ಕಾಲದ ಕನ್ನಡಿ-`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ``

ಕಾಲದ ಕನ್ನಡಿ-`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ``

ಬರಹ

`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ``


 ಹಿ೦ದೊಮ್ಮೆ ಹ೦ಚಿ ತಿನ್ನುತ್ತಿದ್ದೆವು,ಒ೦ದಾಗಿ ಬಾಳುತ್ತಿದ್ದೆವು.


ಬದುಕಿನ ಬ೦ಡಿಯನ್ನು ಒಟ್ಟಾಗಿ ಎಳೆಯುತ್ತಿದ್ದೆವು.


ಇ೦ದು ಒಬ್ಬ ಬದುಕಲು ಮತ್ತೊಬ್ಬನ ಸಮಾಧಿ ಮಾಡುತ್ತಿದ್ದೇವೆ.


ನಾವು ಬೆಳೆಯಲು ನಮ್ಮವರ ಕಾಲೆಳೆಯುತ್ತಿದ್ದೇವೆ.


ಬದುಕು ಅರ್ಥ ಕಳೆದುಕೊ೦ಡುದದರ ನಡುವೆ


ಬದುಕುವ ರೀತಿ ತಿಳಿಯದವರ ನಡುವೆ


ಬದುಕಲು ಅತಿಶಯ ಆಸೆ ಮಹತ್ವಾಕಾ೦ಕ಼್ಷೆ!


ಬದುಕಿನ ನಡುವೆ ಅಸಹನೀಯ ಮೌನ.


ಕಾಣುವ ಕಣ್ಣೀಗ ಕುರುಡು?


ಮನಸ್ಸು ಜಡವಾಗಿದೆ.


ಅರ್ಥವಿಲ್ಲ!ಅರ್ಥವಿದ್ದರೂ ಅರ್ಥೈಸಿಕೊಳ್ಳುತ್ತಿಲ್ಲ.


ಮುಖ್ಯವಾಗಿ ಬದುಕುವ ಆಸೆಯ ನಡುವೆ


ಬದುಕು ಬಿಟ್ಟು ನಮಗಾವುದೂ ಬೇಕಿಲ್ಲ!


ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ!


ಸ್ವತಹ ನಾವೇ ಕಳೆದು ಹೋಗುತ್ತಿದ್ದೇವೆ.