ಜಾನಪದ ರಾಮ!

ಜಾನಪದ ರಾಮ!

ರಾಮನ ಬಗ್ಗೆ ಎರಡು ಮಾತು.
 
ರಾಮಾಯಣ ಮೂಲತಹ ಒಂದು ಜಾನಪದ ಕಥೆ ಅನ್ನೋದು ಒಂದು ಮೂಲದ ವಾದ. ಈ ಒಂದು ಜಾನಪದ ಕಥೆಗೆ ವಾಲ್ಮೀಕಿ ಒಂದು ಗ್ರಾಂಥಿಕ ರೂಪ ಕೊಟ್ಟು ಮಹಾ ಕಾವ್ಯದ ಮಟ್ಟಕ್ಕೆ ಏರಿಸಿದ.
 
ಈ ವಾದವನ್ನು ಬೆಂಬಲಿಸುವಂತೆ ನಮ್ಮಲ್ಲಿ ಅನೇಕ ಮತ ಗಳಿಗೊಂದೊಂದು ರಾಮಾಯಣಗಳಿವೆ.
 
ಜೈನ ರಾಮಾಯಣವಿದೆ, ಶಾಕ್ತ ರಾಮಾಯಣವಿದೆ. ಇನ್ನೂ ಹಲವು ದೃಷ್ಟಿಕೋನಗಳ ರಾಮಾಯಣಗಳಿವೆ. 
 
ಒಂದು ವೇಳೆ ರಾಮ ಒಂದು ಮತದ / ಗುಂಪಿನ ದೇವರು / ನಾಯಕನಾಗಿದ್ದರೆ ಜೈನರು ಮತ್ತಿತರರು ರಾಮನನ್ನು "ತಮ್ಮವನನ್ನಾಗಿ ಮಾಡಿಕೊಂಡು" ಕಥೆ ಬರೆಯುತ್ತಿರಲಿಲ್ಲ. 
 
   
ಜಾನಪದ ಕಥೆಯಾದ ರಾಮಾಯಣದ ರಾಮ ನಿಜಕ್ಕೂ ಇಲ್ಲಿ ಬಾಳಿ ಬದುಕ್ಕಿದ್ದರಬಹುದು. ಅವನು ಜನಪದ ಪಾತ್ರ. ಆದರೆ ವಾಲ್ಮೀಕಿಯ ಅತ್ವ ಇನ್ಯಾರೋ "ಕವಿಯ ರಾಮ"ನ ಬಗ್ಗೆ ಇಷ್ಟೆಲ್ಲಾ ಪ್ರಶ್ನೆಗಳು ಮತ್ತವಕ್ಕೆ ಇಷ್ಟೆಲ್ಲಾ ಸಮಜಾಯಿಸಿಗಳು ಅದೆಷ್ಟು ಮಟ್ಟಿಗೆ ಸಮಂಜಸವೋ?!...
ವಾಲ್ಮೀಕಿಯನ್ನೇ ಅಥೆಂಟಿಕ್ ಆಗಿ ( ಇವನ ರಾಮಾಯಣವೇ "ಸಿಕ್ಕ ಮೊದಲ" ರಾಮಾಯಣವಾಗಿದ್ದರೂ) ರಾಮಾಯಣಕ್ಕೆ quote ಮಾಡುವುದೂ, ಇತರ ಹಳೆಯ ರಾಮಾಯಣಗಳನ್ನು ನಿರ್ಲಕ್ಷಿಸುವುದು ಅದೆಷ್ಟಿ ಸರಿಯೋ ನಾ ಕಾಣೆ . 
ಅಂದ ಹಾಗೆ ಈ ವಾಲ್ಮೀಕಿ ರಾಮಾಯಣಕೃತಿಯ ಕಾಲ ಘಟ್ಟವೇನು?  ಈತ ಎಷ್ಟನೆ ಶತಮಾನದವನು?
 
 
Rating
No votes yet

Comments