ಕಥಿ ಹೈಲ್ ಅಯ್ತಲ್ಲ ಮರಾಯ್ರೇ ೩

ಕಥಿ ಹೈಲ್ ಅಯ್ತಲ್ಲ ಮರಾಯ್ರೇ ೩

ಹ್ಞಾ !! ನಂಗಿಲ್ಯಾ!!!???

"ಚಿಕ್ಕಮ್ಮ, ಚಿಕ್ಕಮ್ಮ, ನೀವ್ ಸಣ್ಣಿಪ್ಪತ್ತಿಗೆ ಮಂಗ ನಿಮ್ಗ್ ಹೊಡಿತಮ್ರಲ್ಲೇ, ಹಂಗಾರೆ ಎಂತಕೆ ಹೊಡಿತ್ ಮಂಗ ನಿಮ್ಗೆ?"
"ಅದ್ಯಾರ್ ಹೇಳ್ರಾ ನಿಂಗೀಗ?" ಸ್ವಲ್ಪ ನಾಚಿಕೊಂಡ ಚಿಕ್ಕಮ್ಮನ ನೆನಪು ಆಗಲೇ ಬಾಲ್ಯಕ್ಕೆ ಇಳಿದಾಗಿತ್ತು."ಹೌದು ಆ ಸಂಜೆ ನಾನು ನಿನ್ನಮ್ಮ ಸಾಯಂಕಾಲ ಮನೆಗೆ ಬರ್ತಾ  ಇದ್ದೊ. ನಮ್ಮ ಕೆರಿ ದಂಡೆಲಿ ಆಗ ಒಂದ್ ದೊಡ್ಡ ಗೋಳಿ ಮರ ಇದ್ದಿತ್ತ್. ನಾವೆಲ್ಲ ಅದೇ ಮರದಗೆ ಜೋಕಾಲಿ ಆಡುತ್ತಿತ್ತ್. ಅವತ್ತ ಅದ್ರಾಗೆ ಒಂದ್ ಚಣ್ಣ ಮರಿ ಮಂಗ ಆಡ್ಕಂದ್ ಇದ್ದಿತ್ತ್. ನಾನ ಅದನ್ನ್ ಕಂಡ್ ಖುಶಿ ಆಯಿ ಅದ್ರ ಹತ್ತರ ಹೋದೆ ಎತ್ಕಂಬುಕೆ. ಅದೆಲ್ಲಿತ್ತೊ ಅದ್ರ ಅಬ್ಬಿ ಬಂದ್ಕಂಡ್ ನನ್ನ ಕೆನ್ನಿಗೆ ಚಟಾರ್ ಅಂತ ತಪರಾಕಿ ಕೊಡ್ತ. ನಿನ್ನಮ್ಮ ನಾನ್ ಮರ್ಕಂಡ್, ಮರ್ಕಂಡ್, ಮನಿಗೆ ಬಂತ್."

"ಹಂಗಾರೆ  ನಂಗ್ಯಂತ ಅಂತದ್ದ್  ಆಯಿಲ್ಯ ಚಿಕ್ಕಮ್ಮ?" ಮಾಣಿ ಕೇಳಿದ ಕುತೂಹಲದಲ್ಲಿ. ಸ್ವಲ್ಪ ಯೋಚಿಸಿದ  ಚಿಕ್ಕಮ್ಮ ಗಲಗಲನೆ ನಗುತ್ತಾ ಅಂದರು  "ನಂಗಿಲ್ಯಾ?"
"ಎಂತ?" ಮಾಣಿ ಉವಾಚ.
"ಸಣ್ಣಿಪ್ಪತ್ತಿಗೆ ನೀನ್ ಗುಂಡ್ ಗುಂಡಗೆ ಚಂದ ಇದ್ದೆ, ಎಲ್ರಿಗೂ ನೀನಂದ್ರ್ ಸೈ.ಅದಕ್ಕೆ ಮನೇಲ್ ಎಂತ ಮಾಡ್ದ್ರೂ, ಎಲ್ಲರೂ ನಿಂಗ್ ಪಾಲ್ ಕೊಡ್ತಿದ್ದ್ರ್.
ಸಣ್ಣಿಪ್ಪತ್ತಿಗೆ ನಮಗೆಲ್ಲ ಗುಡ್ಡಿಗೆ ಹೋಪುಕೆ ಈಗಿನ್ ಕಂಡಂಗೆ ಪಾಯಿಖಾನೆ ಇರ್ಲಿಲ್ಲೆ, ಚಂಬ್ ತಕಂಡ  ಎಲ್ಲ ಗದ್ದಿ ಬೈಲಿಗೋ ಅಲ್ದಿರ್ ಹಾಡಿಗೋ ಹೋಗ್ತಿತ್. ಆ ದಿನ ನೀನು ಚಿಕ್ಕಪ್ಪೈನೊಟ್ಟಿಗೆ ಬೈಲಿಗ್ ಹೊಯ್ದೆ ಅಂಬ್ರು. ಚಿಕ್ಕಪೈಯ್ಯ ಗುಡ್ಡಿಗೋಯಿ ಬಪ್ಪತ್ತಿಗೆ ಒಂದ್ ನಾಯಿ ಬಂದ್ ಅದನ್ನ ತಿಂತ್ ಅಂಬ್ರ. ಅದ್ ಪೂರ್ತಿ ತಿಂದಾರ ಮೇಲೆ ನೀನ್ ಅದನ್ನ  ಖಾಲಿ ಮಾಡ್ದ್ ಕಂಡ್ಕಂಡ್
ಹ್ಞಾ ನಂಗಿಲ್ಯಾ ಅಂದ್ಯಂಬ್ರು. ಎಲ್ಲರೂ ಅದನ್ನ ಇಗ್ಲೂ ನೆನ್ಪ್ ಮಾಡ್ಕಂಡ್,  ನೆನ್ಪ್ ಮಾಡ್ಕಂಡ್  ನಗ್ಯಾಡ್ತರ ಕಾಣ್"

Rating
No votes yet

Comments