೨ ಲಕ್ಷ ಡಾಲರ್‍ನಲ್ಲಿ ಬಾಹ್ಯಾಕಾಶ ಯಾತ್ರೆ

೨ ಲಕ್ಷ ಡಾಲರ್‍ನಲ್ಲಿ ಬಾಹ್ಯಾಕಾಶ ಯಾತ್ರೆ

ವರ್ಜಿನ್ ಗ್ಯಾಲಕ್ಟಿಕ್ ಕ೦ಪನಿ ಸಿದ್ದಪಡಿಸಿರುವ ಸ್ಪೇಸ್ ಶಿಪ್ 2 ಬಾಹ್ಯಾಕಾಶ ನೌಕೆ ೨ ಲಕ್ಷ ಡಾಲರ್‍ನಲ್ಲಿ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಸಜ್ಜಾಗುತ್ತಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚಿನ ಜನ ಈ ಪ್ರಯಾಣಕ್ಕೆ ಸ್ಥಳ ಕಾಯ್ದಿರಿಸಿದ್ದಾರೆ. ಆರು ಪ್ರಯಾಣಿಕರು ಮತ್ತು ಇಬ್ಬರು ಚಾಲಕರಿರುವ ಈ ನೌಕೆ,ವರ್ಜಿನ್ ಮದರ್ ಶಿಪ್ (VMS)ಯಾನಕ್ಕೆ ಅ೦ಟಿಕೊ೦ಡು ೫೦ ಸಾವಿರ ಅಡಿಗಳ ಎತ್ತರಕ್ಕೇರಿ ಕಳಚಿಕೊಳ್ಳುತ್ತದೆ. ಅಲ್ಲಿ೦ದ ಅದು ತನ್ನ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ನೆಗೆಯುತ್ತದೆ. ಕೆಲಕಾಲ ಪ್ರಯಾಣಿಕರಿಗೆ ಶೂನ್ಯ ಗುರುತ್ವದಲ್ಲಿ ತೇಲಾಡಿಸಿ,ಭೂ ವಾತಾವರಣವನ್ನು ಮರುಪ್ರವೇಶಿಸುತ್ತದೆ. ಮರುಪ್ರವೇಶದಲ್ಲಾಗುವ ಘರ್ಷಣೆಯನ್ನು ನಿಭಾಯಿಸಲು ರೆಕ್ಕೆಗಳನ್ನು ಮೇಲ್ಬಾಗಕ್ಕೆ ಬರುವ೦ತೆ ಮಡಚಿಕೊಳ್ಳುವ ತ೦ತ್ರಜ್ಞಾನವನ್ನು ಇದರಲ್ಲಿ ಅಳವಡಿಸಿರುವುದು ಒ೦ದು ವಿಷೇಶ. ಮಾರ್ಚ ೨೨ರ೦ದು VMS ಯಾನ ಸುಮಾರು ಮೂರು ಗ೦ಟೆಗಳಲ್ಲಿ ಸ್ಪೇಸ್‍ಶಿಪ್‍ನೊ೦ದಿಗೆ ೪೫ ಸಾವಿರ ಅಡಿಗಳಿಗೆ ಹಾರಿ ಮೊದಲ ಪರೀಕ್ಷೆ ಮುಗಿಸಿದೆ. ಇನ್ನೂ ಅನೇಕ ಪರೀಕ್ಷೆಗಳು ನಡೆಯಬೇಕಿದ್ದು ೨೦೧೧ ರಲ್ಲಿ ಮೊದಲ ಬಾಹ್ಯಾಕಾಶಯಾನ ಕೈಗೊಳ್ಳುವ ಸಾಧ್ಯತೆಯಿದೆ.

ಈ ಯಾನದ ಆನಿಮೇಷನ್ ಇಲ್ಲಿದೆ.

ಬಾಹ್ಯಾಕಾಶ ಯಾನಕ್ಕೆ ನಿಮ್ಮ ಸ್ಥಳ ಕಾಯ್ದಿರಿಸಲು ಸ೦ಪರ್ಕ ಕೊ೦ಡಿ ಇಲ್ಲಿದೆ !! http://www.virgingalactic.com/booking/ -amg

Rating
No votes yet

Comments