’ಪ್ರತಿ’ಬಿಂಬ

’ಪ್ರತಿ’ಬಿಂಬ

ಕಂಡೂ ಕಾಣದ, 
ಕಾಣದೆ ಕಾಣುವ... 
ಕಾಣುವ ಭ್ರಮೆಯ ತೋರುವ 
’ಗುರಿ’ಯ 
ಗರಿಬಿಚ್ಚಿ ಹಾರುತ್ತಿರಲು... 
ವಾಸ್ತವದ 
ಕನ್ನಡಿಯಲ್ಲಿ ಕಂಡ ಬಿಂಬವು 
ವಾಸ್ತವದ 
ಅಸ್ತಿತ್ವನ್ನೇ ಪ್ರಶ್ನಿಸುತ್ತಿದೆ. 
ಅಸ್ತಿತ್ವದ ಅಡಿಪಾಯ 
ಭ್ರಮೆಯ ಭ್ರಮಾತ್ಮಕ 
ನಿಲುವು, ಅರಿವು, ಅನುಭವಗಳಿಂದ 
ಮುಕ್ತವಾಗಿ ನಿರ್ಮಿತವಾಗಿದೆಯೆಂಬ 
ನಂಬಿಕೆಯಲ್ಲಿ ಮರದಂತೆ 
ಆಳವಾಗಿ ಬೇರೂರಿದ್ದರೂ 
ಕನ್ನಡಿಯಲ್ಲಿ ಪ್ರತಿಫಲನವಾಗುತ್ತಿರುವ 
’ಪ್ರತಿ’ಬಿಂಬವೂ 
ಬೇರಿನ ’ಪ್ರತಿ’ 
ಬೇರಿನ ಬಿಳಲನ್ನೂ 
ಬಿಡಿಸಿ ಬೇರ್ಪಡಿಸಿ 
ಆದಿ ಅಂತ್ಯವಿಲ್ಲದ 
ಆಕಾಶದಲ್ಲಿ 
ಎಳೆ ಎಳೆಯಾಗಿ 
ಹರಡಿ ಅಪಹಾಸ್ಯ ಮಾಡುತ್ತಿದೆ.. 
ಅಥವ ಹಾಗೆ ಭಾಸವಾಗುತ್ತಿದೆಯಾ? 
ಈ ಎರೆಡೂ ಸ್ಥಿತಿಗಳ ನಡುವೆ 
’ನಾನು’ನಿಂತಿರುವ ’ನೆಲೆ’ ಯಾವುದು?

Rating
No votes yet

Comments