ನಾನಿಲ್ಲದಿದ್ದಾಗ
ಬರಹ
ನಾನಿಲ್ಲದಿದ್ದಾಗ
ಹೌದಪ್ಪಾ, ಏರಿಸುವೆ
ದುಬಾರೀ ಹೂಹಾರ, ಕರೆಸುವೆ
ಬಂಧು ಬಾಂಧವರ, ಹಾಕಿಸುವೆ
ಭರ್ಜರಿ ಊಟವ ಹತ್ತೂರಿಗೆ,
ಪೂಜೆ ಪುನಸ್ಕಾರ ದೇವಳಿಗೆ
ದಾನ ದತ್ತಿ ಸಂಘ ಸಂಸ್ಥೆಗೆ
ಅದೂ ನಾನಿಲ್ಲದಿದ್ದಾಗ
ಆಗಿರಲಿಲ್ಲವೇ ಮೊದಲಿಗೆ
ನೆರಳ್ಕೊಡುವ ಮರವಾಗಿ
ಪಿತನಾಗಿ, ಗುರುವಾಗಿ, ಜತೆಯಾಗಿ,
ಕೈಹಿಡಿದು ಸಖನಾಗಿ,
ಬದುಕಿನಾಸರೆಯಾಗಿ
ನಿನ್ನ ಈಗಿರುವಂತೆ ಬೆಳೆಸಲಿಲ್ಲವೇ
ನಾನಿದ್ದಾಗ
ಆದರೆ ಆಸ್ತಿ ಅಂತಸ್ತಲ್ಲ
ಐಶ್ವರ್ಯ,ವೈಭೋಗವಲ್ಲ
ನಾ ಬಯಸಿದುದು
ಒಂದು ಪ್ರೀತಿಯ ನೋಟ
ವಲವಿನಾಸರೆಯೂಟ
ಮತ್ತು ನಿನ್ನ ಸನಿಹ
ನಾನಿದ್ದಾಗ