ಅಯ್ಯೋ ಶಿವನೇ, ಕನ್ನಡ ಮಾತಾಡಿ ಅಂದ್ರೆ ಬ್ಲಾಕ್ ಮೇಲ್ ಮಾಡಿದ ಹಾಗಾ?

ಅಯ್ಯೋ ಶಿವನೇ, ಕನ್ನಡ ಮಾತಾಡಿ ಅಂದ್ರೆ ಬ್ಲಾಕ್ ಮೇಲ್ ಮಾಡಿದ ಹಾಗಾ?

ನಿನ್ನೆ ಕೋರಮಂಗಲದಲ್ಲಿ ಬಿ.ಬಿ.ಎಮ್.ಪಿ ಅಭ್ಯರ್ಥಿಗಳು ಮತ್ತು ಜನರ ನಡುವೆ ನಡೆದ ಸಂವಾದದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಭಾಗವಹಿಸಿದ್ದರು. ಅವರು ಮೊದಲಿಗೆ ಕನ್ನಡದಲ್ಲೇ ಮಾತು ಶುರು ಮಾಡಿದವರು ಕೊನೆಗೆ ಇಂಗ್ಲಿಷ್ ಗೆ ತಿರುಗಿದರು. ಆಗ ಒಬ್ಬ ಕನ್ನಡದಲ್ಲಿ ಮಾತಾಡಿ ಅಂದ್ನಂತೆ. ಅದಕ್ಕೆ ಹೆಗ್ಡೆ ಸಾಹೇಬ್ರು ಸಿಟ್ಟಾಗಿ " ನಾನು ನಿಮಗಿಂತ ಚೆನ್ನಾಗಿ ಕನ್ನಡ ಮಾತನಾಡಬಲ್ಲೆ, ನಾನು ಕನ್ನಡಿಗ, ಆದ್ರೆ ಇಲ್ಲಿರುವವರಿಗೆ ಕನ್ನಡ ಬರಲ್ಲ, ಅದಕ್ಕೆ ಇಂಗ್ಲಿಷ್ ಇಲ್ಲಿ ಮಾತನಾಡ್ತಿನಿ. ನನ್ನನ್ನು ಯಾರು ಬ್ಲಾಕ್-ಮೇಲ್ ಮಾಡೋ ಹಾಗಿಲ್ಲ " ಅಂತೆಲ್ಲ ಸಿಟ್ಟಾಗಿ ಅಂದ್ರಂತೆ.   ಅದರ ಬಗ್ಗೆ ಏನ್ ಗುರು ಬ್ಲಾಗ್ ಅಲ್ಲಿ ಬಂದ ಕೆಲವು ಪ್ರಶ್ನೆಗಳು ಇಂತಿವೆ:

ಕರ್ನಾಟಕದಲ್ಲಿ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ವಿಧಾನಸಭೇ ಕಲಾಪ, ಮುಖ್ಯಮಂತ್ರಿ ಸ್ಪೀಚು ಎಲ್ಲಾ ಇಂಗ್ಲೀಷಲ್ಲಿ ಇರಲಿ ಅನ್ನೋ ಮನಸ್ಥಿತಿ ಸರೀನಾ? ಹಾಗಾದ್ರೆ ಕರ್ನಾಟಕ ಅಂದ್ರೇನು? ಇಲ್ಲಿನ ಆಡಳಿತ ಭಾಷೆ ಕನ್ನಡಾ ಅಂದ್ರೇನು? ಕನ್ನಡ ನಾಡಲ್ಲಿ ಹಲವರಿಗೆ ಕನ್ನಡ ಬರಲ್ಲಾ ಅಂತಾ ನಮ್ಮ ಸರ್ಕಾರ ಇಂಗ್ಲೀಷಲ್ಲಿ ಆಡಳಿತ ಮಾಡೋದಕ್ ಆಗುತ್ತಾ? ಅದು ಸರೀನಾ? ಹಾಗೇನೇ ನ್ಯಾಯಮೂರ್ತಿಗಳುನ್ನ ಕನ್ನಡದಲ್ಲಿ ಮಾತಾಡಿ ಅಂತಾ ಕೇಳಿದ ವ್ಯಕ್ತಿಗೆ ಇಂಗ್ಲೀಷ್ ಬರ್ತಿಲ್ದೆ ಹಾಗೆ ಕೇಳಿರಬಹುದಲ್ವಾ? ಬರ್ತಾ ಇದ್ರೂ ಏನಂತೆ? ಬದೇ ಇರೋರಿಗೆ ಅನುಕೂಲ ಆಗಲೀ ಅಂತಾ ಕೇಳಿರಬೌದಲ್ವಾ? ಅದುಕ್ಕೇ ಬ್ಲಾಕ್‍ಮೇಲೂ ಅನ್ನೋ ಖಾರದ ಮಾತಾಡಿ ನಾ ಎದ್ ಹೋಗ್ತೀನಿ ಅಂದುಬುಟ್ರೆ ಹೆಂಗೇ ಗುರ್ರೂ? ಇಷ್ಟಕ್ಕೂ ಬೆಂಗಳೂರು ಮಹಾನಗರ ಪಾಲಿಕೆಯ ಅಭ್ಯರ್ಥಿಗಳು, ಮತದಾರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತಾಡಿ ಅಂತಾ ಕೇಳೋದು ಅಪರಾಧಾನಾ?

ಏನ್ ಗುರು ಬ್ಲಾಗ್ ಕೊಂಡಿ: http://enguru.blogspot.com/2010/03/lokaayuktare-kannadadal-maataadi-annodu.html

ಅಲ್ಲ ನಮ್ಮ ನಾಡಲ್ಲೇ ನಮ್ಮ ನುಡಿಯಾಡೋದು "parochial", "fanatic" ಅಂತಾದ್ರೆ ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಕನ್ನಡ ಮಾತಾಡಿದ್ರೆ, ಮಾತನಾಡಿ ಅಂದ್ರೆ ಅದೊಂದು punishable offense  ಮಾಡ್ತಾರಾ ಅನ್ನೋ ಭಯ ಕಾಡುತ್ತೆ !

Rating
No votes yet

Comments