ಅದು ವ್ಯರ್ಥವಾಗಬಹುದು. ಪ್ರಕೃತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಹೋದಂತೆ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ಭಾವಿಸಲಾಗದು.
But I don't look it at...my interest in science is to simply find out about the world...and the more I find out and...I like to find out...and there are very remarkable mysteries about the fact that we are able to do so many more things and apparently animals can do.
ಹಾಗಾಗಿಯೇ ನಾನು ಅದಕ್ಕಾಗಿ ಹುಡುಕುವುದಿಲ್ಲ. ನನ್ನ ಆಸಕ್ತಿ ಇರುವುದು ಜಗತ್ತಿನ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವುದರಲ್ಲಿ ಅಷ್ಟೇ! ನನಗೆ ಹೆಚ್ಚು ತಿಳಿಯುವುದು ಅಂದರೆ ಇಷ್ಟ. ನಾವು ಇತರ ಪ್ರಾಣಿಗಳಿಗಿಂತ ಎಷ್ಟೋ ಹೆಚ್ಚು ಕೆಲಸಗಳನ್ನು ಮಾಡಬಲ್ಲೆವು ಎನ್ನುವುದರಲ್ಲೇ ಎಷ್ಟೊಂದು ಅಧ್ಬುತ ರಹಸ್ಯಗಳಿವೆ.
And other questions like that. Those are the mysteries I want to investigate without knowing the answer to them. So ...altogether I can't believe the special stories that've been made up about our relationship to the universe at large because they seem to be...too simple, too connected, too local, too provincial. The "earth," He came to "the earth", one of the aspects God came to "the earth!" mind you, and look at what's out there...? how can we...? it isn't in proportion...!
ಈ ಪ್ರಶ್ನೆ ಮತ್ತು ಇದೇ ರೀತಿಯ ಇತರ ಅಧ್ಬುತ ರಹಸ್ಯಗಳನ್ನು -ಉತ್ತರಗಳನ್ನು ಮೊದಲೇ ತಿಳಿಯದೆ- ಅನ್ವೇಶಿಸಬಯಸುತ್ತೇನೆ. ಬ್ರಹ್ಮಾಂಡದ ಮತ್ತು ನಮ್ಮ ಸಂಬಂಧದ ಬಗ್ಗೆ ಇರುವ ವಿಶೇಷ ಕಟ್ಟು ಕಥೆಗಳನ್ನು ನಾನು ನಂಬುವುದಿಲ್ಲ. ಯಾಕೆಂದರೆ ಅವು ತೀರ ಸರಳ ಮತ್ತು 'ಪ್ರಾಂತೀಯ'ವಾಗಿವೆ. "ದೇವರು ಭೂಮಿಗೆ ಬಂದನು" ಭೂಮಿಗೆ! ಪ್ರಪಂಚದಲ್ಲಿ ಇರುವ ಬೇರೆಲ್ಲವನ್ನೂ ನೋಡಿದಾಗ ಇದು ತೀರ ಅಸಮರ್ಪಕ ಅಲ್ಲವೇ?
Anyway it's no use to argue, I can't argue. I am just trying to tell you why the scientific views that I have do have some affect on my beliefs. And also another thing has to do with the question of how do you find out if something is true? And if you have all these theories of the different religions and all different theories about the thing then you begin to wonder...once you start doubting... just like you are supposed to doubt, you asked me if science is true, no no we don't know what is true...no no we don't know, we are trying ......start out understanding religion by saying everything is possibly wrong, let us see, as soon as you do that you start sliding down an edge which is harder to recover from. And one...so with the scientific view or my father's view that we should look to see what's true and what may not be true, once you start doubting ......which I think, to me, is a very fundamental part of my soul is to doubt and to ask, when you doubt and ask it gets a little harder to believe.
ವಾದ ಮಾಡುವುದರಿಂದ ಫಲವಿಲ್ಲ. ನಾನು ವಾದ ಮಾಡಲಾರೆ. ನನ್ನ ವೈಜ್ಞಾನಿಕ ದೃಷ್ಟಿಕೋನ ನನ್ನ ಕೆಲಸದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಿದ್ದೇನೆ ಅಷ್ಟೇ. ಮತ್ತೊಂದು ವಿಷಯ ಎಂದರೆ ಸತ್ಯ ಯಾವುದು ಎಂದು ತಿಳಿಯುವುದು ಹೇಗೆ? ಎಲ್ಲ ಧರ್ಮಗಳು ಕೊಡುವ ವಿವಿಧ ವಿವರಣೆಗಳನ್ನು ಕೇಳಿದ ಮೇಲೆ ಅದರ ಬಗ್ಗೆ ಅನುಮಾನ ಬರುತ್ತದೆ. (ಅನುಮಾನ ಬರಬೇಕು, ಅದು ಸಹಜ , ವಿಜ್ಞಾನವು ಸತ್ಯವೇ ಎಂದರೆ, ಇಲ್ಲ, ನಮಗೆ ಅದು ಸತ್ಯವೇ ಎಂದು ಗೊತ್ತಿಲ್ಲ. ಸತ್ಯವೇ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ). ವಿಜ್ಞಾನಿಗಳು ವಿಜ್ಞಾನಕ್ಕೆ ಮಾಡಿದಂತೆಯೇ ಧರ್ಮಕ್ಕೂ 'ಇದು ಹೇಳುತ್ತಿರುವುದೆಲ್ಲ ಸುಳ್ಳು' ಎಂಬುದರಿಂದ ಪ್ರಾರಂಭಿಸಿ ನೋಡಿ. ಸ್ವಲ್ಪ ಸಮಯದಲ್ಲೇ ಅದು ಸುಳ್ಳು ಎಂಬುದು ವಿದಿತವಾಗುತ್ತದೆ. ಅನುಮಾನ ಮತ್ತು ಪ್ರಶ್ನೆ ಇವು ನನ್ನ ಆತ್ಮದ ಮೂಲಭೂತ ಭಾಗಗಳು. ಅನುಮಾನ ಮತ್ತು ಪ್ರಶ್ನಿಸುವಿಕೆ ಇದ್ದಾಗ ಯಾವುದರ ಬಗ್ಗೆಯೂ ನಂಬಿಕೆ ಬೆಳೆಸಿಕೊಳ್ಳಲು ಸಾಧ್ಯವಿಲ್ಲ.
You see, one thing, is I can live with doubt and uncertainty and not knowing. I think it's much more interesting to live not knowing than to have answers which might be wrong. I have approximate answers and possible beliefs and different degrees of certainty about different things but I'm not absolutely sure of anything and then many things I don't know anything about, such as whether it means anything to ask, "Why we are here?" and what that question might mean. I might think about it a bit and then if I can't figure it out then I go on to something else. But I don't have to know an answer, I don't have to...i don't feel frightened by not knowing things, by being lost in the mysterious universe without having any purpose which is the way it really is as far as I can tell possibly. It doesn't frighten me.
ನೋಡಿ, ಅನುಮಾನ, ಅನಿಶ್ಚಿತತೆಗಳ, ಗೊತ್ತಿಲ್ಲದಿರುವಿಕೆಗಳ ಜೊತೆ ನಾನು ಬದುಕಬಲ್ಲೆ. ಗೊತ್ತಿಲ್ಲದೇ ಬದುಕುವುದು ತಪ್ಪಾಗಿರಬಹುದಾದ ಉತ್ತರಗಳನ್ನು ನಂಬಿ ಬದುಕುವುದಕ್ಕಿಂತ ಹೆಚ್ಚು ಆಸಕ್ತಿಕರ ಎಂದು ನನಗೆ ಅನಿಸುತ್ತದೆ. ನನಗೆ ವಿವಿಧ ವಿಷಯಗಳ ಬಗ್ಗೆ ವಿವಿಧ ನಿಖರತೆಯಲ್ಲಿ ಉತ್ತರಗಳು ಗೊತ್ತಿವೆ. ಆದರೆ ನನಗೆ ಗೊತ್ತಿರುವ ವಿಷಯಗಳ ಬಗ್ಗೆ ಕೂಡ ನನಗೆ 'ಇದೇ ಸರಿಯಾದ ಉತ್ತರ' ಎನ್ನುವ ನಂಬಿಕೆ ಇಲ್ಲ. ನನಗೆ ಏನೇನೂ ಗೊತ್ತಿಲ್ಲದೇ ಇರುವ ವಿಷಯಗಳೂ ಬಹಳ ಇವೆ. 'ನಾವು ಇಲ್ಲಿ ಯಾಕೆ ಇದ್ದೇವೆ' ಎನ್ನುವ ಪ್ರಶ್ನೆಯು ಸೂಕ್ತವೆ? ಸೂಕ್ತವಾದರೆ ಆ ಪ್ರಶ್ನೆಯ ಅರ್ಥವೇನು ಎನ್ನುವುದು ಕೂಡ ನನಗೆ ತಿಳಿದಿಲ್ಲ. ಅದರ ಬಗ್ಗೆ ಸ್ವಲ್ಪ ಯೋಚಿಸುತ್ತೇನೆ, ಗೊತ್ತಾಗದಿದ್ದರೆ ಬೇರೆ ಏನನ್ನಾದರೂ ಮಾಡಲು ಹೋಗುತ್ತೇನೆ. ಆದರೆ ನನಗೆ ಅಂತಹ ಪ್ರಶ್ನೆಗಳಿಗೆ ಉತ್ತರ ತಿಳಿಯಲೇ ಬೇಕೆಂಬ ಹಠ ಇಲ್ಲ. ಗೊತ್ತಿಲ್ಲದೇ ಇರುವುದರ ಬಗ್ಗೆ ನನಗೆ ಭಯವಿಲ್ಲ. ಈ ರಹಸ್ಯಮಯ ವಿಶ್ವ ಬಹುಶಃ ಉದ್ದೇಶರಹಿತವಾದುದು. ಈ ವಿಶ್ವಕ್ಕೆ ಯಾವುದೇ ಗಹನ ಉದ್ದೇಶವಿಲ್ಲ ಎಂದಾದರೆ ನನಗೆ ಭಯವಿಲ್ಲ.