ದಿನಪತ್ರಿಕೆ, ವಾರಪತ್ರಿಕೆ ಹಾಕುವವರಿಗೂ ಕಮೀಶನ್ ಕೊಡಬೇಕಾ?

ದಿನಪತ್ರಿಕೆ, ವಾರಪತ್ರಿಕೆ ಹಾಕುವವರಿಗೂ ಕಮೀಶನ್ ಕೊಡಬೇಕಾ?

ನಿನ್ನೆ ಬಾಗಿಲು ಶಬ್ದ ಆದಾಗ ಯಾರು ಅಂತ ಹೋಗಿ ನೋಡಿದೆ, ಮೇಡಂ-’ ತರಂಗದ ದುಡ್ಡು’ ಅಂದ ಬಂದಾತ. ನಾನು ಎಷ್ಟಪ್ಪ ಅಂದೆ. ಅದಕ್ಕವನು 53 ರೂಪಾಯಿ ಅಂದ. ನಾನು ಫ಼ೆಬ್ರವರಿಯಲ್ಲಿ 4 ಮಂಗಳವಾರ(ತರಂಗ ಬರೋದು ಮಂಗಳವಾರ) ಹಾಗಾಗಿ 12x4=48 ರೂಪಾಯಿಯಲ್ಲವೇ ಅಂದೆ. ಅದಕ್ಕವನು ಹೌದು ಮೇಡಂ 48 ರೂಪಾಯಿಯೇ ಆದ್ರೆ ನಮ್ಮ ಕಮೀಷನ್ 5 ರೂಪಾಯಿ ಒಟ್ಟು 53 ರೂಪಾಯಿ ಅಂದಾಗ ನಂಗೆ ಆಶ್ಚರ್ಯ ಆಯ್ತು. ನಾವು ಈ ಮೊದಲು ಎಲ್ಲೂ ದಿನಪತ್ರಿಕೆಗಾಗಲೀ, ವಾರಪತ್ರಿಕೆಗಾಗಲೀ ಕಮೀಷನ್ ಕೊಟ್ಟಿರಲಿಲ್ಲ! ನಿಮ್ಮ ಕಮೀಷನ್ನ ನಾವು ಕೊಡುವಂತಿಲ್ಲ, ನಿಮಗೆ ಪತ್ರಿಕೆಯಕ ಮೂಲ ವ್ಯಾಪಾರಿಗಳೇ ಕೊಡ್ತಾರಲ್ವ ಅಂತ ಹೇಳಿದ್ದಕ್ಕೆ, ಅವರು ಕೊಡೋದೆಲ್ಲಿ ಸಾಕಾಗತ್ತಮ್ಮ ನಾವು ಬಿಸ್ಲು,ಮಳೆ,ಛಳಿ ಅನ್ನದೆಲೆ ಬೆಳಗ್ಗೆ ಬೇಗ ಎದ್ದು ನಿಮ್ಮನೆ ಬಾಗಿಲಿಗೆ ಪತ್ರಿಕೆಗಳು ಬರೋ ಹಾಗೆ ನೋಡಿಕೊಳ್ಳಲ್ವ? ಅಂತ ನಂಗೇ ಪ್ರಶ್ನೆ ಇಟ್ಟ. ನಾನೂ ಸಹ ಅಲ್ಲಪ್ಪ ನಾವು ಕೂಡ ಬಿಸ್ಲು, ಮಳೆ,ಛಳಿ ಅನ್ನದೆಲೆ ಆಫೀಸಿಗೆ ಹೋಗಿ ಕೆಲ್ಸ ಮಾಡಿದ್ರೆ ತಾನೇ ಸಂಬಳ ಕೊಡೋದು ಅಂದಿದ್ದಕ್ಕೆ... ಇನ್ನು ನಿಮ್ಮಿಷ್ಟ ತಾಯಿ ಬೇಕಾದ್ರೆ ಹಾಕಿಸಿಕೊಳ್ಳಿ ಇಲ್ಲದಿದ್ರೆ ಬೇಡ ಬಿಡಿ ಅಂತ ಹೇಳಿ ಹೋದ!

ಸ್ನೇಹಿತರೇ ಹೀಗೂ ಉಂಟೆ? ನೀವು ನಿಮ್ಮ ಪೇಪರ್ನವನಿಗೆ ಕಮೀಶನ್ ಕೊಡ್ತೀರ? ದಯವಿಟ್ಟು ತಿಳಿಸಿ

Rating
No votes yet

Comments