ಹುಚ್ಚರಾಯಸ್ವಾಮಿ ಜಾತ್ರೆಗೆ ತಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ

ಹುಚ್ಚರಾಯಸ್ವಾಮಿ ಜಾತ್ರೆಗೆ ತಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ

ಬರಹ

ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇದನ್ನು ವ್ಯಾಸರಾಯರು ಪ್ರವಾಸ ಸಂದಭðದಲ್ಲಿ ಶಿಕಾರಿಪುರಕ್ಕೆ ಬಂದಾಗ ಹುಚ್ಚರಾಯ ಎಂಬುವರಿಂದ ನಿವೇಶನ ಪಡೆದ ಮೂಲ ದೇವರಾದ ಆಂಜನೇಯನ್ನು ಪ್ರತಿಷ್ಠಾಪಿಸಿದರು. ಹುಚ್ಚರಾಯ ನಿವೇಶನ ನೀಡಿದ ಕಾರಣ ಆಂಜನೇಯ ಹುಚ್ಚರಾಯನಾದ. ವಿಗ್ರಹದ ವಿಶೇಷತೆ ಏನೆಂದರೆ ಇದು ದೊರೆತಿದ್ದು ದೇವಸ್ಥಾನದ ಸಮೀಪದ ಕೆರೆಯಲ್ಲಿ (ಹುಚ್ಚರಾಯ ಸ್ವಾಮಿ ಕೆರೆ), ಆದರೆ ಇದರ ಮೂಗು ಮುರಿದಿದ್ದ ಕಾರಣ ಹಿಮಾಲಯದಿಂದ ಸಾಲಿಗ್ರಾಮದ ಮೂಗೊಂದನ್ನು ತಂದು ಜೋಡಿಸಲಾಯಿತು ಎನ್ನುವುದು ಪ್ರತೀತಿ. ಈಗಲೂ ಮೂಲ ವಿಗ್ರಹಕ್ಕೂ ಮೂಗಿಗೂ ವ್ಯತ್ಯಾಸ ಕಾಣಬಹುದಾಗಿದೆ. ಹುಚ್ಚರಾಯನಿಗೆ ಭ್ರಾಂತೇಶ ಎಂದೂ ಕರೆಯುತ್ತಾರೆ. ಹಿರೇಕೇರೂರು ತಾಲ್ಲೂಕಿನ ಸಾತೇನಹಳ್ಳಿಯ ಸಾಂತೇಶ, ಕದರಲಮಂಡಗಿಯ ಕಾಂತೇಶ ಹಾಗೂ ಶಿಕಾರಿಪುರದ ಭ್ರಾಂತೇಶನನ್ನು ಒಂದೇ ದಿನ ಅದರಲ್ಲೂ ಶ್ರಾವಣ ಮಾಸದಲ್ಲಿ ನೋಡಿದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ ಎಂದು ಹಿರಿಯರು ನುಡಿಯುತ್ತಾರೆ.

ಇಲ್ಲಿನ ಹುಚ್ಚರಾಯನಿಗೆ ದೇಶಾದ್ಯಂತ ಭಕ್ತರಿದ್ದಾರೆ.ð ವಿಧಿ ವಿಧಾನಗಳನ್ನು ಸಲ್ಲಿಸಿ ನಂತರ ಅವರ ಅಭಿಮಾನಿಗಳೊಂದಿಗೆ ತಾಲ್ಲೂಕು ಕಚೇರಿಗೆ ತೆರಳುತ್ತಾರೆ. ಇಷ್ಟೆ ಅಲ್ಲದೆ ಅವರು ಮತ ಚಲಾಯಿಸುವ ಮುನ್ನವೂ ದೇವಸ್ಥಾನಕ್ಕೆ ಮೊದಲ ಭೇಟಿ. ರಾಜಕೀಯದಲ್ಲಿ ಯಾವುದೇ ಉನ್ನತ ಸ್ಥಾನ ದೊರೆತಾಗಲೂ ತಮ್ಮ ಕುಟುಂಬವಗðದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಪ್ರತಿ ಚೈತ್ರ ಶುದ್ದ ಹುಣ್ಣಿಮೆಯಂದು (ಮಾಚ್ð ಅಥವಾ ಏಪ್ರಿಲ್ ತಿಂಗಳಿನಲ್ಲಿ) ನಡೆಯುವ ಇತಿಹಾಸ ಪ್ರಸಿದ್ದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಯಡಿಯೂರಪ್ಪ ಎಲ್ಲಿದ್ದರೂ ಹಾಜರಾಗುತ್ತಾರೆ. ಸ್ವಾಮಿಯ ಆರೋಹಣದ ಕಾಯðಕ್ರಮದಲ್ಲಿ ಭಾಗವಹಿಸಿ ನಂತರ ತಮ್ಮ ಮುಂದಿನ ಕಾಯðಗಳಿಗೆ ತೆರಳುವುದು ಅವರ ಅಭ್ಯಾಸವಾಗಿದೆ. ಕಳೆದ ಸಾಲಿನಲ್ಲಿ ಮಾರನೆಯ ದಿನವೇ ಬಜೆಟ್ ಇದ್ದರೂ ಯಡಿಯೂರಪ್ಪ ಬೆಳಗ್ಗೆ ರಥೋತ್ಸವ ಕಾಯðಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರಲ್ಲಿ ಆಶ್ಚಯð ಮೂಡಿಸಿತ್ತು. ಒಮ್ಮೆ ಕಾಂಗ್ರೆಸ್ನ ಶಾಸಕ ಮಹಾಲಿಂಗಪ್ಪ ಗೆದ್ದಾಗಲೂ ರಥದ ಕೆಳ ನಿಂತೇ ಸ್ವಾಮಿಯ ಆರೋಹಣ ಕಾಯðಕ್ರಮದಲ್ಲಿ ಭಾಗವಹಿಸಿದ್ದು ಅವರ ದೇವರ ನಂಬಿಕೆ ಸಾಕ್ಷಿಯಾಗಿತ್ತು. ಅವರು ಮುಖ್ಯಮಂತ್ರಿಯಾದ ನಂತರ ಲಕ್ಷಾಂತರ ವೆಚ್ಚದಲ್ಲಿ ನೂತನ ದೇವಸ್ಥಾನ ಕಟ್ಟಡ ನಿಮಾðಣವಾಗಿದೆ. ಕಳಶ ಸ್ಥಾಪನೆಯನ್ನು ತಾವೇ ಖುದ್ದಾಗಿ ನಿಂತು ಕೂಡಲಿ ಶ್ರೀಗಳಿಂದ ನೆರವೇರಿಸಿದ್ದರು. ಆಗ ಅವರು ವಿರೋಧ ಪಕ್ಷದ ನಾಯಕ.. ಇದೀಗ ಕಲ್ಯಾಣ ಮಂಟಪ ಹಾಗೂ ಪೌಳಿಯ ನಿಮಾðಣವಾಗುತ್ತಿದೆ. ಇಷ್ಟೆ ಅಲ್ಲದೆ ಹತ್ತಿರದಲ್ಲಿರುವ ಹುಚ್ಚರಾಯಸ್ವಾಮಿ ಕೆರೆ ಕೋಟ್ಯಾಂತರ ರೂಗಳ ವೆಚ್ಚದಲ್ಲಿ ಆಧುನೀಕರಣಗೊಂಡಿದೆ. ಸುಮಾರು 80ಅಡಿಯಷ್ಟು ಎತ್ತರದ ಈಶ್ವರನ ವಿಗ್ರಹ , ಸಂಗೀತ ಕಾರಂಜಿ, ಯಾತ್ರಿ ನಿವಾಸ ಸೇರಿದಂತೆ ಹಲವು ಅಭಿವೃದ್ದಿ ಕಾಯðಗಳು ಆಗಿದ್ದು, ಬಂದಂತಹ ಭಕ್ತರು ಪ್ರವಾಸಕ್ಕೆ ಬಂದಂತೆ ಬಂದು ಹೋಗಬಹುದಾಗಿದೆ. ಇದನ್ನು ಪ್ರವಾಸಿ ತಾಣವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಯಡಿಯೂರಪ್ಪ ನನಸಾಗಿಸಿದ್ದಾರೆ. ಅದಕ್ಕೆ ಯಡಿಯೂರಪ್ಪನವರು ಎಷ್ಟೇ ಪ್ರವಾಸ ಮಾಡಿದರೂ ಎಂತಹ ಸಮಸ್ಯೆ ಬಂದರೂ ಇಲ್ಲಿನ ಹುಚ್ಚರಾಯಪ್ಪ ಕಾಪಾಡುತ್ತಾನೆ ಎನ್ನುವುದು ಅವರ ಕುಟುಂಬ ವಗðದವರ ಅಭಿಪ್ರಾಯವಾಗಿದೆ. ನೀವೂ ಬನ್ನಿ ಹುಚ್ಚರಾಯನನ್ನು ಒಮ್ಮೆ ನೋಡಿ.