ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು.
ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬೀಜೇಪಿ ಮತ್ತು ಜೆ.ಡಿ(ಎಸ್) ಪಕ್ಷಗಳೆಲ್ಲವೂ ಸೇರಿ ಸುಮಾರು 160ಕ್ಕೂ ಹೆಚ್ಚು ಕನ್ನಡೇತರರಿಗೆ ಟಿಕೆಟ್ ನೀಡಿವೆ ಅಂತೆಲ್ಲಾ ಬರ್ದಿದ್ರು. ಇದೇನಪ್ಪಾ ಗ್ರಾಚಾರ ಅಂದುಕೊಂಡೆ. 

ಆಮೇಲೆ ಯೋಚನೆ ಮಾಡಿದಾಗ ಅನ್ನಿಸ್ತಾ ಇತ್ತು, ಈ ರೀತಿ ಇರುವ 198 ವಾರ್ಡ್-ಗಳಲ್ಲಿ, ಪತ್ರಿಕೆಯ ವರದಿಯಂತೆ ನಿಜವಾಗಿಯೂ 50 ಕನ್ನಡೇತರರು ಆಯ್ಕೆಯಾಗಿ ಬಂದರೆ, ಯಾವುದೇ ಕನ್ನಡಪರ ತೀರ್ಮಾನಕ್ಕೆ ಬಿ.ಬಿ.ಎಂ.ಪಿಯಲ್ಲಿ ಪೂರ್ತಿ ಬೆಂಬಲ ಸಿಕ್ಕತ್ತಾ? “ಅಂಗಡಿ ಮುಂಗಟ್ಟುಗಳು ಕನ್ನಡದಲ್ಲೂ ನಾಮಫಲಕ ಹಾಕಬೇಕು” ಎಂಬಂತ ಕಾನೂನು ಮಾಡಲೂ ಬಿ.ಬಿ.ಎಂ.ಪಿ ಹಿಂದೆ ಮುಂದೆ ಯೋಚಿಸುವಂತಹ ದಿನಗಳು ಬರಬಹುದು. ಅಥವಾ, ಪರ ಭಾಷಿಕರು ನಾಳೆ ತಿರುವಳ್ಳುವರ್, ಎಮ್.ಜಿ.ಆರ್, ಎನ್ ಟಿ ರಾಮರಾವ್ ಅವರ ಮೂರ್ತಿಗಳೆಲ್ಲಾ ಕೂರಸ್ತೀವಿ ಅನ್ನಬಹುದು. ಆಗ ಯಾರಿಗಾದ್ರೂ ತಡೆಯೋಕ್ ಆಗುತ್ತಾ? ಅಥವಾ, ನಾಳೆ ತಮಿಳು, ತೆಲುಗು ಅಫಿಶಿಯಲ್ ಲಾಂಗ್ವೇಜ್ (ಅಧಿಕ್ರುತ ಭಾಷೆ) ಮಾಡಿ ಅಂತ ಕೂರಬಹುದು, ಅದನ್ನ ವಿರೋಧಿಸಕ್ಕೆ ಆಗುತ್ತಾ? ರಾಷ್ಟ್ರೀಯ ಪಕ್ಷಗಳು ಇಲ್ಲೀವರೆಗೆ ಆಡಳಿತ ಮಾಡಿರೋ ಸ್ಟೈಲ್ ನೋಡಿದ್ರೆ, ಇದೆಲ್ಲಾ ತಡೀತಾರೆ ಅನ್ನೋ ಭರವಸೆ ನಂಗಂತೂ ಇಲ್ಲ.

ನಿಜ ಹೇಳ್ಬೇಕು ಅಂದ್ರೆ, ರಾಷ್ಟ್ರೀಯ ಪಕ್ಷಗಳನ್ನೇ ಸದಾ ಪ್ರೀತಿಸುತ್ತಾ ಬಂದಿರುವ ಕನ್ನಡಿಗರಿಗೆ, ಅವುಗಳಿಂದ ಆಗಿರುವ ಅನುಕೂಲಕ್ಕಿಂತಾ ಅನಾನುಕೂಲವೇ ಜಾಸ್ತಿ ಇದೆ. ಈಗ ಅದೇ ರಾಷ್ಟ್ರೀಯ ಪಕ್ಷಗಳು ಇತರರಿಗೆ ಮಣೆ ಹಾಕಿ, ತಮ್ಮನ್ನು ಪ್ರೀತಿಸಿದ ಕನ್ನಡಿಗರನ್ನು ಕಡೆಗಣಿಸುತ್ತಿರುವಂತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಮುಂದೊಂದು ದಿನ ರಾಷ್ಟ್ರೀಯ ಪಕ್ಷಗಳು 100 ಜನ ಕನ್ನಡೇತರರು ಆಯ್ಕೆಯಾಗುವಂತೆ ನೋಡಿಕೊಳ್ಳುಬಹುದು. ಆಮೇಲೆ ಕನ್ನಡಿಗ್ರು ಬಾಯಿ ಬಡ್ಕೊಳದೇ ಸರಿ ಅನ್ಸುತ್ತೆ.

ಈ ಬಾರಿಯ ಚುನಾವಣೆಯಲ್ಲಿ ಕನ್ನಡಪರ ಕಾಳಜಿಯುಳ್ಳ ಅಭ್ಯರ್ಥಿಗಳಿಗೇ ಬೆಂಬಲ ಸೂಚಿಸಬೇಕು ಅಂತ ನನ್ನ ಅನಿಸಿಕೆ. ಮತಯಾಚಿಸುತ್ತಾ ಬರುವ ಯಾವುದೇ ಅಭ್ಯರ್ಥಿಯಾದರೂ “ಕನ್ನಡಪರ ಕೆಲಸವೇನು ಮಾಡುತ್ತೀರಿ” ಎಂದು ನಾನಂತೂ ಕೇಳ್ತೀನು. ನೀವೇನ್ ಅಂತೀರಾ ಗೆಳೆಯರೇ?

Rating
No votes yet

Comments