ಹಕ್ಕಿ ಹಾರಬೇಕಿದೆ....

ಹಕ್ಕಿ ಹಾರಬೇಕಿದೆ....

ಬಂಧನದಿ ಸಿಲುಕಿರುವ ಹಕ್ಕಿ ಮುಕ್ತವಾಗಿ ಹಾರಬೇಕಿದೆ,
ಬಂಧ, ಸಂಭಂಧಗಳ ಸಂಕೋಲೆಯ ಕಳಚಿ

ನೀಲಿಗಗನದಿ ಸ್ವಚ್ಚಂದವಾಗಿ ವಿಹರಿಸಬೇಕಿದೆ.
ಪ್ರತಿ ಕ್ಷಣದಲೂ ಸಿಗುವ ಅಡೆತಡೆಗಳನು ದಾಂಟಿ

ಮನದಿ ಮೂಡುವ ತವಕ, ತುಮುಲಗಳನು ಮೀರಿ ಹಾರಬೇಕಿದೆ.
ನೇಸರನ ಮಡಿಲಿನಲ್ಲಿ ನಿರ್ಭಯವಾಗಿ ಒಂಟಿಯಾಗಿ ಸಾಗಬೇಕಿದೆ,

ತನ್ನ ಸುತ್ತ ಕವಿದಿರುವ ಮೋಹಜಾಲಗಳ
ಪರಿಧಿಯನು ಮೀರಿ ಸ್ವತಂತ್ರವಾಗಿ ತೇಲಬೇಕಿದೆ,

ಎತ್ತಣಿಂದಲೋ ಬೆಳೆದುಬಂದ ಸಂಭಂದಗಳ
ಯಾವಕ್ಷಣದಲೋ ಮೂಡಿದ ಸ್ನೇಹ ಬಾಂಧವ್ಯಗಳ

ಎಲ್ಲವನೂ ಮರೆಯಬೇಕಿದೆ, ಮೂಳೆ ಮಾಂಸಗಳ ಪಂಜರವ ತೊರೆಯಬೇಕಿದೆ...
ಇಂದಲ್ಲ ನಾಳೆ ಹಕ್ಕಿ ಹಾರಬೇಕಿದೆ.... ದೂರ ಬಲುದೂರ ಹೋಗಬೇಕಿದೆ...
Rating
No votes yet