ಸ್ವರಭಕ್ತಿ!

ಸ್ವರಭಕ್ತಿ!


ದ್ವಿತ್ಯಾಕ್ಷರಗಳ ನಡುವೆ ಬೇರೊಂದು ಅಕ್ಷರವನ್ನು ತಂದು ಬಿಡಿಸಿ ಹೇಳುವುದಕ್ಕೆ  epenthesis ಅನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಏನು ಹೇಳುತ್ತಾರೆ ಎಂದು ತಿಳಿದವರು ತಿಳಿಸಿ.

epenthesis ನಲ್ಲಿ ಎರಡು ವಿಧ.  

೧. anaptyxis

೨. excrescence

 


೧. anaptyxis

ದ್ವಿತ್ಯಾಕ್ಷರಗಳ ನಡುವೆ, ಸ್ವರವನ್ನು ತಂದು,  ವ್ಯಂಜನಗಳನ್ನು ಬಿಡಿಸಿ ಹೇಳುವುದಕ್ಕೆ "ಸ್ವರಭಕ್ತಿ" ಎಂದು ಹೆಸರು.   ಇಂಗ್ಲೀಷಿನಲ್ಲಿ ಇದಕ್ಕೆ anaptyxis ಎನ್ನುತ್ತಾರೆ.

 

ಉದಾ.

ಖಡ್ಗ > ಖಡುಗ

ಭಕ್ತಿ > ಬಕುತಿ

ಯುಕ್ತಿ >ಯುಕುತಿ

ಪ್ರೀತಿ > ಪಿರೀತಿ


ಹರ್ಷ > ಹರುಷ

ವರ್ಷ > ವರುಷ

ಬ್ರಹ್ಮ > ಬರ್ಮ > ಬರ್ಮ 

ಕರ್ಮ > ಕರುಮ  

....

ನಿಮ್ಮ ಗಮನಕ್ಕೆ ಬಂದವನ್ನು ಪಟ್ಟಿ ಮಾಡಿ.

 

೨. excrescence

ಹಾಗೆಯೇ ದ್ವಿತ್ಯಾಕ್ಷರಾಗಳನ್ನು, ಅದರ (ಅವುಗಳ?)   ನಡುವೆ ವ್ಯಂಜನವನ್ನು ತಂದು  ಬಿಡಿಸಿ ಹೇಳುವುದಕ್ಕೆ excrescence ಅನ್ನುತ್ತಾರೆ.

 

ಇದಕ್ಕೆ ಉದಾಹರಣೆ ಕೊಡುತ್ತೀರಾ?

 

..........................................

In phonology, "epenthesis" is the addition of one or more sounds to a word, especially to the interior of a word. Epenthesis may be divided into two types: "excrescence" (if the sound added is a consonant) and "anaptyxis" (if the sound added is a vowel). ( ವಿಕಿ ಇಂದ )
Rating
No votes yet

Comments