ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಯಾರು ಖರ್ಚು ಭರಿಸುತ್ತಾರೆ ?
ಅಣುಶಕ್ತಿ ಸೀಮಿತ ಹೊಣೆಗಾರಿಕೆ ಬಿಲ್, ಈ ಸಲದ ಪಾರ್ಲಿಮೆಂಟಿನಲ್ಲಿ ಅಂಗೀಕರಿಸದೆ, ಮುಂದೂಡಲ್ಪಟ್ಟಿದೆ, ಆದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಆಗುವ ಅನಾಹುತವೇನೂ ತಪ್ಪಿಲ್ಲ. ದುರದೃಷ್ಟವಶಾತ್ ಈ ಗಂಭೀರ ಸಮಸ್ಯೆಯ ಮೇಲೆ ಯಾವುದೇ ತರಹದ ಸಾರ್ವಜನಿಕ ಚರ್ಚೆಗಳೂ ನಡೆದಿಲ್ಲ. ಒಂದುವೇಳೆ ಈ ಬಿಲ್ ಅಂಗೀಕೃತವಾದರೆ, ಸಂಪೂರ್ಣ ಜನತೆಯ ಮೇಲೆ ಎರಗುವ, ಆರೋಗ್ಯ, ಪೌರ ಹಕ್ಕುಗಳು, ಜನ ಜೀವನದ ಏರಿಳಿತಗಳನ್ನು ಕುರಿತು ಯಾವುದೇ ಸಂಘ ಸಂಸ್ಥೆಗಳಾಗಲಿ ಇದುವರೆಗು ಧ್ವನಿ ಎತ್ತಿಲ್ಲ.ಇವತ್ತೆಲ್ಲಾ ಕೇಳಿಸುತ್ತಿರುವುದು ಒಂದೇ ಧ್ವನಿ - ಅದು ಈ ಮಸೂದೆಯ ಅಂಗೀಕಾರಕ್ಕಾಗಿ ಒತ್ತಾಯ. ಪ್ರತಿ ಪಕ್ಷದ ಸದಸ್ಯರು ಇದನ್ನು ವಿರೋಧಿಸಿರುವುದು ದೇಶದ ಸಾರ್ವಭೌಮತ್ವಕ್ಕಾಗಿ ಮತ್ತು ಖರ್ಚಿನ ಸಲುವಾಗಿ. ಆದರೆ ಇದರ ಅತ್ಯಂತ ಅಪಾಯಕರವಾದ, ಕ್ಲಿಷ್ಟವಾದ ವಿಷಯಗಳು ಹಾಗೇ ಯಾರ ಗಮನವನ್ನೂ ಸೆಳೆಯದೆ ಮುಚ್ಚಿ ಹೋಗಿವೆ.
ಭಾರತ ತನ್ನ ಸ್ಥಾಪಿತ ಅಣುಶಕ್ತಿಯ ಒಟ್ಟು ಸಾಮರ್ಥ್ಯವನ್ನು 60,000 ದಿಂದ 80,000 MW ಗೆ 2030ರ ಒಳಗೆ ಹೆಚ್ಚಿಸಿಕೊಳ್ಳುವ ಉಪಾಯ ಮಾಡಿದೆ. ಇದರಿಂದ ನಮ್ಮ ದೇಶದ ಶೇಕಡಾ 5% ಅಣುಶಕ್ತಿಯ ಅವಶ್ಯಕತೆ ಮಾತ್ರ ಪೂರೈಸುವುದಾದರೂ, ಅಣುಶಕ್ತಿಯ ಉತ್ಪಾದನೆಗಾಗಿ ಸುಮಾರು 100 ಬಿಲಿಯನ್ ಡಾಲರ್ ಸಹಾಯಧನ ಸರಕಾರದಿಂದ ದೊರೆಯುತ್ತದೆ ಅಂದರೆ ನಮ್ಮಂಥಹವರ ತೆರಿಗೆ ಹಣದಿಂದ...!! ಆದರೆ ಸುಮಾರು 175 ಬಿಲಿಯನ್ ಡಾಲರ್ ನಷ್ಟು ಹಣ ಲಾಭವಾಗುವುದು ಇದೆ. ಖಾಸಗಿ ಸಂಸ್ಥೆಗಳು ಈ ಬಿಲ್ ನ ಅಂಗೀಕಾರದಿಂದ ಆಗುವ ಲಾಭಕ್ಕಾಗಿ ಮೆರವಣಿಗೆ ನಡೆಸುತ್ತಿವೆ ಆದರೆ ಸಂಭವಿಸಬಹುದಾದಂತಹ ದುರಂತಗಳ ಜವಾಬ್ದಾರಿ ತೆಗೆದುಕೊಳ್ಳುವ ಮಾತಿನಲ್ಲಿ ಹಿಂದೆ ಸರಿಯುತ್ತಿವೆ... ಅಕಸ್ಮಾತ್ ಏನಾದರೂ ದುರಂತ ಸಂಭವಿಸಿದ ಸಂದರ್ಭದಲ್ಲಿ ಅಂಗೀಕೃತ ಬಿಲ್ಲ್ ನಷ್ಟದ ಮೊತ್ತವನ್ನು 450 ಮಿಲಿಯನ್ ಡಾಲರ್ ಗಳಷ್ಟು ಅಂದಾಜು ಮಾಡಲಾಗಿದೆ. ಇದು ಅಣುಶಕ್ತಿಯ ಖಾಸಗೀಕರಣದ ಯುಗದ ಪ್ರಾರಂಭ..!!!!
ಅಣುಶಕ್ತಿ ಉತ್ಪಾದನೆಯ ಹೆಚ್ಚಳದ ಕನಸುಗಳು, ಸಂಭವಿಸಬಹುದಾದಂತಹ ದುರಂತದ ಸರಮಾಲೆಗಳ ಜೊತೆ ಜೊತೆಗೇ ಬೆಸೆದಿದೆ... ಲಾಭದ ಸಂಖ್ಯೆಯ ಅತಿ ಹೆಚ್ಚು ಪ್ರಕರ್ಶನವು , ದುರಂತಗಳ ವಿಷಯಗಳನ್ನು ಮರೆ ಮಾಚಿ, ಸಾರ್ವಜನಿಕರಿಗೆ, ಅಣುಶಕ್ತಿ ಉತ್ಪಾದನೆ ಶೇಕಡ 100ರಷ್ಟು ಕ್ಷೇಮ, ಶುದ್ಧ ಮತ್ತು ಕಡಿಮೆ ಖರ್ಚಿನ ಉಪಾಯವೆಂದು ಬಿಂಬಿಸಲಾಗುತ್ತಿದೆ. ಈಗಾಗಲೇ ಸಂಭವಿಸಿರುವ ಭೂಪಾಲ್ ಮತ್ತು ಕೆರ್ನೊಬಿಲ್ ದುರ್ಘಟನೆಗಳು ಈಗಾಗಾಲೇ ಇತಿಹಾಸದ ತಳ ಸೇರಿಯಾಗಿವೆ. ಕಾಕತಾಳೀಯವಾಗಿ ಈಗ ದುರ್ಘಟನೆಗಳಿಗಾಗಿ ನಿರ್ಧರಿಸಲಾಗಿರುವ ಮೊತ್ತ ೪೫೦ ಮಿಲಿಯನ್ ಡಾಲರ್, ಭೂಪಾಲ್ ನ ದುರ್ಘಟನೆಗಾಗಿ 1989ರಲ್ಲಿ ವ್ಯಯಿಸಿದ ಮೊತ್ತಕ್ಕಿಂತ ಕಡಿಮೆ ಇದೆ.
ಅಣುಶಕ್ತಿ ಸೀಮಿತ ಹೊಣೆಗಾರಿಕೆ ಭಾರತದ ಪ್ರಜಾಪ್ರಭುತ್ವದ ಮುಖಕ್ಕೆ ರಾಚುವಂತಿದೆ. ಇದು ’"Polluter Pays" ಮತ್ತು "Precaudionary Principle", ಎರಡರ ಉಗ್ರ ನಿರ್ಲಕ್ಷಯವಾಗಿದೆ. ಮಾಜಿ ಅಟ್ಟಾರ್ನಿ ಜೆನೆರಲ್ ಸೊಲಿ ಸೊರಾಬ್ಜಿಯವರು ’ಮಾನವನ ಬದುಕುವ ಹಕ್ಕು’ ಕಾನೂನಿನ ಉಲ್ಲಂಘನೆಯನ್ನೂ, ಇದು ಆರ್ಟಿಕಲ್ 21 ಪ್ರಕಾರ ಮಾಡುತ್ತದೆಂದು ತೋರಿಸಿದ್ದಾರೆ. ಬಿಲ್ ಕೆಲವು ಸುಪ್ರೀಮ್ ಕೋರ್ಟ್ ನ ಅಪಾಯವಾದ ಅಣುಶಕ್ತಿ ಉತ್ಪಾದನೆಯ, ಆದೇಶವನ್ನೂ ಮೀರಿದೆ.
ಈ ಅಣುಶಕ್ತಿ ಉತ್ಪಾದನೆಯಿಂದ ಉಂಟಾಗುವ ಸಂತತಿ ಅಥವಾ ಪೀಳಿಗೆಯನ್ನು ಕಾಡುವ ಮಲಿನಗೊಳಿಸಲ್ಪಟ್ಟ ನೀರು, ಗಾಳಿ, ಮಣ್ಣು... ಇವುಗಳ ಬಗೆಗೆ ನಾವು ಎಚ್ಚರವಹಿಸುವ ಅಗತ್ಯವಿದೆ. ಇದೆಲ್ಲವನ್ನೂ ಶುದ್ಧೀಕರಿಸುವ ಖರ್ಚು ನಾವು ಸರಿಯಾಗಿ ಸೀಮಿತಗೊಳಿಸಿದರು ಕೂಡ ಇದನ್ನು ಸರಕಾರವೇ ಭರಿಸಬೇಕಾಗಿದೆ. ಆದ್ದರಿಂದ ಈ ಬಿಲ್ ಈ ಖರ್ಚನ್ನು ತೆರಿಗೆ ಪಾವತಿಸುವ ಸಾರ್ವಜನಿಕರ ಮೇಲೆ ಹೇರುವ ಸಿದ್ಧತೆ ನಡೆಸಿದೆ.
ಈ ತರಹದ ಒಂದು ಘೋರ ಮಾನೋಲ್ಲಂಘನೆ ನಾವು ಎಂದರೆ ತೆರಿಗೆ ಪಾವತಿಸುವವರ ಹೆಸರಿನಲ್ಲಿ ನಡೆಯುತ್ತಿದೆ, ಘೋರ ಅನ್ಯಾಯವೇನೆಂದರೆ ನಮ್ಮ ಮೇಲೆ ಈ ವೆಚ್ಚವನ್ನು ತೆರಿಗೆಯ ಮುಖಾಂತರ ನಮ್ಮ ಅನುಮತಿ ಇಲ್ಲದೆ ಹೇರುತ್ತಿರುವುದು. ಆದ್ದರಿಂದ ಈ ಅಣುಶಕ್ತಿ ಬಿಲ್ಲ್ ಸಾರ್ವಜಿಕವಾಗಿ, ಮುಕ್ತವಾಗಿ ಚರ್ಚೆಗೆ ಒಳಪಡಬೇಕು ಮತ್ತು ಇದನ್ನು ನಾವು ಶತಾಯ ಗತಾಯ ವಿರೋಧಿಸಲೇಬೇಕು. ಈ ಕೆಲಸಕ್ಕೆ ಇದಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನೂ ವಿವರವಾಗಿ ಸಾರ್ವಜನಿಕರಿಗೆ ತಿಳಿಯಪಡಿಸಲು ಒಂದು ಸಾರ್ವಜನಿಕ ಸ್ಥಳದಲ್ಲಿ, ಅವಕಾಶ ಕಲ್ಪಿಸಬೇಕಾಗಿದೆ.
ಎಲ್ಲಕಿಂತ ಮೊದಲು ನಾವು ನಿಮ್ಮನ್ನು ಈ ಆಂಧೋಳನದಲ್ಲಿ ಭಾಗವಹಿಸಿ ಮತ್ತು ಪ್ರಜಾಪ್ರಭುತ್ವ ಕಾಪಾಡುವ ಸಂಸ್ಥೆಗಳು, ಮಹಿಳಾ ಸಂಘಗಳೂ, ವಿದ್ಯಾರ್ಥಿಗಳೂ, ಮತ್ತು ಎಲ್ಲಾ ಸಾರ್ವಜನಿಕರೂ ಬನ್ನಿ, ಕೈ ಜೋಡಿಸಿ ಎಂದು ಕರೆ ಕೊಡುತ್ತಿದ್ದೇವೆ... ಭಾರತ ದೇಶದ ಮಹಾನ್ ಪ್ರಜೆಗಳು ಈ ಅಣುಶಕ್ತಿ ಉತ್ಪಾದನೆಯಿಂದ ಆಗುವ ಲಾಭ, ನಷ್ಟ, ಖರ್ಚು, ಜವಾಬ್ದಾರಿ, ಅನಾಹುತಗಳು, ಹೀಗೆ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿದುಕೊಳ್ಳುವ ಅವಶ್ಯಕತೆ ಮತ್ತು ಸಮಯ ಇದಾಗಿದೆ. ಕಾರ್ಯಕ್ರಮದ ವಿವರಗಳು ಹೀಗಿವೆ :
೧) ಐಕ್ಯಮತದ ಸಂಕ್ಷಿಪ್ತ ವಿವರಣೆ - ಡಾ ಹೆಲೆನ್ ಕಾಲ್ಡಿಕೋಟ್ಟ್, ವೈದ್ಯರು ಲೇಖಕರು ಮತ್ತು ಅಣುಶಕ್ತಿ ಯುಗದ ವೈದ್ಯಕೀಯ ಅಪಾಯಗಳ ಕುರಿತು ಮಾತನಾಡುವವರು
೨) ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಖರ್ಚು ಭರಿಸುವವರು ಯಾರು ? - ಶ್ರೀ ನಾಗೇಶ ಹೆಗಡೆ, ಮಾಜಿ ಸಂಪಾದಕ, ಪ್ರಜಾವಾಣಿ
೩) ಭೂಪಾಲ ದುರಂತದ ಸೀಮಿತ ಹೊಣೆಗಾರಿಕೆ - ಮಧುಮಿತಾ ದತ್ತ, ಕಾರ್ಪೊರೇಟ್ ಅಕೌಂಟಬಿಲಿಟಿ ಡೆಸ್ಕ್, ಚೆನ್ನೈ. ಭಾಷಣ ಮುಗಿದ ನಂತರ ಭೂಪಾಲ್ ದುರಂತದ ಒಂದು ನಾಲ್ಕು ನಿಮಿಷಗಳ ಡಾಕ್ಯುಮೆಂಟರಿ ಚಿತ್ರ
೪) ಸೀಮಿತ ಹೊಣೆಗಾರಿಕೆ ಮತ್ತು ಅಪರಾಧಿ ಬಿಲ್ಲ್ - ಲಿಯೋ ಸಲ್ದಾನ, ಎನ್ವಿರಾನ್ ಮೆಂಟ್ ಸಪೋರ್ಟ್ ಗ್ರೂಪ್
Discussion Contributions and Campaign Planning
Chandan Rao, CSSE
YG Murlidhar, CREAT
Karuna Raina, Greenpeace
ಈ ಸಾರ್ವಜನಿಕ ಸಭೆ ಶನಿವಾರ ಏಪ್ರಿಲ್ 3, 2010 ರಂದು ಮಧ್ಯಾಹ್ನ 2ರಿಂದ ಸಾಯಂಕಾಲ 6ರವರೆಗೆ "ಆಶೀರ್ವಾದ್", ಸೈಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ. ನೀವೂ ಬನ್ನಿ ಮತ್ತು ನಿಮಗೆ ತಿಳಿದ ಎಲ್ಲರಿಗೂ ವಿಷಯ ತಿಳಿಸಿ, ಅವರನ್ನೂ ಕರೆ ತನ್ನಿ. ನೀವೆಲ್ಲರೂ ಈ ಆಂಧೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮ ಜೊತೆ ಕೈಜೋಡಿಸುವಿರೆಂದು ನಂಬಿದ್ದೇವೆ. ನಮ್ಮ ಮುಂದಿನ ಪೀಳಿಗೆಯ ಭವ್ಯ ಭವಿಷ್ಯಕ್ಕೆ, ಆರೋಗ್ಯಕ್ಕೆ, ನಾವು ಈ ದಿನ ಹೋರಾಡಬೇಕಾಗಿದೆ.
ಬರಹವನ್ನು ಕನ್ನಡೀಕರಿಸಿ ಕೊಟ್ಟ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರಿಗೆ ವಂದನೆಗಳು!!
Comments
ಉ: ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಯಾರು ...
In reply to ಉ: ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಯಾರು ... by thesalimath
ಉ: ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಯಾರು ...