ಟಿವಿ ಧಾರವಾಹಿ ನಿದೇFಶಕರು ಹೀಗೆ ಏಕೆ ಆಡುತ್ತಾರೆ

ಟಿವಿ ಧಾರವಾಹಿ ನಿದೇFಶಕರು ಹೀಗೆ ಏಕೆ ಆಡುತ್ತಾರೆ

ಬರಹ

 

ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಡಿಪ್ಲೊಮೊ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ದಿನಗಳಲ್ಲಿ ಕಲಾಕ್ಷೇತ್ರದ ನಂಟು ಬೆಳೆಯಿತು. ಈಗಿನ ಧಾರವಾಹಿಯಲ್ಲಿ ನಟಿಸುತ್ತಿರುವ ಬಂಡಿ ವೆಂಕಟೇಶ, ತೇಜಸ್ವಿನಿ,ಮಲ್ಲಿಕಾಜುF, ದುನಿಯಾ ವಿಜಿ,ಆನಂದ್, ಶ್ರೀನಿವಾಸ್ ಕೆಂಪ್ತೂರು ಸೇರಿದಂತೆ ಹಲವರ ಸ್ನೇಹವಾಯಿತು. ಕವಲುದಾರಿಯ ಒಂದು ಪ್ರಸಂಗ ಸಹಾಯಕ ನಿದೇFಶಕ ಶ್ರೀನಗರ ಚಂದ್ರು ಅಂದು ಉಸ್ತುವಾರಿ ವಹಿಸಿಕೊಂಡಿದ್ದರು. ನಾಗೇಶ ಮಯ್ಯಾನ ಅಸಿಸ್ಟೆಂಟ್ ಕ್ಯಾರೆಕ್ಟರ್. ಚಂದ್ರು ಮಯ್ಯಾನಿಗೆ ಕಣ್ಣು ಸನ್ನೆ ಮಾಡಿ ನನಗೆ ಜೋರಾಗಿ ಹೊಡೆಯಲು ಹೇಳಿದರು. ಮಯ್ಯಾ ಅವರು ಹೇಳಿದಂತೆ ನಡೆದುಕೊಂಡ. ಅದೇ ನಾನು ತಿರುಗಿಸಿ ಮಯ್ಯಾನಿಗೆ ಹೊಡೆದು ಅವನ ಮಾನ ಕಳೆಯ ಬಹುದಾಗಿತ್ತು. ಆದರೆ ಹಿರಿಯ ನಟ ಎನ್ನುವ ಗೌರವ ಇದ್ದುದರಿಂದ ಸುಮ್ಮನಾದೆ. ಮಯ್ಯಾ ಧಾರವಾಹಿಗೆ ಬಂದಾಗ ಆತನ ಸಹನಟರು ಹೀಗೆ ಮಾಡಿದ್ದರೆ ಆತ ಇವತ್ತು ಇಂಡಸ್ಟ್ರಿಯಲ್ಲಿ ಇರುತ್ತಲೇ ಇರಲಿಲ್ಲ. ಇವರೆಲ್ಲಾ ಇಷ್ಟಕ್ಕೇ ಸೀಮಿತ ಎಂದು ಷೂಟಿಂಗ್ ಮುಗಿಸಿ ಮನೆಗೆ ಹಿಂತಿರುಗಿದೆ.

 ಅಂದು ಮುಖ್ಯ ನಿದೇFಶಕ ಸುಶೀಲ್ ಮೊಕಾಶಿ ಬಂದಿದ್ದರು. ನನ್ನನ್ನು ನೋಡಿ ಏನೋ ಹೀರೋ ಪಾತ್ರ ಮಾಡ್ತೀಯಾ. ಬಾ ನಿನಗೆ ಇದೆ ಎಂದರು. ಡೈಲಾಗ್ ಷೀಟ್ ನಲ್ಲಿ ಇಲ್ಲದೇ ಹೋದ ಡೈಲಾಗ್ ಗಳನ್ನು ನನ್ನಿಂದ ಹೇಳಿಸಿದರು. ಆತನ ವಿಕೃತ ಮನಸ್ಸು ನೋಡಿ ನನಗೆ ಇಂತವರು ಇರುತ್ತಾರಾ ಎನ್ನಿಸಿತು. ಮಣಿಪಾಲ್ ಎಂಟರ್ ಟೈನರ್ಸ್ ಕಿಲಾಡಿ ತಾತಾ ಎಂಬ ಧಾರವಾಹಿಗೆ ಕರೆ ಬಂತು. ಅಲ್ಲಿನ ನಿದೇFಶಕ ಸುನೀಲ್ ಪುರಾಣಿಕ್ ಎಂಬ ಮಹಾನ್ ನಿದೇFಶಕ. ಹಿರಿಯ ನಟ ಶಿವರಾಂ ಒಬ್ಬರನ್ನು ಬಿಟ್ಟು ಮಿಕ್ಕವರೆಲ್ಲರಿಗೂ ಈತ ಬಳಸಿದ್ದು ಶುದ್ದ ಸಂಸ್ಕೃತ ಪದಗಳನ್ನೇ. ಅಂದು ಈತ ನನಗೆ ಏನೋ ಅಂದ ಎಂದು ಜಗಳವಾಡಿ ವಾಪಾಸ್ಸಾಗಿದ್ದೆ. ವಠಾರ ಧಾರವಾಹಿಯಲ್ಲಿ ಅಮರದೇವ ನಿದೇFಶಕ ಕೂಡ ಇದೇ ರೀತಿಯ ಮನಸ್ಸಿನವರು ಎನ್ನುವುದು ಕೂಡ ಅನುಭವವಾದ ಮೇಲೆ ತಿಳಿಯಿತು. ಇದರ ಬಗ್ಗೆ ನಾಗತ್ತಿಹಳ್ಳಿ ಗಮನಹರಿಸುವುದಿಲ್ಲವಾ ಎಂದು ಅಲ್ಲಿನ ಒಬ್ಬರನ್ನು ಕೇಳಿದೆ. ಅದಕ್ಕೆ ಆತ ಪ್ರತಿಕ್ರಿಯಿಸಿದ್ದು ಅವರು ಸೆಟ್ಗೆ ಬರುವುದು ಕಡಿಮೆ ಎಂದು. ಈವರೆಗೆ ಅದರ ಮತ್ತು ಪುಣ್ಯ ಧಾರವಾಹಿಯ ಪೇಮೆಂಟ್ ಕೂಡ ಬಂದಿಲ್ಲ. ದುನಿಯಾ ವಿಜಿ ಮತ್ತು ಮಲ್ಲಿ ದರಿದ್ರ ಲಕ್ಷ್ಮಿಯರು ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದರು. ಲೇ ಯಾವನೋ ಇವನನ್ನು ಕರೆ ತಂದಿದ್ದು ಎಂದು ಫಣಿಯ ಅರೆಚಾಟ ನೋಡಿದ ನನಗೆ ಥೂತ್ತರಿಕೆ ಧಾರವಾಹಿಯ ಸಹವಾಸವೇ ಬೇಡ ಎಂದೆನ್ನಿಸಿತ್ತು. ಹಿರಿಯ ನಟ ಶ್ರೀನಿವಾಸ ಮೂತಿF ಧಾರವಾಹಿ ಮಾಡ್ತಾರಂತೆ ನೀನೂ ಬಾ ಎಂದು ದುನಿಯಾ ವಿಜಿ ಮತ್ತು ಮಲ್ಲಿ ಬಲವಂತ ಮಾಡಿದರು. ಯಾರೋ ಒಬ್ಬರು ಹೇಳಿದ್ದರು ಶ್ರೀನಿವಾಸ ಮೂತಿF ಸೆಟ್ ನಲ್ಲಿ ಮನುಷ್ಯತ್ವಕ್ಕೂ ಮೀರಿ ವತಿFಸುತ್ತಾರೆ ಅಂತ, ವಿಜಿ ಹಾಗೂ ಮಲ್ಲಿಗೆ ಡಯಲಾಗ್ ಷೀಟ್ ನೀಡಿ ಸ್ಕ್ರೀನ್ ಟೆಷ್ಟ್ ಮಾಡಿದರು. ವಿಜಿಗೆ ಕನ್ನಡ ಶುದ್ದವಿಲ್ಲ. ಮಲ್ಲಿಗೆ ನಂತರ ಪಾತ್ರ ಕೊಡುವುದಾಗಿ ಹೇಳಿದರು. ಇವೆಲ್ಲಾ ನಮಗೆ ಸಿಗಲ್ಲಾ ಬನ್ರೋ ಎಂದು ವಾಪಾಸ್ಸು ಕರೆದುಕೊಂಡು ಬಂದಿದ್ದೆ.

ಆದರೆ ನನಗೆ ಇಷ್ಟವಾದ ನಿದೇFಶಕ ನಿಖಿಲ್ ಗೌಡ, ಸವಿಗಾನ ಧಾರವಾಹಿ ಷೂಟಿಂಗ್ ನಡೆಯುತ್ತಿತ್ತು. ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ. ಕರೆದು ಸವಿಗಾನ ಧಾರವಾಹಿಯುಲ್ಲಿ ಒಂದು ಉತ್ತಮ ಅವಕಾಶ ನೀಡಿದ ವ್ಯಕ್ತಿ. ಆತ ನಮ್ಮನ್ನು ಸ್ನೇಹಿತರಂತೆ ಕಾಣುವುದು ಮಾತ್ರವಲ್ಲದೆ ಪ್ರತಿ ಬಾರಿಯ ಸೀನ್ ಮುಗಿದಾಗ ಚಪ್ಪಾಳೆ ತಟ್ಟುವುದರ ಮುಲಕ ಪ್ರೋತ್ಸಾಹಿಸುತ್ತಿದ್ದರು. ಇದು ಒಬ್ಬ ನಿದೇFಶಕನಿಗೆ ಇರಬೇಕಾದ ನೈಜ ಗುಣ ಆತನಲ್ಲಿತ್ತು. ಹಲವಾರು ಗ್ರಾಮಗಳಿಂದ ನಟನಾಗಬೇಕು ಎಂಬ ಕನಸಿನೊಂದಿಗೆ ಯುವಕರು ಬೆಂಗಳೂರಿಗೆ ಬಂದಿರುತ್ತಾರೆ. ಅಂತವರಿಗೆ ತರಹದ ಅಥವಾ ಹೆಚ್ಚಿನ ಅವಮಾನ ಮಾಡಿದರೆ ಅವರ ಪರಿಸ್ಥಿತಿ ಏನಾಗಬೇಡ. ಬುದ್ದಿ ಭ್ರಮಣೆಯಾಗಬಹುದು ಅಥವಾ ಆತ್ಮಹತ್ಯೆಯೇ ಮಾಡಿಕೊಳ್ಳಬಹುದು. ಅಂದು ದುನಿಯಾ ವಿಜಿಗೆ ಬೈದವರು ಆಡಿಕೊಂಡವರು ಇಂದು ಆಡಿಕೊಳ್ಳಲಿ ನೋಡೋಣ. ಸಾಧ್ಯವಿಲ್ಲ. ಕಲೆ ತೆಗೆಯುವ ಕೆಲಸವೇ ನಿದೇFಶಕನದ್ದು. ಅದನ್ನು ಆತನಿಗೆ ಮಾಡಲು ಬರುವುದಿಲ್ಲ ಎಂದರೆ ಆತ ಅನ್ ಫಿಟ್ ಅಂತ. ನಾನು ಬರೆದ ಲೇಖನದಿಂದ ಕೆಲವರಾದರೂ ಸ್ವಲ್ಪ ಮಟ್ಟಿನ ಬದಲಾವಣೆ ಕಂಡರೆ ಅಷ್ಟೇ ಸಾಥF.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet