’ನಾನೇಳ್ದಂಗ್ ಮಾಡ್ರಿ ; ಆದ್ರೆ ನಾನ್ಮಾಡ್ದಂಗ್ಮಾಡ್ಬ್ಯಾಡ್ರಿ’ !

’ನಾನೇಳ್ದಂಗ್ ಮಾಡ್ರಿ ; ಆದ್ರೆ ನಾನ್ಮಾಡ್ದಂಗ್ಮಾಡ್ಬ್ಯಾಡ್ರಿ’ !

ಬರಹ

ಸತೀಶ್ ಈ ತಿಂಗಳ (ಏಪ್ರಿಲ್) ’ಮಯೂರ ’ ದಲ್ಲಿ ಸೊಗಸಾದ ’ಒಂದು ಪ್ರಸಂಗ ’ವನ್ನು ಪ್ರಕಟಿಸಿದ್ದಾರೆ. ಬಹುಶಃ ಅದಕ್ಕೆ ’ಕಾಯಿಲೆ ಎನ್ನುವ ಬದಲು ಇನ್ನೇನಾದರೂ ಆಕರ್ಶಕವಾದ ಹಣೆಬರಹವನ್ನು ಕೊಟ್ಟಿದ್ದಿದ್ದರೆ, ಅದು ಹೆಚ್ಚು ಜನರನ್ನು ಮುಟ್ಟುತ್ತಿತ್ತೇನೋ ! ನಾನು ಆ ಅವಕಾಶವನ್ನು ಉಪಯೋಗಿಸಿಕೊಂಡು, ಅದನ್ನು ಇದ್ದಂತೆಯೆ, ನಮ್ಮ ಸಂಪದಿಗರಿಗೆ ಓದಲು ಅನುವುಮಾಡಿಕೊಡುತ್ತಿದ್ದೇನೆ. ಸತೀಶ್ ರವರ ಸೌಜನ್ಯಕ್ಕೆ ವಂದನೆಗಳು.

ಬರೀ ಕೆಮ್ಮು ಮಾತ್ರಾನಾ ? ಕಫಾನೂ ಬರುತ್ತೋ ? ಡಾಕ್ಟರ್ ಮತ್ತೆ ಗುಡುಗಿದರು.
ಹೌದು ಸಾರ್,  ಕಫಾನೂ ಬರುತ್ತೆ’ ಮಾದಪ್ಪ ಹೇಳಿದ.
’ ಈಗ ಕಫ ಬರುತ್ತೆ ನಂತರ ಬ್ಲಡ್ಡು ಬರುತ್ತೆ. ಆಮೇಲೆ ಬರುತ್ತೆ ಚಟ್ಟ’ ಅಂತ ಡಾಕ್ಟರ್ ಗಡಸು ದನಿಯಲ್ಲಿ ಹೇಳಿ, ಪ್ರಿಸ್ಕ್ರಿಪ್ಷನ್ ಹಾಳೆಯನ್ನು ಪರ್ರನೆ ಕಿತ್ತು ಏನೇನೋ ಮಾತ್ರೆಗಳ ಹೆಸರು ಬರೆದರು. ’ತಗೋ ಇಲ್ಲಿ ಬರ್ದಿರೋ ಮಾತ್ರೆಗಳನ್ನ ದಿನಕ್ಕೆ ಮೂರು ಹೊತ್ತು ಊಟವಾದ ಮೇಲೆ ನುಂಗು. ಅಲ್ಲಿ ನಮ್ಮ ರಿಸೆಪ್ಷನ್ ಹತ್ರ ಫೀಸು ಬಡಿದು ಹೋಗು’ ಎಂದರು.
ಮಾದಪ್ಪ ಕೂತಲ್ಲಿಂದ ಏಳಲಿಲ್ಲ. ತನ್ನ ಜೇಬಿನಿಂದ ಹಾಳೆಯೊಂದನ್ನು ತೆಗೆದುಕೊಂಡು ಏನನ್ನೋ ಬರೆಯತೊಡಗಿದ. ’ಏನಯ್ಯಾ ಅದು ?’ ಎಂದು ಡಾಕ್ಟರ್ ಕೋಪದಿಂದ ಕೇಳಿದರು.
’ಕ್ಷಮಿಸಿ ಸರ್. ನನ್ನ ಹೆಸರು ಮಾದಪ್ಪ ಅಲ್ಲ. ಡಾ. ಪ್ರಕಾಶ್ ಅಂತ. ನಾನೊಬ್ಬ ಸೈಕಿಯಾಟ್ರಿಸ್ಟ್. ನಿಮ್ಮ ಅತಿರೇಕದ ವರ್ತನೆಯಿಂದ ನಿಮ್ಮ ಬಳಿ ಬರುವ ರೋಗಿಗಳ ಸಂಖ್ಯೆ ಕಡಿಮೆಯಗಿದ್ದು,  ಈ ಬಗ್ಗೆ ಆತಂಕಗೊಂಡಿದ್ದ ನಿಮ್ಮ ಹೆಂಡತಿ ನನ್ನನ್ನು ಸಲಹೆ ಕೇಳಿದ್ದರು. ನಿಮ್ಮನ್ನು ಪರೀಕ್ಷಿಸಲು ನಾನು ಈ ವೇಷದಲ್ಲಿ ಬರಬೇಕಾಯಿತು. ನನಗೆ ನಿಮ್ಮ ಸಮಸ್ಯೆ ಏನೆಂದು ಈಗ  ತಿಳಿಯಿತು. ನೀವು ಜಿಎಡಿ (ಜನರಲೈಸ್ ಆಂಗ್ಸೈಟಿ ಡಿಸ್ ಆರ್ಡರ್) ನಿಂದ ಬಳಲುತ್ತಾ ಇದ್ದೀರಿ. ಇದು ವಿಕೋಪಕ್ಕೆ ಹೋದರೆ ತುಂಬಾ ಅಪಾಯ.  ನಾನು ಬರೆದಿರೋ ಈ  ಮಾತ್ರೆಗಳನ್ನು ಬೆಳಿಗ್ಯೆ ಮತ್ತು ರಾತ್ರಿ ಊಟವಾದ ನಂತರ ತೆಗೆದುಕೊಳ್ಳಿ. ಕನ್ಸಲ್ಟೇಷನ್ ಫೀಯನ್ನು ನಿಮ್ಮ ಹೆಂಡತಿ ಈಗಾಗಲೆ ಪೇ ಮಾಡಿದಾರೆ. ಟೇಕ್ ಕೇರ್, ನಾನಿನ್ನು ಬರ್ತೀನಿ.’
ಡಾ. ಪ್ರಕಾಶ್ ಎದ್ದು ನಿಧಾನವಾಗಿ ಹೊರ ನಡೆದರು. ಅವರು ಹೋದ ದಾರಿಯನ್ನೇ ನೋಡುತ್ತಾ ಡಾ. ನಾಗೇಂದ್ರ ಸುಮ್ಮನೆ ಕುಳಿತಿದ್ದರು.
ಸೌಜನ್ಯ :
"ಹೂದಳ"  ’ಕಾಯಿಲೆ’-ಜಿ. ಎಸ್. ಸತೀಶ್, ಹೊಸಕೆರೆ. ಮಯೂರ, ಏಪ್ರಿಲ್,  ೨೦೧೦, ಪುಟ. ೧೬೦( ಚಿತ್ರ : ಡಿ. ವಿ. ಸಾಂಗಳೇಕರ್)

’ಎಸ್.. ಬಾರಯ್ಯ’-ಗಡುಸಾದ ಧ್ವನಿಯಲ್ಲಿ ರೋಗಿಯನ್ನು ಒಳ ಕರೆದರು ಡಾ. ನಾಗೇಂದ್ರ. ಹಳ್ಳಿ ರೈತ ಮಾದಪ್ಪ ವಿನೀತನಾಗಿ ಕುರ್ಚಿಯ ಮೇಲೆ ಕೂತ.”ನಿನ್ ಹೆಸ್ರೇನು ?’ ಡಾಕ್ಟ್ರ  ಚೂಪು ಪ್ರಶ್ನೆಗೆ ’ಮಾದಪ್ಪ ಸಾ’ ಎಂದ ಹೆದರುತ್ತಲೇ ರೈತ. ’ಮೂರು ದಿನದಿಂದ ಒಂದೇ ಸಮನೆ ಕೆಮ್ಮು ಸಾ’, ಎಂದು ಮೆಲ್ಲನೆ ಉಸುರಿದ.

’ನಿಮ್ ಹಣೇಬರಹಾನೇ ಇಷ್ಟು. ದಿನಕ್ಕೆ ನಾಲ್ಕು ಕಟ್ಟು ಬೀಡಿ ಸೇದಿದ್ರೆ ಕೆಮ್ಮು-ದಮ್ಮು ಬರದೇ ಇರುತ್ತಾ ? ಮಾಡೋದೆಲ್ಲಾ ಮಾಡ್ಕೊಂಡು, ಕಡೆಗೆ ನಮ್ ಹತ್ರ ಬಂದು ಬದಿಕಿಸಿ ಸಾ... ಅಂತ ಬಡ್ಕೋತೀರಾ ನಿಮ್ ಗೆಲ್ಲಾ ಹೆಂಡ್ರು, ಮಕ್ಳು ಯಾತಕ್ರಯ್ಯಾ ?’

’... .”

’ಬರೀ ಕೆಮ್ಮು ಮಾತ್ರಾನಾ ? ಕಫಾನೂ ಬರುತ್ತೋ ? ಡಾಕ್ಟರ್ ಮತ್ತೆ ಗುಡುಗಿದರು. ಹೌದು ಸಾರ್,  ಕಫಾನೂ ಬರುತ್ತೆ’ ಮಾದಪ್ಪ ಹೇಳಿದ.’

ಈಗ ಕಫ ಬರುತ್ತೆ ನಂತರ ಬ್ಲಡ್ಡು ಬರುತ್ತೆ. ಆಮೇಲೆ ಬರುತ್ತೆ ಚಟ್ಟ’ ಅಂತ ಡಾಕ್ಟರ್ ಗಡಸು ದನಿಯಲ್ಲಿ ಹೇಳಿ, ಪ್ರಿಸ್ಕ್ರಿಪ್ಷನ್ ಹಾಳೆಯನ್ನು ಪರ್ರನೆ ಕಿತ್ತು ಏನೇನೋ ಮಾತ್ರೆಗಳ ಹೆಸರು ಬರೆದರು. ’ತಗೋ ಇಲ್ಲಿ ಬರ್ದಿರೋ ಮಾತ್ರೆಗಳನ್ನ ದಿನಕ್ಕೆ ಮೂರು ಹೊತ್ತು ಊಟವಾದ ಮೇಲೆ ನುಂಗು. ಅಲ್ಲಿ ನಮ್ಮ ರಿಸೆಪ್ಷನ್ ಹತ್ರ ಫೀಸು ಬಡಿದು ಹೋಗು’ ಎಂದರು.

ಮಾದಪ್ಪ ಕೂತಲ್ಲಿಂದ ಏಳಲಿಲ್ಲ. ತನ್ನ ಜೇಬಿನಿಂದ ಹಾಳೆಯೊಂದನ್ನು ತೆಗೆದುಕೊಂಡು ಏನನ್ನೋ ಬರೆಯತೊಡಗಿದ. ’ಏನಯ್ಯಾ ಅದು ?’ ಎಂದು ಡಾಕ್ಟರ್ ಕೋಪದಿಂದ ಕೇಳಿದರು.

’ಕ್ಷಮಿಸಿ ಸರ್. ನನ್ನ ಹೆಸರು ಮಾದಪ್ಪ ಅಲ್ಲ. ಡಾ. ಪ್ರಕಾಶ್ ಅಂತ. ನಾನೊಬ್ಬ ಸೈಕಿಯಾಟ್ರಿಸ್ಟ್. ನಿಮ್ಮ ಅತಿರೇಕದ ವರ್ತನೆಯಿಂದ ನಿಮ್ಮ ಬಳಿ ಬರುವ ರೋಗಿಗಳ ಸಂಖ್ಯೆ ಕಡಿಮೆಯಗಿದ್ದು,  ಈ ಬಗ್ಗೆ ಆತಂಕಗೊಂಡಿದ್ದ ನಿಮ್ಮ ಹೆಂಡತಿ ನನ್ನನ್ನು ಸಲಹೆ ಕೇಳಿದ್ದರು. ನಿಮ್ಮನ್ನು ಪರೀಕ್ಷಿಸಲು ನಾನು ಈ ವೇಷದಲ್ಲಿ ಬರಬೇಕಾಯಿತು. ನನಗೆ ನಿಮ್ಮ ಸಮಸ್ಯೆ ಏನೆಂದು ಈಗ  ತಿಳಿಯಿತು. ನೀವು ಜಿಎಡಿ (ಜನರಲೈಸ್ ಆಂಗ್ಸೈಟಿ ಡಿಸ್ ಆರ್ಡರ್) ನಿಂದ ಬಳಲುತ್ತಾ ಇದ್ದೀರಿ. ಇದು ವಿಕೋಪಕ್ಕೆ ಹೋದರೆ ತುಂಬಾ ಅಪಾಯ.  ನಾನು ಬರೆದಿರೋ ಈ  ಮಾತ್ರೆಗಳನ್ನು ಬೆಳಿಗ್ಯೆ ಮತ್ತು ರಾತ್ರಿ ಊಟವಾದ ನಂತರ ತೆಗೆದುಕೊಳ್ಳಿ. ಕನ್ಸಲ್ಟೇಷನ್ ಫೀಯನ್ನು ನಿಮ್ಮ ಹೆಂಡತಿ ಈಗಾಗಲೆ ಪೇ ಮಾಡಿದಾರೆ. ಟೇಕ್ ಕೇರ್, ನಾನಿನ್ನು ಬರ್ತೀನಿ.’

ಡಾ. ಪ್ರಕಾಶ್ ಎದ್ದು ನಿಧಾನವಾಗಿ ಹೊರ ನಡೆದರು. ಅವರು ಹೋದ ದಾರಿಯನ್ನೇ ನೋಡುತ್ತಾ ಡಾ. ನಾಗೇಂದ್ರ ಸುಮ್ಮನೆ ಕುಳಿತಿದ್ದರು.

* ಸೌಜನ್ಯ :"ಹೂದಳ"  ’ಕಾಯಿಲೆ’-ಜಿ. ಎಸ್. ಸತೀಶ್, ಹೊಸಕೆರೆ. ಮಯೂರ, ಏಪ್ರಿಲ್,  ೨೦೧೦, ಪುಟ. ೧೬೦( ಚಿತ್ರ : ಡಿ. ವಿ. ಸಾಂಗಳೇಕರ್)