ಬಚ್ಚನ್. ವಿ.ಕಾಂಗ್ರೆಸ್ಸು...

ಬಚ್ಚನ್. ವಿ.ಕಾಂಗ್ರೆಸ್ಸು...

    ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ ಈ ಹಾಡು ಅಮಿತಾಬ್ ಗುನುಗುನಿಸುತ್ತಿರಬಹುದು ಆಗಾಗ.ನಿಜ ನೆಹರು,ಇಂದಿರಾ ಹಾಗೂ ತೇಜಿಬಚ್ಚನರ ನಡುವೆ ಆತ್ಮೀಯತೆ ಇತ್ತು ಇದೇ ಆತ್ಮೀಯತೆಅಮಿತಾಬ್ ರಾಜಕೀಯಪ್ರವೇಶ ಮುಂದೆ ಸಂಸತ್ ಸದಸ್ಯನಾಗುವವರೆಗೂ ಮುಂದುವರೆಯಿತು....ಅದೇನೋ
ಬದಲಾವಣೆಯ ಗಾಳಿ ಸ್ವಲ್ಪ ಜೋರಾಗಿಯೇ ಬೀಸಿದೆ ಅಂತ ಕಾಣಿಸುತ್ತದೆ  ಈ ಪರಿ ವಿಮುಖರಾಗಿದ್ದಾರೆ. ಆಗಾಗ ತೆರೆಮರೆಯಲ್ಲಿ ಕಿತ್ತಾಟ ಇದ್ದಿದ್ದು ಈಗ ಬಟಾಬಯಲಾಗಿದೆ.

 

     ಮೊನ್ನೆ ಮುಂಬೈಯಲ್ಲಿ ನಡೆದ ಸಮಾರಂಭಕ್ಕೆ ಅಮಿತಾಬ್ ಗೆ ಆಹ್ವಾನ ಕೊಟ್ಟವರು ಸಹ ದಿಲ್ಲಿ ಮೇಡಮ್ ಗೆ ಹೆದರಿ ಅಮಿತಾಬ್ ಕರೆಯದೆಯೇ ಬಂದರು ಎಂದು ಹೇಳುವಮಟ್ಟಕ್ಕೆ ಹೋದರು.ಇತಿಹಾಸ ಅವಲೋಕಿಸಿದರೆ ಕಾಂಗ್ರೆಸಿನ "ಜೀ ಮೇಡಮ್ " ಸಂಪ್ರದಾಯ ಬದಲಾಗೇ ಇಲ್ಲ. ಈ ಗುಲಾಮಿ ರೀತಿ ಆ ಪಾರ್ಟಿಯಲ್ಲಿ ಹೇರಳವಾಗಿದೆ. ನಮ್ಮರಾಜ್ಯದ ಕೇಂದ್ರಮಂತ್ರಿಗಳಿಂದ ಹಿಡಿದು ಮೊನ್ನೆ ಬಿಬಿಎಂಪಿಯಲ್ಲಿ ನಿಂತ ಮರಿಪುಢಾರಿಗಳತನಕ ಆ ವ್ಯಾಧಿ ವ್ಯಾಪಿಸಿದೆ. ಈ ರೋಗಕ್ಕೆ ಮದ್ದು ಅವರಿಗೆ ಬೇಕಾಗಿಯೇ ಇಲ್ಲ ಯಾಕೆಂದರೆ ಕಾಂಗ್ರೆಸ್ಸಿಗರು ಒಂಥರಾ ಕೂಪಮಂಡೂಕರು. ಈಗ ಅಮಿತಾಬ್ ಪ್ರಕರಣ ತಗೊಳ್ಳಿ...ಕರೆಯದೇ ಹೋಗುವಷ್ಟು ನಿರಭಿಮಾನಿ ಅವ ಅಲ್ಲ. ಮೊನ್ನೆ ಮೊನ್ನೆ ಟೈಮ್ಸಗ್ರುಪ್ ನವರು ತನ್ನ ಸೊಸೆ ಇನ್ನೂ ಬಸಿರಾಗದಿರುವ ಬಗ್ಗೆ ಪ್ರಕಟಿಸಿದ ಕೀಟಲೆ ಸುದ್ದಿ ಪ್ರತಿಭಟಿಸಿ ಇಡೀ ಪರಿವಾರ ಈ ಸಲದ ಫಿಲ್ಮಫೇರ್ ಪ್ರಶಸ್ತಿ ಸಮಾರಂಭ ಬಹಿಷ್ಕರಿಸಿತು.ವಿಚಿತ್ರ ಎಂದರೆ ಪಾ ನಟನೆಗೆ ಅವನಿಗೆ ಪ್ರಶಸ್ತಿ ಸಿಕ್ಕಿತ್ತು....!

    ಅಮಿತಾಬ್ ಗುಜರಾತ್ ರಾಜ್ಯದ ರಾಯಭಾರಿಯಾಗಿದ್ದನ್ನು ಸಂಘವಿ, ತಿವಾರಿ ಮುಂತಾದ ಕಾಂಗ್ರೆಸ್ ಮುಖವಾಣಿಗಳು
ಪ್ರಶ್ನಿಸುತ್ತಿವೆ...ಮೋದಿ ಜೊತೆ ಆತ ಕೈ ಜೋಡಿಸಿದ್ದಾನೆ ಅಂದರೆ ಮೋದಿ ಮಾಡಿದ್ದಾನೆ ಎಂದ ಎಲ್ಲ ಕೃತ್ಯಗಳಿಗೂ ಅಮಿತಾಬ
ಭಾಗಿದಾರ ಎಂಬ ವಿಚಿತ್ರ ತರ್ಕ ಇಡುತ್ತಿದ್ದಾರೆ. ಒಂದು ರಾಜ್ಯದ ಪ್ರಕೃತಿ ಅಲ್ಲಿನ ಪ್ರವಾಸಿತಾಣಗಳ ಬಗ್ಗೆ ಅಮಿತಾಬ್ ಬಾಯಿಂದ
ಹೇಳಿಸಿದರೆ ಅದಕ್ಕೆ ಸಿಗೋ ಮೌಲ್ಯವೇ ಬೇರೆ. ಚಾಣಾಕ್ಷ ಗುಜ್ಜಿ--ಮೋದಿ ಈ ಬಗ್ಗೆ ಒಳ್ಳೆಯ ನಡೆ ಇಟ್ಟಿದ್ದಾನೆ. ಇದಕ್ಕೆ ಕಾಂಗ್ರೆಸ್ಸಿಗರಿಗ್ಯಾಕೆ ಕಣ್ಣುರಿ ಬರಬೇಕು ಗೊತ್ತಿಲ್ಲ. ಇದು ಕಾಂಗ್ರೆಸ್ಸು ಹಿಡಿದಿರುವ ದಾರಿಯ ಗತಿ ತೋರಿಸುತ್ತದೆ ಹೊರತುಮತ್ತೇನಲ್ಲ. ಎಲ್ಲವನ್ನೂ ರಾಜಕೀಕರಣ ಮಾಡಲಾಗುವುದಿಲ್ಲ ಹಾಗೆಯೇ ಈ ದೇಶದಲ್ಲಿ ಪ್ರಜಾತಂತ್ರವಿದೆ...ಜನರಿನ್ನೂ
ನಿರ್ಭೀತಿಯಿಂದ ಮತ ಚಲಾಯಿಸುತ್ತಿದ್ದಾರೆ...ಅಭಿಪ್ರಾಯ ಹೇಳುತ್ತಿದ್ದಾರೆ...
    ಒಟ್ಟಿನಲ್ಲಿ ಅಮಿತಾಬ್ ಹಾಗೂ ಕಾಂಗ್ರೆಸ್ಸಿನ ಈ ತಾಕಲಾಟ ಎಲ್ಲಿಯವರೆಗೆ ನಡೆಯುತ್ತದೆ  ಹಾಗೂ ಯಾವ ದಿಕ್ಕನ್ನು ಪಡೆಯುತ್ತದೆ ಈ ಕುತೂಹಲ ಇದೆ.

Rating
No votes yet

Comments