ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ?

ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ?

ಪ್ರತಿದಿನ ಮಧ್ಯಾಹ್ನ ಊಟಕ್ಕೆ ಬಂದಾಗ ನನಗೆ ಊಟ ಬಡಿಸುವ ಮಧ್ಯೆ ಅಮ್ಮ ಆಗಾಗ ಬಾಗಿಲಿನ ಬಳಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ್ದೆ, ಏಕೆಂದೆ ಕಂಡು ಹಿಡಿಯಲಾಗಿರಲಿಲ್ಲ.

ಅದೊಂದು ದಿನ ಅಮ್ಮ ಹೊರಗೆ ಹೋಗ್ಬೇಕಿದೆ ನಾನು ಅಡುಗೆ ಮಾಡಿಟ್ಟಿರ್ತಿನಿ ಬಡಿಸ್ಕೊಂಡು ಊಟ ಮಾಡಿ ಹೋಗು ಎಂದು ಬೆಳಿಗ್ಗೆಯೆ ಹೇಳಿದ್ದರು.

ಸರಿ ೧೨ ಗಂಟೆಗೆ ಬಂದವನೆ ಊಟ ಮಾಡಲು ಕುಳಿತವನಿಗೊಂದು ಬಾಗಿಲಲ್ಲಿ ಬೀಡಾಡಿ ಹಸುವೊಂದು ಬಂದು ನಿಂತು ಅಂಬಾ ಎಂದು ಕರೆಯಲು ಆರಂಭಿಸಿತು. ಒಂದು ಬಕೆಟ್ ನೀರು ತೆಗೆದು ಕೊಂಡು ಹೋಗಿಟ್ಟೆ ಊಹೂಂ ಮೂಸಿ ನೋಡಲಿಲ್ಲ. ಸರಿ ಹೋಗುತ್ತೆ ಬಿಡು ಎಂದು ಕೊಂಡವನೆ ಊಟ ಮುಗಿಸಿದೆ. ಆಗ ಬಂತು ಅಮ್ಮನ ಕರೆ ಬಾಗಿಲಿಗೆ ಒಂದು ಹಸು ಬಂದು ಅಮ್ಮಾ ಅಂತ ಕರೆಯುತ್ತೆ ಕಣೊ ಅಲ್ಲಿ ಬುಟ್ಟಿಯಲ್ಲಿ ಒಂದೆರಡು ಬಾಳೆಹಣ್ಣಿರುತ್ತೆ ಕೊಟ್ಬಿಡು ಎಂದರು. ಆಗ ಗೊತ್ತಾಯ್ತು ಅಮ್ಮನ ಚಡಪಡಿಕೆಗೆ ಕಾರಣ.

ಇಷ್ಟೆಲ್ಲಾ ನೆನಪಾದದ್ದು, ಈಗ ೪.೩೦ ರ ಸಮಯದಲ್ಲಿ  ರಬ್ಬರ್ ಅಂಟಿಹಾಕಿ ಟೈಲ್ಸ್ ನೆಲದ ಮೇಲೆ ಜಾರದಂತೆ ಮಾಡಿ ಬೀಸುವಕಲ್ಲಿನಿಂದ ಬೀಸುತ್ತಿದ್ದ  ನಮ್ಮಮ್ಮ, ಅಮ್ಮಾ ಎನ್ನುವ ಆ ಕರೆಗೆ ಬೀಸುವಕಲ್ಲನ್ನು ಬಿಟ್ಟು ಬಾಳೆಹಣ್ಣು ತೆಗೆದು ಕೊಂಡು ಹೋದಾಗ ಎನಿಸಿದ್ದು 

ಅಮ್ಮಾ ಎನ್ನುವ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮ?

Rating
No votes yet

Comments