ಮನದ ಮಾತು

ಮನದ ಮಾತು


ಒಂದೊಮ್ಮೆ ಹಳೆಯ ಕಡತದಿಂದ ಹೊರಬಿದ್ದಂತ ಹಳೆಯ ಪುಟದಂತೆ
ಅವಳು ಬಂದು ನಿಂತಳು ಮತ್ತೆ ಹಸಿರಾಗಿದ್ದ ಬದುಕಿಗೆ

ಇನ್ನೂ ನೆನಪುಗಳು ಮಾಸಿರದ
ಮನಸ್ಸಿನ ಗರ್ಭದಲ್ಲಿ ಹೊಸ ಕನಸುಗಳು
ಆಗಲೇ ಮೊಳೆದಿದ್ದವು, ಅವಕ್ಕೆ ಏನು?
ಸ್ವಲ್ಪ ಬೆಳಕು ನೀಡಿದರೆ
ಮನದ ಗುಹೆಯಿಂದ ಓಡೋಡಿ ಬರುತ್ತವೆ

ಅವಳು ಬಂದಾಗಲೆಲ್ಲ ಬರಿಯ ನಿರೀಕ್ಷೆಗಳು ಮೊಳೆಯುತ್ತಿದ್ದ
ಮನಸ್ಸಿನಲ್ಲಿ ಇಂದೇಕೆ ಅ ಸಂಭ್ರಮವಿಲ್ಲ ?
ಸಾಯುವ ಮೊದಲು ಒಮ್ಮೆ ಮಾತ್ರ
ಅವಳನ್ನು ನೋಡುವ ಅಸೆ ನೆರವೆರುವುದೇ ಆಗಿದ್ದರೆ
ಅವಳು ನನ್ನವಳಾಗಬೇಕೆಂದು ಅಸೆ ಪಡುತ್ತಿರಲಿಲ್ಲವೇ?

ಅದರೂ ಮತ್ತೆ ವಿಶ್ವಾಸವಾಗತ್ತೆ ಭೂಮಿ ದುಂಡಗೆ ಎಂದು
ಅದಕ್ಕೆ ತಾನೇ ಮರೆತೇ ಹೋದಂತಿದ್ದವಳು
ಮತ್ತೆ ಬದುಕಿಗೆ ಬಂದು ಒದಗಿದ್ದು, ನಕ್ಕಿದ್ದು, ಅತ್ತಿದ್ದು
ಮತ್ತೆ ಪುನಃ ಮೊದಲಿನಂತೆ ಮರೆಯಾದದ್ದು!

Rating
No votes yet

Comments