ಕನ್ನಡದ ನೂತನ ಪದ "ಗಿಲ್ಲಾ"
ಸಾಮಾನ್ಯ ಭಾಷೆಯಲ್ಲಿ ಅನೇಕ ಪದಗಳು ಹುಟ್ಟುವುದು ಸಹಜ. ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ನೂತನ ಅನೇಕ ನೂತನ ಪದ ಜನ್ಮ ಪಡೆಯುತ್ತವೆ. ಬೆಂಗಳೂರಿನ ಕಡೆ "ಮಚ್ಚಿ" "ಮಗಾ" ಆದರೆ ಮಂಡ್ಯಾ ಕಡೆ " ಬಡ್ಡೆ ಹತ್ತದೇ" ಅದೇ ಮೈಸೂರು ಶಿವಮೊಗ್ಗದ ಕಡೆಗೆ "ಏನಮ್ಮಾ" ಈ ರೀತಿಯಾಗಿ ಆಡು ಭಾಷೆಗಳಾಗಿ ಹುಟ್ಟಿಕೊಳ್ಳುತ್ತದೆ. ಅದೇ ಇನ್ನು ಬಯಲು ಸೀಮೆ ಕಡೆಗೆ ಹೋದರೆ ಅದು ಬೈಗಳವೋ ಅಥವಾ ಹೊಗಳಿಕೆಯೋ ಎನ್ನುವುದೇ ತಿಳಿಯುವುದಿಲ್ಲ. ಅವರುಗಳು ಯಾವುದೇ ಒಂದಕ್ಕೂ "ಹುಚ್ಚ ಸೊಳೆಮಗ" ಬಳಸುವುದು ಸಾಮಾನ್ಯ. ಇತ್ತೀಚೆಗೆ ಶಿಕಾರಿಪುರದಲ್ಲಿ ಒಂದು ನೂತನ ಪದದ ಅವಿಷ್ಕಾರವಾಗಿದೆ ಅದೇ "ಗಿಲ್ಲಾ". ಇದನ್ನು ತಮಾಷೆ ಮಾಡುವವರಿಗೆ, ಕೀಟಲೆ ಮಾಡುವವರಿಗೆ ಅಥವಾ ಹೆಚ್ಚಿನ ಮಟ್ಟದ ತರಲೆ ಮಾಡುವವರಿಗೆ ಬಳಸಲಾಗುತ್ತಿದೆ. ಬೇರೆ ಕಡೆ ಎಲ್ಲಿ ಹೊಸ ಪದ ಹುಟ್ಟುತ್ತದೋ ಗೊತ್ತಿಲ್ಲ. ಆದರೆ ಶಿಕಾರಿಪುರದಲ್ಲಿ ಮಾತ್ರ ಬಸ್ ನಿಲ್ದಾಣದಲ್ಲಿ ಜನನ ಪಡೆಯುತ್ತದೆ. ಇತ್ತೀಚೆಗೆ ಬಸ್ ಏಜೆಂಟನೊಬ್ಬ ಬೇರೆ ಕಡೆಯಿಂದ ಬಂದ ಪ್ರಯಾಣನಿಕನಿಗೆ ಚಿಲ್ಲರೆ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ಅವನು ನನ್ನ ಹತ್ತಿರ ಇಲ್ಲಾ ಎಂದಾಕ್ಷಣ ಏಜೆಂಟ್ " ಇವೆಲ್ಲಾ ಗಿಲ್ಲಾ ಬೇಡ ಮುಚ್ಚುಕೊಂಡು" ಚಿಲ್ಲರೆ ಕೊಡು ಎಂದಿದ್ದಾನೆ. ಅದಕ್ಕೆ ಆತ ಇದು ಏನೋ ಬೈಗುಳ ಇರಬೇಕೆಂದು ಜಗಳಕ್ಕೆ ಇಳಿದಿದ್ದು ನೆರದವರಲ್ಲಿ ಪ್ರಶ್ನೆ ಮೂಡಿಸಿತ್ತು.
ಇತ್ತೀಚಗೆ ಪಟ್ಟಣದ ರಂಗಮಂದಿರದಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳ ಸಭೆ ಏಪFಟ್ಟಿತ್ತು. ಆಗ ಶಿಕಾರಿಪುರದ ಪ್ರಬುದ್ದ ರಾಜಕಾರಣಿ ಕಾಯFಕತFರು ಜನರ ಬಳಿ ಹೆಚ್ಚಿನ ಮಟ್ಟದ ಗಿಲ್ಲಾ ಮಾಡದೆ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದರು. ವೇದಿಕೆಯಲ್ಲಿದ್ದ ಇತರೆ ತಾಲ್ಲೂಕಿನ ಮುಖಂಡರು ಕಕ್ಕಾಬಿಕ್ಕಿ. ಪತ್ರಕತFರು ಈ ಪದಕ್ಕೆ ಏನು ಬರೆದುಕೊಳ್ಳಬೇಕೆಂದು ಯೋಚಿಸುತ್ತಾ ತಲೆ ಕೆರದುಕೊಳಿತಿದ್ದು ಕಂಡು ಬಂದಿತು. ಏನಿದು ಗಿಲ್ಲಾ. ಇದೇ ರೀತಿ ಗಿಲ್ಲಾಪದ ಎಷ್ಟರ ಮಟ್ಟಿಗೆ ಪ್ರಸಿದ್ದಿ ಪಡೆದಿದೆ ಎಂದರೆ ಸಾಹಿತ್ಯ ಪರಿಷತ್ ನ ಹಲವರು ಕೂಡ ಇದನ್ನು ಬಳಸುತ್ತಿರುವುದು ಆಶ್ಚಯFವಾಗಿದೆ. ಹುಡುಗರಂತೂ ಈ ಪದವನ್ನು ಬಳಸುವುದು ಸಾಮಾನ್ಯವಾಗಿದೆ. ಬಹಳ ತಮಾಷೆಯೆಂದರೆ ಹಿರಿಯರು ಕೂಡ ಈ ಪದಕ್ಕೆ ಮೊರೆ ಹೋಗಿರುವುದು ಮತ್ತಷ್ಟು ಆಶ್ಚಯFಕರವಾಗಿದೆ. ಹಾಗಾದರೆ ಈ ಪದ ಈ ಮುಂಚೆ ಇತ್ತಾ ಎನ್ನುವ ಪ್ರಶ್ನೆ ಮೂಡುತ್ತದೆ. ಇದನ್ನು ಕನ್ನಡ ನಿಘಂಟಿಗೆ ಸೇರಿಸಿದರೆ ಹೇಗಿರುತ್ತದೆ ಎನ್ನುವ ಚಚೆF ಶಿಕಾರಿಪುರದ ಹಲವರಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕವಿಗಳು ಈ ಪದವನ್ನು ಬಳಸಿ ಪದ್ಯಗಳನ್ನು ಬರೆದರೂ ಆಶ್ಚಯFವಿಲ್ಲ. ಆ ಗೀತೆ ಹೀಗಿರಬಹುದಾ " ಪ್ರಿಯೆ ನಿನ್ನ ಗಿಲ್ಲಾದಿಂದ ನಾನು ಮನ ಸೋತು ಹೋದೆ. ಆದರೆ ನಿಮ್ಮಪ್ಪ ಮಾಡುವ ಗಿಲ್ಲಾದಿಂದ ನನಗೆ ಕೋಪ ಹೆಚ್ಚಾಗಿ. ಮತ್ತೊಬ್ಬ ಸಾಮಾನ್ಯವಾಗಿ ಗಿಲ್ಲಾ ಮಾಡುವ ಮಾವನನ್ನು ಹುಡಿಕಿಕೊಳ್ಳುತ್ತೇನೆ ಡಾಲಿಂಗ್" ಎಂದರೆ ಹೇಗೆ. ಒಟ್ಟಾರೆಯಾಗಿ ಇದರ ಕತೃವಿಗೆ ಒಂದು ದೊಡ್ಡ ನಮಸ್ಕಾರ ಹಾಕಬೇಕು ಅನ್ನಿಸುವುದಿಲ್ಲವಾ.