ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?

ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?

ಬರಹ

ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?

ದೇಶದ ಸ್ಥಿತಿಯನ್ನು ಅರಿಯಬೇಕಾದರೆ, ಅಲ್ಲಿನ ’ನೋಟು’ ಮತ್ತು ’ರಸ್ತೆ’ ಗಳನ್ನು ನೋಡಬೇಕೆಂದು ಎಲ್ಲೋ ಓದಿದ ನೆನಪು. ನಮ್ಮ ಇಂದಿನ ಭಾರತದ ನೋಟುಗಳು ಮತ್ತು ರಸ್ತೆಗಳು ಎರಡರ ಸ್ಥಿತಿಯೂ ಚೆನ್ನಾಗಿಲ್ಲ. ಆರ್ಥಿಕವಾಗಿ ಗುರುತಿಸಿಕೊಳ್ಳಲು ಪ್ರತಿ ದೇಶಕ್ಕೂ ಅದರದ್ದೇ ಆದ ಕಾಗದ ರೂಪದ ನೋಟುಗಳು ಇರುತ್ವೆ. ಭಾರತಕ್ಕೆ "ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?" ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಸುಮಾರು ೪-೫ ವರ್ಷಗಳಿಂದ ಕಾಡುತ್ತಾ ಇದ್ದ ಪ್ರಶ್ನೆ.
ನಾನು ಕಳೆದ ಬಾರಿ ಫ್ರಾಂನ್ಸ್ ದೇಶಕ್ಕೆ ಹೋಗಿದ್ದಾಗ, ೫೦೦ ಯೂರೋದ ನೋಟು ಒಂದನ್ನ ಒಯ್ದಿದ್ದೆ. ಅದನ್ನ ಕರಗಿಸಲಿಕ್ಕೆ ನಾನು ಬ್ಯಾಂಕಿನ ಮೊರೆಹೋಗಬೇಕಾಯ್ತು. ಭಾರತದಲ್ಲೂ ಕೂಡಾ ಇದೇ ರೀತಿಯಲ್ಲಿ, ದೊಡ್ಡ ಮೊತ್ತದ ನೋಟುಗಳ ನಿಯಂತ್ರಣ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅನ್ನಿಸಿತ್ತು. ನನ್ನ ಅನಿಸಿಕೆಯಂತೆ ಬಹುಶಃ ದೇಶದ ೯೫% ಜನರಿಗೆ ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಇಲ್ಲ.

ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಶಕ್ತಿಯುತ ಗೊಳಿಸಿದರೆ, ನಕಲಿ ನೋಟಿನ ಹಾವಳಿಯನ್ನು ಬಹುವಂಶ ತಡೀಬಹುದು.

ಲಂಚ ಕೊಡೋದು, ತೊಗೊಳೋದು ನಿಲ್ಲಿಸಬಹುದು.

ಮುಖ್ಯವಾಗಿ, ದೇಶದಲ್ಲಿರುವ ಕಪ್ಪುಹಣಕ್ಕೆ ಮುಕ್ತಿ ಸಿಗಬಹುದು.

ಪಾಕಿಸ್ಥಾನದಿಂದ ನಕಲಿ ನೋಟು ತಂದು, ಅಸಲಿ ನೋಟು ವಾಪಾಸು ಒಯ್ಯುವ ಧಂಧೆ ಕಡಿವಾಣ ಹಾಕ್ಬಹುದು ಅಲ್ವಾ?

ಏನಂತೀರಿ?