ಬದುಕು ಮತ್ತು ಬಾಂಬು(ಕವನ)
ಬರಹ
ಬದುಕು ಮತ್ತು ಬಾಂಬು
ಬದುಕಲು ಹೆದರಿಕೆ
ಇವರಿಗೆಸಾವಿಗಿಲ್ಲ ಅಂಜಿಕೆ
ಮಾನವ ಬಾಂಬುಗಳು
ಇವರು ಜೀವಂತ ಚಿತೆಗಳು
ಬದುಕುವ ದಾರಿಯ
ತಿಳಿಯದ ತಿಳಿಗೇಡಿಗಳು
ಸಾಯಲು ಸಾವಿರಾರು
ದಾರಿಯ ಹುಡುಕುವರು
ಜೀವನದ ಸವಿಯ
ಇವರೇನು ಬಲ್ಲರು
ಯಾರದೋ ಆಮಿಷಕೆ
ಕೊರಳೊಡ್ಡುವರು
ಮುಗ್ಧರ ಜೀವನದಿ
ಚೆಲ್ಲಾಟವಾಡುವರು
ಮನುಷ್ಯರಲ್ಲ ಇವರು
ಮಾನವ ಬಾಂಬುಗಳು
ಸಾವನು ಕೈಯಲ್ಲಿ
ಹಿಡಿದೆತಿರುಗಾಡುವವರು
ಜೀವಂತವಿದ್ದೆ ನಡೆದಾಡು
ವಶವದಂತಾಗುವರು
ನಕ್ಸಲೈಟ್,ಉಲ್ಫಾ,ಲಷ್ಕರ್
ಗಳನರಭಕ್ಷಕರು
ಮಾನವ ಸಂಬಂಧವರಿಯದ
ಮತಿಹೀನರು
ಬದುಕು ಇವರಿಗೆ
ಹೊರೆಯು ಸಾವೇ
ಇವರ ಗುರಿಯು
ಮಾನವರಲ್ಲ ಇವರು
ಜೀವಂತ ಶವಗಳು
@ ಅಮಿರಾತನಯ ಮಾನ್ವಿ.