2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ ವರ್ಷದ್ದು ಸೀಈಟಿ ಪತ್ರಿಕೆಗಳ್ನ ಅಭ್ಯಾಸ ಮಾಡೋದು ಅನಾದಿಕಾಲದಿಂದ್ಲೂ ಅನೂಚಾನವಾಗಿ ನಡ್ಕೊಂಡ್ಬಂದಿರೋ ಪದ್ಧತಿಗಳಲ್ಲೊಂದು. ಈ ಸಾರೀನೂ ಮಾಡ್ಲಿ, ಅದ್ಕೆ ಅನ್ಕೂಲ ಆಗ್ಲೀಂತ ಕೆಳ್ಗಿರೋ ಸ್ನಿಪ್ಪೆಟ್ಟು ಗೀಚ್ದೆ. ನಮ್ಮ ಘನ ಸರ್ಕಾರದ ಶಿಕ್ಷಣ ಇಲಾಖೆಯ ಅಂಗವಾದ ಸಾಮಾನ್ಯ ಪರೀಕ್ಷಾ ವಿಭಾಗದ ಜಾಲತಾಣದಿಂದ ಗಣಿತ, ಭೌತಶಾಸ್ತ್ರ,ರಸಾಯನಶಾಸ್ತ್ರ,ಜೀವಶಾಸ್ತ್ರದ ವಿಷಯಗಳ 2004ರಿಂದ 2009 ವರೆಗಿನ ಪ್ರಶ್ನೆಪತ್ರಿಕೆ ಮತ್ತವುಗಳ ಉತ್ತರಕೀಲಿಯನ್ನು ಕೆಳಗಿಳಿಸುವ ಕೆಲಸವನ್ನು ಇದು ಮಾಡತ್ತೆ. ಸರಳವಾಗಿದೆ. linux ಬಳ್ಸೋರು ಮಾತ್ರ ಬಳಸಬಹುದು.

\rm -rf raw_page
wget -c http://kea.kar.nic.in/qepaper.htm -O raw_page
for n in `grep -w href raw_page | awk -F"href=\"" '{print $2}'|awk -F\" '{print $1}'`
do
        echo -en "Downloading $n ... \n"
        wget -c http://kea.kar.nic.in/${n}
done 2>&1 | tee -a /tmp/log.1

(ಮೈಕ್ರೋಸಾಫ್ಟಿಗರಾದಲ್ಲಿ: http://kea.kar.nic.in/qepaper.htm ಗೆ ಹೋಗಿ ಒಂದೊಂದೇ ಹೆಕ್ಕಿ ತಗೋಬೇಕು. ಇವುಗಳನ್ನ ನೋಡೋಕ್ಕೆ ಅಡೋಬೆ ಪೀಡೀಎಫ್ ರೀಡರ್ ಬೇಕು. ಇನ್ಸ್ಟಾಲಾಗಿಲ್ಲಂದ್ರೆ www.adobe.com ಗೆ ನುಗ್ಗಿ ತಗೊಂಢಾಕೊಳಿ).

ಸೀಈಟಿಗೆ ತಯಾರಾಗ್ತಿರೊ ಭಾವೀ ಡಾಕ್ಟ್ರು/ಎಂಜಿನಿಯರ್ಗಳೇ, ಬೆಸ್ಟಾಫ್ಲಕ್ಕಿ! /* ಸುಮ್ಸುಮ್ನೆ ಬಿ ಇ / ಮೆಡಿಕಲ್ಲು ಸೇರ್ಕೋಬೇಡ್ರಪ್ಪಾ. ಆಸಕ್ತಿಯಿದ್ರೆ ಮಾತ್ರ ತಗೊಳಿ. ಯಾವನೋ 'ಅದ್ತಗಂಡ್ರೆ ಸ್ಕೋಪಿರತ್ತೆ' 'ಇದ್ತಗಂಡ್ರೆ ಮಣ್ಣೂಮಸೀಂ'ತೆಲ್ಲಾ ಹೇಳ್ದಾಂತ ಉಧೋಶಂಕ್ರ ಅಂತ ತಗಂಡ್ಬಿಡ್ಬೇಡಿ, ಕೇಳ್ಬುಟ್ಟು ಯೋಚ್ನೆಮಾಡಿ ನಿರ್ಧರಿಸಿ! */

Rating
No votes yet