ಭಾರತೀಯ ಚಿತ್ರಗಳು ಮತ್ತು visual politics

ಭಾರತೀಯ ಚಿತ್ರಗಳು ಮತ್ತು visual politics

ಇಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ನಗ್ನ ಚಿತ್ರಗಳನ್ನು ವಿರೊದಿಸುತ್ತಿರುವರೆಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ನನಗನಿಸಿದ್ದು...
ಇಲ್ಲಿ ಎಲ್ಲಾರ ಆರೋಪ ಒಂದೇ  ಅದು ಹುಸೇನ್ ರಚಿಸಿರುವ ನಗ್ನ ದೇವರ ಚಿತ್ರಗಳಲ್ಲಿ  ಒಂದು ಸಮುದಾಯದ ’ನಂಬಿಕೆ’ ಎಂಬ ’ಭಾವನೆ’ಗಳಿಗೆ ಆಘಾತವನ್ನುಂಟು ಮಾಡಿದೆ. ಆಕಾರಣದಿಂದಾಗಿ ಅವು ’ವಿಕೃತಿ’ ಎಂದು.
ಆದರೆ ಇಲ್ಲಿ ಇವರು ಗ್ರಹಿಸಲು ಮರೆತಿರುವ ಅಂಶವೆಂದರೆ ಅದು ಚಿತ್ರಗಳ ಮೂಲಕ ನಡೆಯುವ, ನಡೆದಿರುವ, ನಡೆಯುತ್ತಿರುವ visual politics.
 ಇದು ಭಾರತೀಯರಿಗೆ  ಶತಮಾನಗಳಷ್ಟು  ಹಳೆಯದಾದರು, ಅದು ಪ್ರಬಲವಾಗಿ ಆಳೂರಿರುದ್ದು ಬ್ರಿಟೀಷರ ಆಡಳಿತದಲ್ಲಿ ಪ್ರಾರಂಭವಾದ ಕಂಪೆನಿ ಕಲಾ ಶಾಲೆಗಳ ಮೂಲಕ ಬಹು ಬೇಗ ಜನಪ್ರಿಯಗೊಂಡ ನೈಜ ಚಿತ್ರಕಲೆಯ (realistic art) ಪ್ರಕಾರದಿಂದಾಗಿ.
ಇದಕ್ಕೆ ರಾಜಾತಿಥ್ಯವು ಯಥೇಛ್ಚವಾಗಿ ಸಿಕ್ಕಿದ ಕಾರಣದಿಂದಾಗಿ , ರಾಜಾಶ್ರಯದಲ್ಲಿ ಪಾಶ್ಚಿಮಾತ್ಯ ಶೈಲಿಯ ಚಿತ್ರಗಳ ರಚನೆಯಲ್ಲಿ ಖ್ಯಾತಿಯಾಗಿದ್ದ ರವಿವರ್ಮ ನು ಪ್ರಾರಂಭಿಸಿದ ಲಿಥೋಗ್ರಫಿ ಯಲ್ಲಿ ಮುದ್ರಿತ ವರ್ಣಚಿತ್ರಗಳಿಂದಾಗಿ.
ಸಾಮಾನ್ಯವಾಗಿ ಆಗಿನ ಜನಜೀವನದಲ್ಲಿ  ಚಿತ್ರಕಲೆಯನ್ನು ವೀಕ್ಷಿಸಲು, ರಸಾನುಭವ ಹೊಂದಲು ದೇವಾಲಯ ಮತ್ತು ಅರಮನೆಗಳ ಮೊರೆ ಹೋಗಬೇಕಾಗಿದ್ದಂತ ಸಮಯ. ಅಂತಹ ಚಿತ್ರಗಳನ್ನು ತಮ್ಮ ಸ್ವಂತಕ್ಕೆ ರಚಿಸಿಕೊಳ್ಳಲು ದುಬಾರಿವೆಚ್ಚಗಳ ಕಾರಣದಿಂದಾಗಿ ಜನಸಾಮಾನ್ಯರು  ಚಿತ್ರಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದರು.  
ಅಂತಹ ಸನ್ನಿವೇಶದಲ್ಲಿ ರವಿವರ್ಮನ ಲಿಥೋಗ್ರಫಿ ಪ್ರಿಂಟ್ಗಳು ಜನಸಾಮಾನ್ಯರ ಕೈಗೆ ಸುಲುಭ ದರದಲ್ಲಿ ಎಟುಕತೊಡಗಿತು. ಇತ್ತ ಮೂಲಕೃತಿಯನ್ನು ತಮ್ಮ ಬಳಿಯೇ ಇರಿಸಿಕೊಂಡು ಅದರ ಮುದ್ರಿತ ಪ್ರತಿಗಳನ್ನು ಮಾತ್ರ ಮಾರುವುದರಿಂದ ಕಲಾವಿದನಿಗೆ ಅದು ಒಳ್ಳೆಯ ಲಾಭವನ್ನೇ ತಂದುಕೊಟ್ಟಿತು.
ಹೀಗೆ ಜನಸಾಮಾನ್ಯರ ಮನೆಗಳಲ್ಲಿ ನೆಲೆಕಂಡುಕೊಂಡ ಈ ಮುದ್ರಿತ ಚಿತ್ರಗಳಿಗೆ ಇಲ್ಲಿನ ಜನರಲ್ಲಿದ್ದ ದೈವನಂಬಿಕೆಯೂ ಜೊತೆಗೂಡಿದ  ಚಿತ್ರಗಳು ಅಲ್ಲಿಯವರೆಗೂ ಕಥೆಗಳಲ್ಲಿ ಕೇಳಿ ಕಲ್ಪಿಸಿಕೊಂಡಿದ್ದ ಕಾಲ್ಪನಿಕ ಅಮೂರ್ತತೆಗೆ ಒಂದು ಮೂರ್ತ ರೂಪವನ್ನು ಕೊಟ್ಟಿತು.
 ಮುಂದೆ ಆ ಚಿತ್ರಗಳು  ದೈವಿಕ ರೂಪದ ಹೆಸರಲ್ಲಿ ಜನರ ದೈನಿಕ ಜೀವನದಲ್ಲಿ ಶಾಶ್ವತ ನೆಲೆ ಕಂಡುಕೊಂಡಿತು.(ಆ ಮೂಲಕ ದೇವರ ಬಗ್ಗೆ  ಪೌರಾಣಿಕ ಕಥೆಗಳನ್ನ ಕೇಳಿ ಅದರ ಮೂಲಕ ತಮ್ಮ ಕಾಲ್ಪನಿಕ ಶಕ್ತಿಯ ಮೂಲಕ ಕಲ್ಪಿಸಿಕೊಂಡಿದ್ದ surrealistic images ನ  wide visual ಸೀಮಿತ ಚೌಕಟ್ಟಿನಲ್ಲಿ  ಬಂದಿಯಾಗಿ ಆ ಸ್ಥಾನವನ್ನು ಈ ಚಿತ್ರಗಳು ಆಕ್ರಮಿಸಿಕೊಂಡಿತು)
ಈ visual politics ದೃಶ್ಯಮಾದ್ಯಮದಲ್ಲಿ ಕೇವಲ ದೇವರಿಗಷ್ಟೇ ಅಲ್ಲ ಐತಿಹಾಸಿಕ ವ್ಯಕ್ತಿಗಳಿಗೂ ಅನ್ವಯಿಸತೊಡಗಿತು.
ಉದಾ: ಶ್ರೀಕೃಷ್ಣದೇವರಾಯನು ಈಗಿನ ಜನರ ನೆನಪಿನಲ್ಲಿ ರೂಪುಗೊಳ್ಳುವುದು ರಾಜ್ಕುಮಾರ್ ನಟಿಸಿರುವ ಸಿನಿಮಾದ ಮುಖ ಮಾತ್ರ.
ದಕ್ಷಿಣ ಭಾರತದಲ್ಲಿ ಮಹಾಭಾರತನ ಕೃಷ್ಣನನ್ನು ನೆನಪಿಸಿಕೊಳ್ಳುವುದು ಎನ್.ಟಿ.ಆರ್ ನ ಕೃಷ್ಣನ ಮೂಲಕವೆ.
ಇಡೀ ಭಾರತದಲ್ಲಿರುವ ಗಾಂದೀಜಿ ಶಿಲ್ಪಗಳಲ್ಲಿ ನಾವು ಕಾಣುವುದು ವಯಸ್ಸಾದ ಖಾದಿತೊಟ್ಟ ಬಡಕಲು ದೇಹದ ಚಿತ್ರವನ್ನೇ ಹೊರತು ಬ್ಯಾರಿಸ್ಟರ್ ಪದವಿಯನ್ನು ಪಡೆದು ಭಾರತಕ್ಕೆ ಹಿಂದುರಿಗಿದ ಸೂಟುದಾರಿ ಮೋಹನ್ ದಾಸ್ ಕರಮಚಂದ ಗಾಂಧಿಯನ್ನಲ್ಲ.
ಹೀಗೆ ಇಲ್ಲಿನ ಜನಮಾನಸದಲ್ಲಿ  ’ಭಾವನಾತ್ಮಕ’ದ ಹೆಸರಲ್ಲಿ ಆಳವಾಗಿ ಬೇರೂರಿರುವ visual politics ಆ  imageನ್ನು ದಾಟಿದ ಅಥವ ರೂಪಾಂತರ ಹೊಂದಿದ visual ನ್ನು ಒಪ್ಪಿಕೊಳ್ಳಲು ಹಿಂಜರಿಸುತ್ತದೆ.
ಆ ದೇವರ ಚಿತ್ರಗಳು ಮಾಡಿರುವ ಇನ್ನಷ್ಟು politics ಎಂದರೆ ದೇವರು ಯಾವತ್ತೂ ಶ್ರೀಮಂತನಾಗಿರಬೇಕು, ಶುಭ್ರವಾಗಿರಬೇಕು. ಪುರಾಣಗಳಲ್ಲಿ ವರ್ಣಿಸಿರುವ ನಿಜಾತೀತ ಅಂಶಗಳ ದೇವರು ಸಾಮಾನ್ಯ ಹೆಣ್ಣು ರೂಪದರ್ಶಿಯಾಗಿರುವ ದೇವರ ಚಿತ್ರಕ್ಕೆ ರೂಪಾಂತರವಾದಾಗ ಅಪ್ಪಿಕೊಂಡು ಆರಾಧಿಸಿದ ಧಾರ್ಮಿಕ ಭಾವನೆಯೆಂಬ visual politics,
 ಅದೇ ದೇವರು ಅತೀತ ವೈಭವದ ಶ್ರೀಮಂತಿಕೆಯಿಂದ ಪರಿತ್ಯಕ್ತನಾಗಿ/ಳಾಗಿ ನಗ್ನನಾದಾಗ/ಳಾದಾಗ ಅಪ್ಪಿಕೊಳ್ಳಲು ಬಿಡದೇ ಇರುವುದೇ ಸಮಸ್ಯೆಗೆ ಮೂಲಕಾರಣ.

ಇಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ನಗ್ನ ಚಿತ್ರಗಳನ್ನು ವಿರೊದಿಸುತ್ತಿರುವರೆಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ನನಗನಿಸಿದ್ದು...

ಇಲ್ಲಿ ಎಲ್ಲಾರ ಆರೋಪ ಒಂದೇ  ಅದು ಹುಸೇನ್ ರಚಿಸಿರುವ ನಗ್ನ ದೇವರ ಚಿತ್ರಗಳಲ್ಲಿ  ಒಂದು ಸಮುದಾಯದ ’ನಂಬಿಕೆ’ ಎಂಬ ’ಭಾವನೆ’ಗಳಿಗೆ ಆಘಾತವನ್ನುಂಟು ಮಾಡಿದೆ.

ಆಕಾರಣದಿಂದಾಗಿ ಅವು ’ವಿಕೃತಿ’ ಎಂದು.
ಆದರೆ ಇಲ್ಲಿ ಇವರು ಗ್ರಹಿಸಲು ಮರೆತಿರುವ ಅಂಶವೆಂದರೆ ಅದು ಚಿತ್ರಗಳ ಮೂಲಕ ನಡೆಯುವ, ನಡೆದಿರುವ, ನಡೆಯುತ್ತಿರುವ visual politics.

 ಇದು ಭಾರತೀಯರಿಗೆ  ಶತಮಾನಗಳಷ್ಟು  ಹಳೆಯದಾದರು, ಅದು ಪ್ರಬಲವಾಗಿ ಬೇರೂರಿದ್ದು ಬ್ರಿಟೀಷರ ಆಡಳಿತದಲ್ಲಿ ಪ್ರಾರಂಭವಾದ ಕಂಪೆನಿ ಕಲಾ ಶಾಲೆಗಳ ಮೂಲಕ ಬಹು ಬೇಗ ಜನಪ್ರಿಯಗೊಂಡ ನೈಜ ಚಿತ್ರಕಲೆಯ (realistic art) ಪ್ರಕಾರದಿಂದಾಗಿ.

ಇದಕ್ಕೆ ರಾಜಾತಿಥ್ಯವು ಯಥೇಛ್ಚವಾಗಿ ಸಿಕ್ಕಿದ ಕಾರಣದಿಂದಾಗಿ , ರಾಜಾಶ್ರಯದಲ್ಲಿ ಪಾಶ್ಚಿಮಾತ್ಯ ಶೈಲಿಯ ಚಿತ್ರಗಳ ರಚನೆಯಲ್ಲಿ ಖ್ಯಾತಿಯಾಗಿದ್ದ ರವಿವರ್ಮ ನು ಪ್ರಾರಂಭಿಸಿದ ಲಿಥೋಗ್ರಫಿ ಯಲ್ಲಿ ಮುದ್ರಿತ ವರ್ಣಚಿತ್ರಗಳಿಂದಾಗಿ.

ಸಾಮಾನ್ಯವಾಗಿ ಆಗಿನ ಜನಜೀವನದಲ್ಲಿ  ಚಿತ್ರಕಲೆಯನ್ನು ವೀಕ್ಷಿಸಲು, ರಸಾನುಭವ ಹೊಂದಲು ದೇವಾಲಯ ಮತ್ತು ಅರಮನೆಗಳ ಮೊರೆ ಹೋಗಬೇಕಾಗಿದ್ದಂತ ಸಮಯ. ಅಂತಹ ಚಿತ್ರಗಳನ್ನು ತಮ್ಮ ಸ್ವಂತಕ್ಕೆ ರಚಿಸಿಕೊಳ್ಳಲು ದುಬಾರಿವೆಚ್ಚಗಳ ಕಾರಣದಿಂದಾಗಿ ಜನಸಾಮಾನ್ಯರು  ಚಿತ್ರಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದರು.  
ಅಂತಹ ಸನ್ನಿವೇಶದಲ್ಲಿ ರವಿವರ್ಮನ ಲಿಥೋಗ್ರಫಿ ಪ್ರಿಂಟ್ಗಳು ಜನಸಾಮಾನ್ಯರ ಕೈಗೆ ಸುಲುಭ ದರದಲ್ಲಿ ಎಟುಕತೊಡಗಿತು.

ಇತ್ತ ಮೂಲಕೃತಿಯನ್ನು ತಮ್ಮ ಬಳಿಯೇ ಇರಿಸಿಕೊಂಡು ಅದರ ಮುದ್ರಿತ ಪ್ರತಿಗಳನ್ನು ಮಾತ್ರ ಮಾರುವುದರಿಂದ ಕಲಾವಿದನಿಗೆ ಅದು ಒಳ್ಳೆಯ ಲಾಭವನ್ನೇ ತಂದುಕೊಟ್ಟಿತು.

ಹೀಗೆ ಜನಸಾಮಾನ್ಯರ ಮನೆಗಳಲ್ಲಿ ನೆಲೆಕಂಡುಕೊಂಡ ಈ ಮುದ್ರಿತ ಚಿತ್ರಗಳಿಗೆ ಇಲ್ಲಿನ ಜನರಲ್ಲಿದ್ದ ದೈವನಂಬಿಕೆಯೂ ಜೊತೆಗೂಡಿದ  ಚಿತ್ರಗಳು ಅಲ್ಲಿಯವರೆಗೂ ಕಥೆಗಳಲ್ಲಿ ಕೇಳಿ ಕಲ್ಪಿಸಿಕೊಂಡಿದ್ದ ಕಾಲ್ಪನಿಕ ಅಮೂರ್ತತೆಗೆ ಒಂದು ಮೂರ್ತ ರೂಪವನ್ನು ಕೊಟ್ಟಿತು.

 ಮುಂದೆ ಆ ಚಿತ್ರಗಳು  ದೈವಿಕ ರೂಪದ ಹೆಸರಲ್ಲಿ ಜನರ ದೈನಿಕ ಜೀವನದಲ್ಲಿ ಶಾಶ್ವತ ನೆಲೆ ಕಂಡುಕೊಂಡಿತು.(ಆ ಮೂಲಕ ದೇವರ ಬಗ್ಗೆ  ಪೌರಾಣಿಕ ಕಥೆಗಳನ್ನ ಕೇಳಿ ಅದರ ಮೂಲಕ ತಮ್ಮ ಕಾಲ್ಪನಿಕ ಶಕ್ತಿಯ ಮೂಲಕ ಕಲ್ಪಿಸಿಕೊಂಡಿದ್ದ surrealistic images ನ  wide visual ಸೀಮಿತ ಚೌಕಟ್ಟಿನಲ್ಲಿ  ಬಂದಿಯಾಗಿ ಆ ಸ್ಥಾನವನ್ನು ಈ ಚಿತ್ರಗಳು ಆಕ್ರಮಿಸಿಕೊಂಡಿತು)

ಈ visual politics ದೃಶ್ಯಮಾದ್ಯಮದಲ್ಲಿ ಕೇವಲ ದೇವರಿಗಷ್ಟೇ ಅಲ್ಲ ಐತಿಹಾಸಿಕ ವ್ಯಕ್ತಿಗಳಿಗೂ ಅನ್ವಯಿಸತೊಡಗಿತು.ಉದಾ: ಶ್ರೀಕೃಷ್ಣದೇವರಾಯನು ಈಗಿನ ಜನರ ನೆನಪಿನಲ್ಲಿ ರೂಪುಗೊಳ್ಳುವುದು ರಾಜ್ಕುಮಾರ್ ನಟಿಸಿರುವ ಸಿನಿಮಾದ ಮುಖ ಮಾತ್ರ.ದಕ್ಷಿಣ ಭಾರತದಲ್ಲಿ ಮಹಾಭಾರತನ ಕೃಷ್ಣನನ್ನು ನೆನಪಿಸಿಕೊಳ್ಳುವುದು ಎನ್.ಟಿ.ಆರ್ ನ ಕೃಷ್ಣನ ಮೂಲಕವೆ.

ಇಡೀ ಭಾರತದಲ್ಲಿರುವ ಗಾಂದೀಜಿ ಶಿಲ್ಪಗಳಲ್ಲಿ ನಾವು ಕಾಣುವುದು ವಯಸ್ಸಾದ ಖಾದಿತೊಟ್ಟ ಬಡಕಲು ದೇಹದ ಚಿತ್ರವನ್ನೇ ಹೊರತು ಬ್ಯಾರಿಸ್ಟರ್ ಪದವಿಯನ್ನು ಪಡೆದು ಭಾರತಕ್ಕೆ ಹಿಂದುರಿಗಿದ ಸೂಟುದಾರಿ ಮೋಹನ್ ದಾಸ್ ಕರಮಚಂದ ಗಾಂಧಿಯನ್ನಲ್ಲ.

ಹೀಗೆ ಇಲ್ಲಿನ ಜನಮಾನಸದಲ್ಲಿ  ’ಭಾವನಾತ್ಮಕ’ದ ಹೆಸರಲ್ಲಿ ಆಳವಾಗಿ ಬೇರೂರಿರುವ visual politics ಆ  imageನ್ನು ದಾಟಿದ ಅಥವ ರೂಪಾಂತರ ಹೊಂದಿದ visual ನ್ನು ಒಪ್ಪಿಕೊಳ್ಳಲು ಹಿಂಜರಿಸುತ್ತದೆ.
ಆ ದೇವರ ಚಿತ್ರಗಳು ಮಾಡಿರುವ ಇನ್ನಷ್ಟು politics ಎಂದರೆ ದೇವರು ಯಾವತ್ತೂ ಶ್ರೀಮಂತನಾಗಿರಬೇಕು, ಶುಭ್ರವಾಗಿರಬೇಕು.ಇದಕ್ಕೆ ಕೆಲವು ಗುಡ್ಡಗಾಡಿನ ದೇವರುಗಳು ಮತ್ತು ಹಳ್ಳಿಯಲ್ಲಿ ಕಾಣಸಿಗುವ  ಗ್ರಾಮದೇವರುಗಳು ಅಪವಾದ ಎನ್ನಬಹುದಾದರು, ಅವುಗಳು ಚಿತ್ರಪಟಗಳಾಗಿ ಗೋಡೆ ಅಲಂಕರಿಸಿರಿವುದು ತುಂಬಾ ವಿರಳ. ಅಕಸ್ಮಾತಾಗಿ ಅವಕ್ಕೇನಾದರು ಸಾಕಷ್ಟು ಪ್ರಚಾರ ದೊರೆತುಬಿಟ್ಟರೆ, ಪ್ರಸಿದ್ದಿಯಾದರೆ ಅವೂ ಕೂಡ ಈ ರಾಜಕಾರಣದ ಆವರಣದೊಳಗೆ ಬಂದು ಕೂರುತ್ತವೆ.

ಪುರಾಣಗಳಲ್ಲಿ ವರ್ಣಿಸಿರುವ ನಿಜಾತೀತ ಅಂಶಗಳ ದೇವರು ಸಾಮಾನ್ಯ ಮಾನವ ರೂಪದರ್ಶಿಯಾಗಿರುವ ದೇವರ ಚಿತ್ರಕ್ಕೆ ರೂಪಾಂತರವಾದಾಗ ಅಪ್ಪಿಕೊಂಡು ಆರಾಧಿಸಿದ ಧಾರ್ಮಿಕ ಭಾವನೆಯೆಂಬ visual politics, ಅದೇ ದೇವರು ಅತೀತ ವೈಭವದ ಶ್ರೀಮಂತಿಕೆಯಿಂದ ಪರಿತ್ಯಕ್ತನಾಗಿ/ಳಾಗಿ ನಗ್ನನಾದಾಗ/ಳಾದಾಗ ಅಪ್ಪಿಕೊಳ್ಳಲು ಬಿಡದೇ ಇರುವುದೇ ಸಮಸ್ಯೆಗೆ ಮೂಲಕಾರಣ.

Rating
No votes yet

Comments