ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು

ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು

ಅವಳನ್ನ ನಾನು ಪ್ರೀತಿಯ ಭಾವನೆಯಿ೦ದ ನೋಡಿಧು ತಪ್ಪು,,,,,,,,,

     "ಇನ್ನು ಮೇಲೆ ನಾನು ನಿನಗೆ  ಮೆಸೇಜ್ ಮಾಡೋಲ್ಲ. ನಿನ್ನ ಮರೀಬೇಕು ಅಂತ ಅನ್ಕೊಂಡಿದೀನಿ, ಯಾಕೆ ಅಂತ ಮಾತ್ರ ಕೇಳಬೇಡ ನನ್ನ ಮನಸಲ್ಲಿ ಒಂದ್ ತಪ್ಪು ಯೋಚನೆ ಬಂದಿದೆ, ಅದಕ್ಕೆ ನಾನು  ನಿನ್ನ ಮರೆಯೋ ಪ್ರಯತ್ನ ಮಾಡ್ತಿದೀನಿ. ಮರೀದೆ ಇದ್ರೆ  ನಾನ್  ಮುಂದೆ ಏನಾಗ್ತೀನೋ ನನಗೇ ಗೊತ್ತಿಲ್ಲ . ಇನ್ನು ಮೇಲೆ ನಾನು ನಿನಗೆ ಮೆಸೇಜ್ ಮಾಡಿ ತಲೆ  ತಿನ್ನೋಲ್ಲ.  ಸಾರೀ ಸಾರೀ. ನನ್ನದು ತಪ್ಪಿದ್ರೆ ನನ್ನನ್ನು ಕ್ಷಮಿಸು. ಇಷ್ಟು ದಿನ ನನಗೆ ಮೆಸೇಜ್ ಮಾಡಿದ್ಹಕೆ ತುಂಬಾ ತುಂಬಾ ಥ್ಯಾಂಕ್ಸ್. ಇಂತಿ ನಿನ್ನ ಮರೆಯೋ  ಪ್ರಯತ್ನದಲ್ ಇರ್ರೋ ನಿನ್ನ ಗೆಳೆಯ - ಸೀನು.

ನನಗೆ ತುಂಬಾ ಬೇಜಾರ್ ಆಗ್ತಿದೆ ಆದ್ರೆ ನಾನ್ ನಿನ್ನ ಮರೀಲೇಬೇಕು. ನಿನ್ನದು ಏನು ತಪ್ಪು ಇಲ್ಲ. ತಪ್ಪೆಲ್ಲಾ ನಂದೇ. ಆ ತಪ್ಪು ಯೋಚನೆ ಮಾಡಿದ್ಹಕ್ಕೇನೇ ನಾನು ನಿನ್ನ ಮರೀತಿರೋದು. ಕೊನೆ  ಸರಿ  ಬೈ"

     ಇಷ್ಟೆಲ್ಲಾ ಹೇಳಿ  ಅದಮೇಲೆ ನನಗೆ ಫೋನ್ ಮಾಡಿದ್ಲು, ನಾನು ಫೋನ್ ರೀಸಿವ್  ಮಾಡಲಿಲ್ಲ. ನಾನು ಅವಾಗ ಮತ್ತೆ ಮೆಸೇಜ್ ಕಳಿಸ್ಧೆ "ಸಾರೀ ನಿನ್ ಹಾತ್ರ ಮಾತಾಡೋಕೆ ನನಗೆ ಮುಖ ಇಲ್ಲ ಅದಕ್ಕೆ  ನಾನ್ ಫೋನ್ ರೀಸಿವ್  ಮಾಡ್ತಿಲ್ಲ  ಪ್ಲೀಸ್ ನಾನ್ನನ್ನ ಮರೆತುಬಿಡು".  ಅವಳು ಅಳ್ತಾ  ಇದ್ದಾಳೆ ಅಂತ ನನಗೆ ತಿಳೀತು. ಅವಳ ಇನ್ನೊಬ ಫ್ರೆಂಡ್   ನನಗೆ ಹೇಳಿದ್ಲು. ಏನ್ ಮಾಡ್ಲಿ   ನನಗೆ  ಬೇರೆ ದಾರಿ ಇಲ್ಲ ನಾನು ಇವಾಗ ಅವಳಿಂದ ದೂರ ಹೋಗ್ಧೆ ಇದ್ರೆ ನಾನ್ ಮುಂದೆ ಅವಳನ ಮರಿಯೋಕೆ ಆಗ್ದೆ ನಾನು  ಹುಚ್ಚ ಆಗ್ಬಿಡ್ತೀನೀ ಅದಕ್ಕೆ   ಈ ನಿರ್ಧಾರ.

ನಿನ್ನ ಕಣ್ಣತುಂಬ ನೋಡುವ ಅಸ್ಸೆ,
ಹಾ ಕಣ್ಣಿಂದ ನಿನ್ನ ನೆನಪನ್ನು ಸಾಧ ನನ್ನ ಹ್ರುಧಯದಲ್ಲಿ ಉಳಿಸಿಕೊಳುವ ಅಸ್ಸೆ, 

     
       ನಾನು  ತಪ್ಪು ಮಾಡ್ಬಿಟ್ಟೆ, ನಾನು ಅವಳು ಮೊದ್ಲಿಂದ್ಲು ಒಳ್ಳೆ ಫ್ರೆಂಡ್ಸ್ ಆಗಿದ್ವಿ.   ನನಗೆ ಗೊತಿಲ್ದೆ ನನ್ನ ಮನಸಲ್ಲಿ ಅವಳನ್ನ ಪ್ರೀತಿಸಬೇಕು ಅಂತ ಬಂತು. ಅದು ಏಕೆ ಅಂತ ನನಗೆ ಗೊತ್ತಾಗ್ತಿಲ್ಲ.
ನಾನು ಅವಳು ತುಂಬಾ ಕ್ಲೋಸ್ ಆಗಿದ್ವಿ   ಅಂದ್ರೆ ಇನ್ನೊಬ್ರು ನಮ್ಮ ಗೆಳೆತನವನ್ನು   ನೋಡಿದ್ರೆ ಅಸೂಯೇ ಪಡ್ತಿದ್ರು. ಅಕಸ್ಮಾತ್ ನಾನ್ ಅವಳತ್ರ ಹೋಗಿ ’ನಾನು ನಿನ್ನ ಪ್ರೀತಿ ಮಾಡ್ತಿದೀನಿ’ ಅಂದ್ರೆ, ಅವಳು "ಎನೋ ನಾನು ನಿನ್ನ ಎಷ್ಟು ನ೦ಬಿದ್ನೋ ನನ್ನ ಗೆಳೆಯ ಅಂತ. ನನಗೆ ಮೋಸ ಮಾಡ್ದೆ" ಅಂತ  ನನಗೆ ಹೇಳ್ಬಿಟ್ರೆ ನಮ್ಮಿಬ್ಬರ ಗೆಳೆತನ ಅಲ್ಲಿಗೇ ಕೊನೆಯಾಗಿಬಿಡುತ್ತೆ ಅನ್ನೋ ಭಯ ನನಗಿದೆ

 "ಯಾಕೆ ನಾನ್ ಏನ್ ಮಾಡ್ದೆ,,?" ಅಂತ ಕೇಳಿದಳು ಅದ್ಹಕೆ ನಾನು ಬೇರೆ ಏನೋ ಕಾರಣ ಹೇಳಿ ನನ್ನ ಜೊತೆ ಮಾತಾಡ್ಬೇಡ ನನ್ನನ್ನು ಮರೆತು ಬೀಡು ಪ್ಲೀಸ್............ ಅಂತ ಅವಳಿಗ ಹೇಳ್ದೆ

     ನನಗೆ ಅವಳ ಮೇಲೆ ಪ್ರೀತಿ ಹುಟ್ಟಿದ್ದು ಅವಳ ಒ೦ದು ಮಾತಿನಿ೦ದ -- ನಾವು ದಿನಾ ಮೆಸೇಜ್ ಮಾಡ್ತಾ ಮಾಡ್ತಾ ತುಂಬಾ ಕ್ಲೋಸ್ ಆಗಿದ್ವಿ,  ನನಗೆ ಒಂದು ದಿನ ಅವಳು ’ನಿನ್ನ ಫುಲ್ ನಂಬಿದೀನಿ ಗೊತ್ತ?’  ಅಂತ ಹೇಳುದ್ಲು ಅವತ್ನಿಂದ ನನ್ನ ಮನಸು ಅವಳ ಮೇಲೆ ಸ್ನೇಹದಿ೦ದ ಪ್ರೀತಿಯಾಗಿ ಬದಲಾವಣೆಯಾಗಿ ಹೋಯ್ತು. ಮೊದಲೇ ಅವಳು ೨ ಸರ್ತಿ ಪ್ರೀತಿಯಲ್ಲಿ  ಸೋತಿರೋಳು.    ಅವಳಿಗೆ ಪ್ರೀತಿ ಬಗ್ಗೆ ನಂಬಿಕೆ ಇಲ್ಲ.  ನಾನು ನಿನ್ನ ಪ್ರೀತಿ ಮಾಡ್ತಿದೀನಿ ಅಂದ್ರೆ ನನ್ನ ಮೇಲೆ ಎ೦ತ ಯೋಚನೆ ಬರ್ಬೌದು ಅಂತ ಮನಸಲ್ಲೇ ಯೋಚನೆ ಮಾಡಿ ಒಂದ್ ನಿರ್ಧಾರಕ್ಕ ಬಂದೆ .  ಇವಳನ್ನ  ನಾನು ಮರೆಯಬೇಕು ಅಂದ್ರೆ ಇವಳಿಂದ ಮೊದಲು ನಾನು  ದೂರ ಆಗಬೇಕು ಬೇರೆ ದಾರಿ ಇಲ್ಲ ಅಲ್ವ...? ಅವಳತ್ರ ನಾನು ಇದ್ರೆ, ಅವಳ ಹತ್ರ ನನ್ನ ಪ್ರೀತಿ ವಿಷಯ ಹೇಳಿ ಅವಳು ನನ್ನನ್ನ ಕೊನೇವರ್ಗೂ ದ್ವೇಷಿಸಿದ್ರ ಅದನ್ನ ನೆನಸಕೊಳ್ಳೋಕೂ ಭಯವಾಗುತ್ತೆ .ಅದಕ್ಕೆ ಈ ಮೆಸೇಜ್ ಮಾಡಿ, ಅವತ್ನಿಂದ ನಾನ್ ಅವಳಿಗೆ ಮೆಸೇಜ್ ಮಾಡ್ತಿಲ್ಲ ಫೋನ್ ಮಾಡಿದ್ರು ಫೋನ್ ರಿಸೀವ್ ಮಾಡ್ತಿಲ್ಲ.

ಅವಳು ನನ್ನ ಮರೆತರೂನು ನಾನು ಅವಳನ ಮರೆಯೋಕೆ ಆಗ್ಗೋಲ್ಲ ಆದ್ರೂನು ನಾನ್ ಮರಿಬೇಕು ಯಾಕೆಂದರೆ ನಾನ್ ಸ್ನೇಹನಾದ್ರೂ ಉಳಿಸ್ಕೊಳ್ಳಲೇ ಬೇಕು ಅವಳ ಹತ್ರ.
ಒಬ್ಬೊಬ್ಬರಿಗೆ ಪ್ರೀತೀನ ಕಳ್ಕೊ೦ಡ್ರೆ  ಏನ್ ಮಾಡಬೇಕು ಅಂತ ಗೊತ್ತಾಗೋಲ್ಲ ,  ಆದ್ರೆ ನಾನು ಎರಡೂ ಕಳಕೊಂಡು ನನಗೆ ನಾನೇ ಶಪಿಸ್ಕೊಳ್ತಿದೀನಿ. ಇದೆಲ್ಲ ನನಗೆ ಆಗಬೇಕಾದೆ. ಸ್ನೇಹದಲ್ಲೂ ಪ್ರೀತಿ ಹುಡುಕೋಕೆ ಹೋದ್ರೆ ನಾನ್ನ ಗತೀನೆ ಎಲ್ಲರಿಗೂ  ಬರೋದು ನಾನ್ನ ಕಣ್ಣಲ್ಲಿ ನೀರು ಬರ್ತಿದೆ ಸಾರೀ ನನ್ನದು ತಪ್ಪು ಎ೦ದಾದ್ರೆ,,,,,,,,,,,,,,,,,,

                                                                                                                                                                  ಏನೆಂದು ಬರೆಯಲಿ ಈ ಪುಟ್ಟ ಹಾಳೆಯಲಿ ,            
                                                                                                                                                                ನನ್ನ ನೆನಪೊಂಧಿದರೆ ಸಾಕು ನಿನ್ನ ಹೃದಯದಲಿ .
                                           
                                                                                                                                                   
ಇಂತಿ ನಿನ್ನ ಮರೆಯುವ ಪ್ರಯತ್ನದಲ್ಲಿರೋ ನಿನ್ನ ಗೆಳೆಯ
ಸೀನು

Rating
No votes yet

Comments